spot_img
spot_img

ಅಂತಾರಾಷ್ಟ್ರೀಯ ಕುಟುಂಬ ದಿನ

Must Read

“ವಸುಧೈವ ಕುಟುಂಬಕಂ” ಎಂಬೊಂದು ನುಡಿಯಿದೆ ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ…

ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರೀಕರಿಸುವ ಈ ವ್ಯವಸ್ಥೆ ನಮ್ಮಲ್ಲಿ ಹಿಂದಿನಿಂದ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬಹುಶಃ ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ ಈ ಇಡೀ ಜಗತ್ತನ್ನು ಊಹಿಸಲೇ ಅಸಾಧ್ಯವಾಗುತ್ತಿತ್ತು.

ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ. ಮುಂದೆ ಕೂಡಾ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕಿದ್ದರೆ ಅದಕ್ಕೆ ಕುಟುಂಬದ ತಳಪಾಯ ಅತಿ ಅಗತ್ಯ. ಅದು ನಮ್ಮ ದೇಶವಾಗಿರಲಿ ಅಥವಾ ವಿದೇಶವಾಗಿರಲಿ ಎಲ್ಲಾ ಕಡೆಯೂ ಕುಟುಂಬವೆಂಬ ಭದ್ರ ಬುನಾದಿ ಇದ್ದೇ ಇದೆ. ಆದ್ದರಿಂದಲೇ ನಮ್ಮ ವಿಶ್ವ ಇಂದು ಉಳಿದುಕೊಂಡು ಮುಂದಕ್ಕೆ ಬೆಳೆಯುತ್ತಿದೆ.

ಇಷ್ಟೊಂದು ಮೌಲ್ಯಗಳಿರುವ ಈ ಕುಟುಂಬ ಎಂಬ ಪರಿಕಲ್ಪನೆಗೇ ಒಂದು ದಿನವಿದೆ. ಅದುವೇ ಮೇ 15. ಈ ದಿನವನ್ನು ವಿಶ್ವದೆಲ್ಲೆಡೆ ಪ್ರತಿವರ್ಷ ಇಂಟರ್ನ್ಯಾಷನಲ್ ಫ್ಯಾಮಿಲಿ ಡೇ (International Family Day) ಎಂದು ಆಚರಿಸಲಾಗುತ್ತದೆ. ದಶಕದ ಹಿಂದೆ ಈ ದಿನವನ್ನು ವಿಶ್ವಸಂಸ್ಥೆಯು “ಡೇ ಆಫ್‌ ಪೀಸ್‌” ಎಂದು ಆಚರಿಸುತ್ತಿತ್ತು. ಈಗ ಇದನ್ನು ಅಂತಾರಾಷ್ಟ್ರೀಯ ಕುಟುಂಬ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆದು ಬಂದಿದೆ. ಪ್ರತಿಯೊಬ್ಬರು ತಮ್ಮ ಕುಟುಂಬವನ್ನು ಪ್ರೀತಿಸಬೇಕು, ಈ ಮೂಲಕ ಇಡೀ ವಿಶ್ವವನ್ನೇ ಪ್ರೀತಿಸಬೇಕೆಂಬ ಸದಾಶಯವನ್ನು ಈ ದಿನ ಹೊಂದಿದೆ.

ಈ ಕುಟುಂಬವೇ ನಮಗೆ ನಮ್ಮ ಅಸ್ತಿತ್ವವನ್ನು ತಿಳಿಸಿ ಕೊಡುವ, ನಾಯಕತ್ವ ಗುಣ ಕಲಿಸುವ, ಮಾರ್ಗದರ್ಶನ ನೀಡುವ ಮತ್ತು ವಿವಿಧ ರೂಪದಲ್ಲಿ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ವ್ಯವಸ್ಥೆಯಾಗಿದೆ.

ಕುಟುಂಬವೊಂದರಲ್ಲಿ ತಾಯಿ, ತಂದೆ ಮತ್ತು ಮಕ್ಕಳು ಇರುತ್ತಾರೆ. ಭಾರತ ಮುಂತಾದ ಏಷ್ಯಾ ರಾಷ್ಟ್ರಗಳಲ್ಲಿ ಈ ಕುಟುಂಬದ ವ್ಯಾಪ್ತಿ ಇನ್ನೂ ವಿಸ್ತಾರಗೊಳ್ಳುತ್ತದೆ. ಅಲ್ಲಿ ತಂದೆ, ತಾಯಿ, ಮಕ್ಕಳು ಸೇರಿದಂತೆ ಇನ್ನಷ್ಟು ಸಂಬಂಧಿಗಳು ಸೇರುತ್ತಾರೆ.

ಪ್ರಸ್ತುತ ಪ್ರಪಂಚದಾದ್ಯಂತ ಕೊರೋನ ಎಂಬ ಮಹಾಮಾರಿಯು ಲಕ್ಷಾಂತರ ಜನರ ಮಾರಣಹೋಮ ನಡೆಸಿ ಹಲವು ಸುಖೀ ಕುಟುಂಬಗಳನ್ನು ಬಲಿ ತೆಗೆದುಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಕಡ್ಡಾಯವಾಗಿ ನಮ್ಮ ಕುಟುಂಬದೊಂದಿಗೆ ಎಚ್ಚರಿಕೆಯಿಂದ ಇರೋಣ. ಕುಟುಂಬ ಸದಸ್ಯರನ್ನು ಪ್ರೀತಿಸೋಣ, ಗುರು – ಹಿರಿಯರನ್ನು ಗೌರವಿಸೋಣ, ತಂದೆ – ತಾಯಿಯರನ್ನು ಎಚ್ಚರಿಕೆಯಿಂದ ಹುಷಾರಾಗಿ ನೋಡಿಕೊಳ್ಳೋಣ.

ತಂದೆ – ತಾಯಿಯರ ಕ್ಷೇಮವೆ ನಮ್ಮ ಕ್ಷೇಮ, ತಂದೆ – ತಾಯಿಯರ ಆರೋಗ್ಯವೇ ನಮ್ಮ ಭಾಗ್ಯ. ಹಾಗಾಗಿ ಹಿರಿಯರನ್ನು ಮನೆಯಲ್ಲೇ ಚೆನ್ನಾಗಿ ನೋಡಿಕೊಳ್ಳೋಣ. ಅಕಸ್ಮಾತ್ ಹೊರಗೆ ಹೋಗಲೇಬೇಕಾದಾಗ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ನಮ್ಮ ಕುಟುಂಬದೊಂದಿಗೆ ನಾವೂ ಸುರಕ್ಷಿತವಾಗಿ ಇತರರನ್ನೂ ರಕ್ಷಿಸೋಣ.


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!