ಅಥಣಿ ತಾಲೂಕಿನ ಮಲಾಬಾದ ಗ್ರಾಮದ ವಿಮೋಚನಾ ವಿದ್ಯಾ ಸಂಸ್ಥೆಯಲ್ಲಿ ಅಳವಡಿಸಲಾಗಿರುವ ಸೌರ ವಿದ್ಯುಚ್ಛಕ್ತಿ ಉತ್ಪಾದನೆ ಘಟಕದ ಪ್ರಾರಂಭೋತ್ಸವಕ್ಕೆ ಇಳಕಲ್ಲ- ಚಿತ್ತರಗಿ ಸಂಸ್ಥಾನ ಮಠದ ಪೂಜ್ಯ ಶ್ರೀ ಗುರು ಮಹಾಂತ ಮಹಾಸ್ವಾಮಿಗಳವರು ವಿದ್ಯುತ್-ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
10 ದ್ವಿಮುಖಿ (bifacial) ಮೋನೋ ಕೃಷ್ಟಲೈನ್ ಪರ್ಕ, ಹಾಫ್ ಕಟ್ ಸೂರ್ಯ ರಶ್ಮಿ ಸ್ಪರ್ಷಿಕೆಗಳ (Solar Panels) ಅಳವಡಿಕೆಯಿಂದ 5.5 KW ವಿದ್ಯುತ್ ಉತ್ಪಾದಿಸಬಲ್ಲ 3 ಫೇಸ್ (3 Phase) ವಿಶೇಷ ಹೈಬ್ರಿಡ್ ಸೋಲಾರ್ ಇನ್ವ್ಹರ್ಟರ್ ನಿಯಂತ್ರಿತ ಘಟಕವನ್ನು ಶ್ರೀಗಳು ಚಾಲನೆ ನೀಡಿದಾಕ್ಷಣ ಮೋಡ ಮುಸುಕಿದ ವಾತಾವರಣವಿದ್ದಾಗ್ಯೂ ವಿದ್ಯುತ್ ಉತ್ಪಾದನೆ ಪ್ರಾರಂಭಗೊಂಡಿದ್ದು ಇಂದಿನ ವಿಶೇಷತೆಯಾಗಿತ್ತು.
ವಿದ್ಯಾ ಸಂಸ್ಥೆಯ ಶಿಕ್ಷಕ ಬಳಗ, ಅಗಸ್ಥ್ಯ ಇಂಟರ್ ನ್ಯಾಶನಲ್ ಸಂಸ್ಥೆಯ ಸಂತೋಷ ರವರು ಉಪಸ್ಥಿತರಿದ್ದರು.
ನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಪೂಜ್ಯರು ಸೋಲಾರ ವಿದ್ಯುತ್ ಘಟಕದ ಅಳವಡಿಕೆಗೆ ತಾಂತ್ರಿಕ ಸೇವೆ ಸಲ್ಲಿಸಿದ್ದ ರಾಮದುರ್ಗದ ಗ್ರೀನ ಲ್ಯಾಂಡ್ ಬಯೋಟೆಕ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಭಾಲಚಂದ್ರ ಜಾಬಶೆಟ್ಟಿಯವರನ್ನು ಶಾಲು ಹೊದಿಸಿ ಸನ್ಮಾನಿಸಿದರು