ಧಾರವಾಡ: ರಾಜ್ಯದ ಎಲ್ಲಾ ೧೩ ಆಕಾಶವಾಣಿ ಕೇಂದ್ರಗಳಿಂದ ನಾಳೆ ಬೆಳಗ್ಗೆ ೭ ಗಂಟೆ ೧೫ ನಿಮಿಷಕ್ಕೆ ಏಕಕಾಲಕ್ಕೆ ಪ್ರಸಾರವಾಗುವ ಸಮಗ್ರ ಶಿಕ್ಷಣ ಸಂಚಲನ ಸರಣಿ ಕಾರ್ಯಕ್ರಮದಲ್ಲಿ ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ನಿರ್ದೇಶಕಿ ಮಮತಾ ನಾಯಕ ಅವರೊಂದಿಗೆ ‘ಶಿಕ್ಷಣ ಇಲಾಖೆಯಲ್ಲಿರುವ ಆನ್ ಲೈನ್ ಸೇವೆಗಳು’ ಎಂಬ ವಿಷಯ ಕುರಿತ ಸಂವಾದ ಪ್ರಸಾರವಾಗಲಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಪ್ರಾಯೋಜಕತ್ವದಲ್ಲಿ ರೂಪಿಸಿರುವ ಈ ಕಾರ್ಯಕ್ರಮವು ನ.೧೯ ರಂದು ಬೆಳಿಗ್ಗೆ ೯ ಕ್ಕೆ ಬೆಂಗಳೂರಿನ ೧೦೧.೩ ಎಫ್.ಎಂ. ರೇನ್‌ಬೋ ವಾಹಿನಿಯಲ್ಲಿಯೂ ಪ್ರಸಾರವಾಗಲಿದ್ದು, ‘ಆಲ್ ಇಂಡಿಯಾ ರೇಡಿಯೋ ಬೆಂಗಳೂರು’ ಯುಟ್ಯೂಬ್‌ದಲ್ಲಿಯೂ ಇದನ್ನು ಆಲಿಸಬಹುದು.
ಜೊತೆಗೆ “ನ್ಯೂಸ್ ಆನ್ ಎ.ಐ.ಆರ್” ಆ್ಯಪ್ ಡೌನ್ ಲೋಡ್ ಮಾಡುವ ಮೂಲಕ ನೇರವಾಗಿ ಮೊಬೈಲ್ ಮೂಲಕವೂ ಈ ಆಕಾಶವಾಣಿ ಸಂವಾದ ಕಾರ್ಯಕ್ರಮ ಆಲಿಸಬಹುದಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಎಲ್ಲಾ ಹಂತಗಳ ಅಧಿಕಾರಿಗಳು ಸೇರಿದಂತೆ
ಎಲ್ಲ ಭಾಗಿದಾರರು ಈ ಮಹತ್ವದ ಕಾರ್ಯಕ್ರಮವನ್ನು ಆಲಿಸುವಂತೆ ಸೂಚಿಸಲಾಗಿದೆ.