spot_img
spot_img

ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಯೋಡಿನ್ ಅಗತ್ಯವಿದೆ – ಎಸ್ ಡಿ ಕುಲಕರ್ಣಿ

Must Read

ಸಿಂದಗಿ: ಅಯೋಡಿನ್ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ ಪೋಷಕಾಂಶವಾಗಿದೆ. ಇದರ ಮಹತ್ವ ಸಾರುವ ಮತ್ತು ಆಯೋಡಿನ್‍ಯುಕ್ತ ಆಹಾರ ಸೇವನೆ ಉತ್ತೇಜಿಸುವ ದೃಷ್ಟಿಯಿಂದ ವಿಶ್ವ ಆಯೋಡಿನ್ ಕೊರತೆ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀಧರಸ್ವಾಮಿ ವಿದ್ಯಾವರ್ಧಕ ಸಂಸ್ಥೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಅಯೋಡನ್ ಕೊರತೆ ನಿಯಂತ್ರಣ ದಿನ ಹಾಗೂ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ದಿನ ನಾವು ಸೇವಿಸುವ ಆಹಾರದಲ್ಲಿಯೇ ಅಯೋಡಿನ್ ಪೋಷಕಾಂಶವಿರುತ್ತದೆ. ಆದರೆ ಇತ್ತೀಚೆಗೆ ಕೆಲವರಿಗೆ ಅಯೋಡಿನ್ ಕೊರತೆ ಕಂಡು ಬರುತ್ತಿದೆ. ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಪೋಷಕಾಂಶ ಒಳಗೊಂಡಿರುವ ಉಪ್ಪನ್ನು ಬಳಸುವುದರಿಂದ ಅಯೋಡಿನ್ ಕೊರತೆಯನ್ನು ನೀಗಿಸಬಹುದು. ಸಾಮಾನ್ಯವಾಗಿ ವಯಸ್ಕರಿಗೆ ಒಂದು ದಿನಕ್ಕೆ 150ಮೈಕ್ರೋ ಗ್ರಾಂ, ಗರ್ಭಿಣಿ, ಬಾಣಂತಿಯರಿಗೆ 200 ಮೈಕ್ರೋ ಗ್ರಾಂ, 11 ತಿಂಗಳವರೆಗಿನ ಮಗುವಿಗೆ 50 ಮೈಕ್ರೋ ಗ್ರಾಂ, 1 ವರ್ಷದಿಂದ 5 ವರ್ಷದವರೆಗಿನ ಮಕ್ಕಳಿಗೆ 90 ಮೈಕ್ರೋ ಗ್ರಾಂ ಹಾಗೂ 5 ರಿಂದ 16 ವಯಸ್ಸಿನ ಮಕ್ಕಳಿಗೆ 120 ಮೈಕ್ರೋ ಗ್ರಾಂ. ಅಯೋಡಿನ್ ಅಗತ್ಯವಿದೆ ಎಂದರು.

ಮಹಿಳಾ ಸಾಂತ್ವನ ಸ್ವಯಂಸೇವಕಿ ರಶ್ಮಿ ನೂಲಾನವರ ಮಾತನಾಡಿ, ಅಯೋಡಿನ್ ಪೋಷಕಾಂಶ ಒಳಗೊಂಡಿರುವ ಉಪ್ಪನ್ನು ಬಿಸಿಲಿಗೆ ಅಥವಾ ಗಾಳಿಗೆ ಬಹಳಕಾಲ ತೆರೆದಿಟ್ಟರೆ ಅದರಲ್ಲಿರುವ ಅಯೋಡಿನ್ ಅಂಶವು ಆವಿಯಾಗಿ ಹೋಗುತ್ತದೆ. ಅದನ್ನು ಪ್ಲಾಸ್ಟಿಕ್, ಗಾಜು ಅಥವಾ ಪಿಂಗಾಣಿ ಡಬ್ಬಿಯಲ್ಲಿ ಹಾಕಿ ಬಿಗಿಯಾಗಿ ಮುಚ್ಚಿಡಬೇಕು. ಅಯೋಡಿನ್ ಯುಕ್ತ ಉಪ್ಪನ್ನು ಆದಷ್ಟು ಬೇಗ ಉಪಯೋಗಿಸುವುದು ಉತ್ತಮ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕಿ ಜಯಶ್ರೀ ಬಿರಾದಾರ, ಆರೋಗ್ಯ ನಿರೀಕ್ಷಣಾಧಿಕಾರಿ ವೀರೇಂದ್ರ ಪಾವಡೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿ ರೂಪಾ ಪೂಜಾರಿ ಸ್ವಾಗತಿಸಿ ನಿರೂಪಿಸಿದರು. ಅಕ್ಷತಾ ಕೋಟಿಕಾನಿ ಪ್ರಾರ್ಥಿಸಿದರು. ಶೈಲಜಾ ಪೂಜಾರಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!