ಬೀದರ – ಸ್ವಾತಂತ್ರ್ಯ ದಿನದಂದು ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದೆ ಇರುವದು ಒಂದು ಚಿಕ್ಕ ತಪ್ಪು ಎಂದು ಹೇಳಿದ ಲೀಡ್ ಬ್ಯಾಂಕ್ ಅಧಿಕಾರಿಯ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಇಡಿ ರಾಷ್ಟ್ರವೇ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ ಬೀದರ ಜಿಲ್ಲೆಯ ಔರಾದ ಪಟ್ಟಣದಲ್ಲಿನ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಅಧಿಕಾರಿಗಳು ತಮ್ಮ ಕಚೇರಿ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡದೆ ಇರುವುದನ್ನು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ.
ಧ್ವಜಾರೋಹಣ ಮಾಡದೆ ಇರುವ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದಾಗ ಅವರು ಸ್ಥಳಕ್ಕೆ ಬರದೆ ಧ್ವಜಾರೋಹಣ ಮಾಡದೆ ಇರುವದು ಒಂದು ಚಿಕ್ಕ ತಪ್ಪು ಅದನ್ನು ಬೆಳೆಸಬೇಡಿ ಎಂಬ ಬೇಜವಬ್ದಾರಿ ಹೇಳಿಕೆ ನೀಡಿದ್ದು ಕನ್ನಡ ಸಂಘಟನೆಗಳ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿತು.
ತಕ್ಷಣವೇ ದೂರು ನೀಡಿದ ಕಾರ್ಯಕರ್ತರು ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡದೆ ನಮ್ಮ ರಾಷ್ಟ್ರಕ್ಕೆ ಅವಮಾನ ಮಾಡಿದ ಅಧಿಕಾರಗಳ ವಿರುದ್ದ ಕ್ರಮ ಕೈಗೊಳ್ಳುವವರೆಗೆ ಬ್ಯಾಂಕ್ ಎದುರು ಧರಣಿ ನಡೆಸುವುದಾಗಿ ಹೇಳಿದರು. ನಮ್ಮ ನೆಲದಲ್ಲಿ ಉಳಿದು ನಾವು ಕಟ್ಟುವ ತೆರಿಗೆ ಹಣದಿಂದ ಸಂಬಳಪಡೆದ ಅಧಿಕಾರಿಗಳು ನಮ್ಮ ರಾಷ್ಟ್ರ ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದಾರೆ ಅವರಿಗೆ ಈ ನೆಲದಮೇಲೆ ಜೀವಸುವದಕ್ಕೂ ಅರ್ಹತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ