spot_img
spot_img

ಅಂತಾರಾಷ್ಟ್ರೀಯ ದಾದಿಯರ ದಿನ- International Nurse’s Day

Must Read

- Advertisement -

ಕೊರೊನಾ ಕಾಲದಲ್ಲಿ, ಈಗಿನ ಕಠಿಣ ಪರಿಸ್ಥಿತಿಯಲ್ಲಿ ನಾವು ಋಣಿಯಾಗಿರಬೇಕಾಗಿರುವುದು ನಮ್ಮ ವೈದ್ಯಕೀಯ ಸಿಬ್ಬಂದಿಗೆ. ತಮ್ಮ ಜೀವನವನ್ನೇ ಪಣವಾಗಿಟ್ಟು ಬೇರೆಯವರ ಬದುಕಿಗಾಸರೆಯಾಗಿ ನಿಂತ ಇವರುಗಳಿಗೆ ನೂರು ಸಲಾಂ. ದಾದಿಯರು ಎಂದ ತಕ್ಷಣ ಮನಸ್ಸಿಗೆ ಬರುವುದು ಶಾಂತ ಮನೋಭಾವ, ಶ್ವೇತವರ್ಣದ ಸಮವಸ್ತ್ರ, ಸಹನೆ, ಮಮತೆ ತುಂಬಿದ ಕಣ್ಣುಗಳು, ತ್ಯಾಗಮಯಿ ಮೂರ್ತಿ.

ಇಂತಹ ದಾದಿಯರ ದಿನ ಪ್ರತಿ ವರುಷ ಮೇ 12ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ.

ಫ್ಲೋರೆನ್ಸ್ ನೈಟಿಂಗೇಲ್ ಬಗ್ಗೆ ಕೇಳದವರೇ ಬಹುಶಃ ಯಾರೂ ಇಲ್ಲ. ದಾದಿ ಎನ್ನುವ ಪರ್ಯಾಯ ಪದವೇ ಈಕೆಯ ಹೆಸರು. ಇಂದು ಈ ಮಹಾನ್ ವ್ಯಕ್ತಿತ್ವದ ಹುಟ್ಟುಹಬ್ಬ. 1820 ವರುಷದಲ್ಲಿ ಜನಿಸಿದ ಈಕೆ ಬರೀ ದಾದಿಯಷ್ಟೇ ಅಲ್ಲ, ಸಾಮಾಜಿಕ ಸುಧಾರಕ ವ್ಯಕ್ತಿ ಹಾಗೂ ಸಂಖ್ಯಾಶಾಸ್ತ್ರದ ಪರಿಣಿತರು. “ಲೇಡಿ ವಿತ್ ದ ಲ್ಯಾಂಪ್ ” ಅಂದರೆ ದೀಪದ ಜ್ಯೋತಿಯಲ್ಲಿ ರೋಗಿಗಳನ್ನು ಶುಶ್ರೂಷೆ ಮಾಡುವ ಹೆಣ್ಣು ಎಂದೇ ಈಕೆಯನ್ನು ಕರೆಯುತ್ತಾರೆ.

- Advertisement -

ಕ್ರಿಮಿಯನ್ ಯುದ್ಧದಲ್ಲಿ ರಾತ್ರಿ ಸರಿಹೊತ್ತಿನವರೆಗೂ ಗಾಯಾಳುಗಳನ್ನು ನೋಡಿಕೊಳ್ಳುತ್ತಾ, ಅವರ ಯೋಗಕ್ಷೇಮ ವಿಚಾರಿಸುತ್ತಾ ಇವರು ವೃತ್ತಿಪರತೆ ಮೆರೆದರು. ದಾದಿಯರ ತರಬೇತಿಗಾಗಿ 1860 ರಲ್ಲಿ ಲಂಡನ್ ನಗರದಲ್ಲಿ ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್ ಸ್ಥಾಪಿಸಿ ಹಾಗೂ ಇನ್ನು ಕೆಲವು ವರುಷದಲ್ಲಿ ಸೂಲಗಿತ್ತಿಯರಿಗಾಗಿ ಟ್ರೇನಿಂಗ್ ಶಾಲೆಯನ್ನೂ ತೆರೆದರು. 1965ರಲ್ಲಿ ಅಂತರಾಷ್ಟ್ರೀಯ ದಾದಿಯರ ದಿನವನ್ನು ಇಂಟರ್‌ನ್ಯಾಷನಲ್‌ ಕೌನ್ಸಿಲ್ ಆಫ್ ನರ್ಸಸ್ ಎಂಬ ಸಂಸ್ಥೆಯು ಮೊದಲ ಬಾರಿಗೆ ಆಚರಿಸಿತು.

1974ರಲ್ಲಿ ಈ ದಿನದ ಹೆಸರು ಖಾಯಂ ಮಾಡಲಾಯಿತು. ಈಗ ಪ್ರಪಂಚದಾದ್ಯಂತ ಈ ದಿನವನ್ನು ಫ್ಲೋರೆನ್ಸ್ ಅವರ ನೆನಪಿನಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ. ನರ್ಸಿಂಗ್ ಎಂದರೆ ಬಹಳಷ್ಟು ವಿವಿಧ ನೈಪುಣ್ಯತೆ ಹೊಂದಿರಬೇಕು. ಜತೆಗೆ ಅಗಾಧ ಮಾನಸಿಕ ಹಾಗೂ ದೈಹಿಕ ಸ್ಥೈರ್ಯ ಕೂಡ ಇರಬೇಕು. ನವಜಾತ ಶಿಶುವಿನಿಂದ ಹಿಡಿದು ವಯೋವೃದ್ದರವರೆಗೂ ದಾದಿಯರ ಅವಶ್ಯಕತೆ ಬೀಳುವುದರಿಂದ ಅವರು ಎಲ್ಲ ರೀತಿಯ ರೋಗಿಗಳನ್ನೂ ಸುಧಾರಿಸುವ ಚಾಕಚಕ್ಯತೆ ಮೈಗೂಡಿಸಿಕೊಂಡಿರಬೇಕು.

ಇವರು ಪಡುವ ಶ್ರಮಕ್ಕೆ ನಿಮ್ಮ ನೆಚ್ಚಿನ ನರ್ಸ್, ಅಥವಾ ನಿಮ್ಮನ್ನು ಆರೈಕೆ ಮಾಡಿದ ದಾದಿಗೆ ಕೊಡುಗೆ ನೀಡಿ ನಿಮ್ಮ ಮೆಚ್ಚುಗೆ ಸಲ್ಲಿಸಿ. ಕೊರೊನಾ ಕಾಲದಲ್ಲಿ ಹೋರಾಟದ ಮುಂಚೂಣಿಯಲ್ಲಿ ಇರುವ ಈ ಧೈರ್ಯವಂತ ಹೆಣ್ಣು/ಗಂಡು ದಾದಿಯರಿಗೆ ನಮ್ಮ ಕೃತಜ್ಞತೆ ಸಲ್ಲಿಸೋಣ.

- Advertisement -

ಅವರ ಸೇವೆ ಮರೆಯದೆ ಸಲಾಂ ಎನ್ನೋಣ ಬನ್ನಿ!


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group