ಬೆಂಗಳೂರು: ನಗರದ ಪ್ರತಿಷ್ಠಿತ ವಿಜಯ ಕಾಲೇಜು ಆರ್ ವಿ ರಸ್ತೆ ಹಾಗು ಬೆಂಗಳೂರು ಕಾನೂನು ಅದ್ಯಯನ ಸಂಸ್ಥೆ ಸಹಯೋಗದಲ್ಲಿ ದಿನಾಂಕ 21.7.23 ಶುಕ್ರವಾರ ಬಸವನಗುಡಿಯ ಆರ್ ವಿ ರಸ್ತೆಯ ವಿಜಯ ಕಾಲೇಜೀನಲ್ಲಿ ಬೌದ್ಧಿಕ ಆಸ್ತಿಯ ಹಕ್ಕುಗಳು ವಿಷಯದ ಬಗ್ಗೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ದಿನಾಂಕ 21.7.23 ಬೆಳಿಗ್ಗೆ 9.30 ನಿಮಿಷಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಉಪ ಆಯುಕ್ತ ಪ್ರೊ. ಕೆ.ರಾಮಕೃಷ್ಣ ರೆಡ್ಡಿ ಅವರು ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡುವರು.
ಬೌಧ್ಧಿಕ ಆಸ್ತಿಯ ಹಕ್ಕುಗಳು ವಿಷಯದ ತಜ್ಞ ಟಿ. ಎಸ್. ಶ್ರೀಧರ್ ಅವರು ಆಶಯ ಭಾಷಣವನ್ನು ಮಾಡುವರು. ಬಿ.ಹೆಚ್. ಎಸ್. ಉನ್ನತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ ವಿ ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಚಾರ ಸಂಕಿರಣದ ಸಂಚಾಲಕಿ ಡಾ. ಬಿ. ಪಿ. ನೇತ್ರಾವತಿ ಅವರು ತಿಳಿಸಿದ್ದಾರೆ.
ವಿಚಾರ ಸಂಕಿರಣದಲ್ಲಿ ಅನೇಕ ವಿದ್ವಾಂಸರುಗಳು ತಮ್ಮ ವಿದ್ವತ್ ಪೂರ್ಣವಾದ ವಿಚಾರಗಳನ್ನು ಮಂಡಿಸಲಿದ್ದಾರೆ.
ವಿಚಾರ ಸಂಕಿರಣದ ಸಮಾರೋಪ ಸಮಾರಂಭವು 21.7.23 ಸಂಜೆ ಆಯೋಜಿಸಲಾಗಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರೊ. ವಿ ಸಂದೇಶ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಬಿ ಹೆಚ್. ಎಸ್. ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್. ಬಿ. ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಿಚಾರ ಸಂಕಿರಣದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ನಾಡಿನ ಖ್ಯಾತ ಶಿಕ್ಷಣ ತಜ್ಞ ಡಾ. ಕೆ ಎಸ್ ಸಮೀರ ಸಿಂಹ ಅವರು ಗೌರವ ಅತಿಥಿಗಳಾಗಿ ಎಂದು ಸಂಕೀರ್ಣದ ಉಪ ಸಂಚಾಲಕರಾದ ಡಾ. ಗೋಪಾಲ ಕೃಷ್ಣ ಅವರು ತಿಳಿಸಿದ್ದಾರೆ.