ಸಿಂದಗಿ: ಪಟ್ಟಣದ ಸಿ.ಎಮ್. ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಏಕವಲಯ ಅಂತರ್ ಕಾಲೇಜುಗಳ ಪುರುಷ ಹಾಗೂ ಮಹಿಳಾ ಕುಸ್ತಿ ಸ್ಪರ್ಧೆಗಳು ಇದೇ ದಿ. 17 ಮತ್ತು 18 ರಂದು ಪಟ್ಟಣದ ಸಿ.ಎಂ.ಮನಗೂಳಿ ಕಾಲೇಜು ಆವರಣದಲ್ಲಿ ನಡೆಯಲಿವೆ ಎಂದು ಪ್ರಾಚಾರ್ಯ ಡಾ. ಬಿ.ಜಿ.ಪಾಟೀಲ ತಿಳಿಸಿದರು.
ಪಟ್ಟಣದ ಸಿ.ಎಂ.ಮನಗೂಳಿ ಕಾಲೇಜಿನ ಸಭಾ ಭವನದಲ್ಲಿ 17 ಮತ್ತು 18 ರಂದು ನಡೆಯುವ ಏಕವಲಯ ಅಂತರ್ ಕಾಲೇಜುಗಳ ಪುರುಷ ಹಾಗೂ ಮಹಿಳಾ ಕುಸ್ತಿ ಸ್ಪರ್ಧೆಗಳ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಸ್ತಿ ಪಟು ಆರ್.ಬಿ.ಬೂದಿಹಾಳ ಅವರ ಗೌರವಾರ್ಥವಾಗಿ ನಡೆಯುವ ಅಖಿಲ ಭಾರತ ಅಂತರ ಮಹಾವಿದ್ಯಾಲಯಗಳ ಆಯ್ಕೆ ಪ್ರಕ್ರಿಯೆಯ ಈ ಪಂದ್ಯಾವಳಿಯಲ್ಲಿ ಬೆಳಗಾವಿ, ಬಾಗಲಕೋಟ, ವಿಜಯಪುರ, ಚಿಕ್ಕೋಡಿ ಸೇರಿದಂತೆ ನಾಲ್ಕು ಜಿಲ್ಲೆಗಳ 300ಕ್ಕೂ ಅಧಿಕ ಕಾಲೇಜುಗಳ 150 ಕ್ರೀಡಾಪಟುಗಳು ಹಾಗೂ 60ಕ್ಕೂ ಹೆಚ್ಚು ಮಹಿಳಾ ಕ್ರೀಡಾಪಟುಗಳು ಬಾಗವಹಿಸುವ ನಿರೀಕ್ಷೆಯಿದೆ. 17ರಂದು ಶುಕ್ರವಾರ, ಬೆಳಿಗ್ಗೆ : 3.30 ಗಂಟೆಗೆ ಶಾಸಕರು ಹಾಗೂ ತಾ.ಶಿ.ಪ್ರ. ಮಂಡಳಿ ಅಧ್ಯಕ್ಷ ಅಶೋಕ ಎಮ್. ಮನಗೂಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಶ್ರಾಂತ ದೈಹಿಕ ನಿರ್ದೇಶಕರಾದ ಆರ್.ಬಿ.ಬೂದಿಹಾಳ ಮೈದಾನ ಪೂಜೆ ನೆರವೇರಿಸಲಿದ್ದಾರೆ. ರಾ.ಚ.ವಿ.ಬೆಳಗಾವಿ ಕ್ರೀಡಾ ನಿರ್ದೇಶಕರಾದ ಜಗದೀಶ ಗಸ್ತಿ, ಹಿರಿಯ ನಿರ್ದೇಶಕರಾದ ಶಿವಪ್ಪಗೌಡ ಭೋ. ಬಿರಾದಾರ, ವಿಶ್ರಾಂತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಕೆ. ಎಚ್.ಸೋಮಾಪೂರ, ಎಚ್.ಎಮ್.ಉತ್ನಾಳ, ಜೆ.ಪಿ. ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕರಾದ ರವಿ ಗೋಲಾ, ಶ್ರೀ ಬಸವೇಶ್ವರ ಪ.ಪೂ. ಕಾಲೇಜ, ಕಲಕೇರಿ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶಾಂತು ದುರ್ಗಿ, ಡಾ. ಅಂಬರೀಶ ಬಿ. ಜಿರಾದಾರ ದೈಹಿಕ ಶಿಕ್ಷಣ ನಿದೇಶಕರು ಹಾಗೂ ಸಂಘಟನಾ ಕಾರ್ಯದರ್ಶಿ ಈ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ ಎಂದರು. ಶನಿವಾರ, ಸಾಯಂಕಾಲ: 5.00 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಕೆ. ಎಚ್.ಸೋಮಾಪೂರ, ಎಸ್.ಎ.ಜಹಗಿರದಾರ, ಜಿ.ಜಿ.ಕಾಂಬಳೆ, ಎಸ್.ಎನ್.ಬಿರಾದಾರ, ಮಂಜುನಾಥ ಪರಮಾನಂದ, ಸಂತೋಷ ಪೂಜಾರಿ, ದೈಹಿಕ ನಿರ್ದೇಶಕ ಡಾ. ಅಂಬರೀಶ ಬಿರಾದಾರ ಇದ್ದರು.