spot_img
spot_img

ಇಂದು ವಿಶ್ವ ಜಲ ದಿನ

Must Read

- Advertisement -

ಜೀವಜಲದ ಮಹತ್ವವನ್ನು ತಿಳಿಸುವ ಈ ಚುಟುಕಗಳು ಮುಂದಿನ ಭೀಕರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವಂತಿದ್ದರೂ ವಾಸ್ತವವನ್ನು ಅರುಹುತ್ತವೆ.

ನೀರು ಮುಂದೊಂದು ದಿನ
ಕವಿ: ವಿಲ್ಸನ್ ಕಟೀಲ್

-1-
ಹಾ! ಗಂಟಲು ಒಣಗಿದೆ!!
ತಕೋ ಈ ಬಂಗಾರದ ಸರಪಳಿ
ಬದಲಾಗಿ
ಒಂದು ಗುಟುಕು ನೀರು ಕೊಡು!

- Advertisement -

-2-
ನಮ್ಮ ಹಿರಿಯರು
ಹಾಲಿಗೆ
ಬೆರೆಸುತ್ತಿದ್ದರಂತೆ ನೀರು
ಎಷ್ಟು ಸಿರಿವಂತರಿದ್ದಿರಬಹುದು ಅವರು!

-3-
ರೈತನ ಬಾಯನ್ನು ತೆರೆಸಿ
ನಾಲಗೆಯನ್ನು ಪರೀಕ್ಷಿಸಿದ ವೈದ್ಯರು
ಮೆಡಿಕಲ್ಸ್ ಗೆ ಚೀಟಿ ಬರೆದುಕೊಟ್ಟರು-
ದಿನಕ್ಕೆ ಮೂರು ಸಲ
ಹತ್ತತ್ತು ಎಮ್ಮೆಲ್ ನೀರು!

-4-
ಕಂಬನಿಯನ್ನು ಶುದ್ಧೀಕರಿಸಿ
ಕುಡಿಯಲು ಯೋಗ್ಯ ನೀರನ್ನಾಗಿಸುವ
ಪ್ರಯೋಗ ನಡೆಯುತ್ತಿವೆ
ಜನಗಳೇ-
ನೀರಿಗಾಗಿ ಸಾಧ್ಯವಾದಷ್ಟೂ ಅಳಿರಿ!!

- Advertisement -

-5-
ಹಿಂದೆ ಒಬ್ಬನು
ನೀರನ್ನು ವೈನನ್ನಾಗಿ ಮಾಡಿದ
ನಡುವೆ ಕೆಲವರು
ವೈನನ್ನು ನೆತ್ತರನ್ನಾಗಿ ಮಾಡಿದರು
ಮತ್ತು ಇಂದು
ನೀರನ್ನು
ನೀರನ್ನಾಗಿಯೇ ಉಳಿಸುವ ಅಗತ್ಯವಿದೆ

-6-
ಬೆಂಜ್, ಬಿ.ಎಮ್.ಡಬ್ಲ್ಯೂ
ಕೋಟಿಗಳ ಗಾಡಿಗಳು
ದಾರಿಬಿಟ್ಟು ನಿಂತವು…
ನೀರಿನ ಟ್ಯಾಂಕರೊಂದು
ಸೈರನ್ ಕೂಗುತ್ತಾ ಓಡಿತು!!

-7-
‘ನೀರೆಷ್ಟು ದುಬಾರಿ!’
ಮೊದಲು ಕಂಡುಕೊಂಡವನು
ನನ್ನ ಅಜ್ಜ
ಅವನು ಮದ್ಯಕ್ಕೆ
ನೀರು ಬೆರೆಸದೆಯೇ
ಕುಡಿಯುತ್ತಲಿದ್ದ!

-8-
“ನಮ್ಮ ಊರಲ್ಲಿ
ಅವನೇ ಶ್ರೀಮಂತ-
ತಿಂಗಳಿಗೆ ಒಂದು ಸಲವಾದರೂ
ನೀರಲ್ಲಿ ಮೀಯುತ್ತಾನೆ!”

-9-
ಒಂದು ಸುದ್ದಿ-
‘ಸೆಕ್ಯುರಿಟಿಯವನ ಕೊಲೆಗೈದು
ಕಳ್ಳನಿಂದ
ಕೊಳವೆ ಬಾವಿಯ ಲೂಟಿ!’

-10-
ರೇಶನ್ ಅಂಗಡಿಯ ಹೊರಗೆ
ನೇತಾಡುವ ಬೋರ್ಡ್-
‘ನೀರು ಮುಗಿದಿದೆ!’

-11-
‘ನೆತ್ತರು ಹರಿಸಿದ್ದಕ್ಕಾಗಿ
ಐದು ವರ್ಷ ಮತ್ತು
ನೀರಿನಿಂದ ನೆತ್ತರನ್ನು ತೊಳೆದುದಕ್ಕಾಗಿ
ಹತ್ತು ವರ್ಷ ಸಜೆ’
ನ್ಯಾಯಾಲಯದ ಐತಿಹಾಸಿಕ ತೀರ್ಪು!

-12-
ರಾತ್ರಿ ಕಡಲ ನೀರನ್ನು
ಕಳ್ಳಸಾಗಣೆ ಮಾಡುವ ಒಬ್ಬನು
ಪಾರ್ಟನರನಲ್ಲಿ ಹೇಳಿದ-
‘ಒಂದು ಕಾಲದಲ್ಲಿ
ಮರಳಿನ ಕಳ್ಳಸಾಗಾಣಿಕೆಯನ್ನೂ
ಮಾಡುತ್ತಿದ್ದರಂತೆ ಮಾರಾಯ!’

-13-
“ನಿಮ್ಮ ನೀರಿನ ಸಮಸ್ಯೆಯನ್ನು
ನಾನು ಬಗೆಹರಿಸುತ್ತೇನೆ”
ಭಾಷಣ ಕೊರೆಯುತ್ತಿದ್ದ ಫುಡಾರಿಯ ಕಿವಿಯಲ್ಲಿ
ಪಿ.ಎ ಪಿಸುಗುಟ್ಟಿದ-
“ಜೋರಾಗಿ ಅರಚಬೇಡಿ ಸರ್
ಗಂಟಲೊಣಗಿದರೆ
ಹನಿಯೂ ಇಲ್ಲ!”

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group