ಹೀಗೊಂದು ಬರಹ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ನೀವು ಓದಲೇಬೇಕು.
ರಷ್ಯಾದ ಪ್ರಖ್ಯಾತ ರಾಜನೀತಿಜ್ಞ ಅಲೆಕ್ಸಾಂಡರ್ ದುಗಿನ್ ಮೊನ್ನೆ ಮಾಡಿದ ಟ್ವೀಟ್ ಪೂರ್ತಿ ಮಧ್ಯಪೂರ್ವವನ್ನು ಬೆಚ್ಚಿಬೀಳಿಸಿದೆ. ದುಗಿನ್ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರಿಂದಲೇ ಗುರು ಎಂದೇ ಗೌರವಿಸಲ್ಪಡುವ ವ್ಯಕ್ತಿ. ಜಾಗತಿಕ ರಾಜಕಾರಣದಲ್ಲಿ ಆತನ ಲೆಕ್ಕಾಚಾರಗಳು ತಪ್ಪಿದ ಉದಾಹರಣೆಗಳೇ ಇಲ್ಲ. ದುಗಿನ್ ಮೊನ್ನೆ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಇಸ್ರೇಲ್ ಹೊಡೆದುರುಳಿಸಿದಾಗ ಒಂದು ಲೇಖನವನ್ನು ಪ್ರಕಟಿಸಿದ್ದಾರೆ.
ಅದರ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಇಸ್ರೇಲ್ ತನ್ನ ಗ್ರೇಟರ್ ಇಸ್ರೇಲಿನ ಕನಸನ್ನು ಪೂರ್ಣಗೊಳಿಸುತ್ತದೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇಸ್ರೇಲ್ ವಿರುದ್ಧ ರಚನೆಯಾಗಿದ್ದ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಎಂಬ ಉಗ್ರ ಸಂಘಟನೆಗಳ ಗುಂಪು ಒಂದೊಂದಾಗಿ ನೆಲಕಚ್ಚುತ್ತಿವೆ. ಹಮಾಸ್ ಸಂಘಟನೆಯ ಎಲ್ಲಾ ಉನ್ನತ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಇಸ್ರೇಲಿನಿಂದ ಟಿಕೇಟು ಪಡೆದು ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಹಿಜ್ಬುಲ್ಲಾ ಸಂಘಟನೆಯ ಟಾಪ್ ಕಮಾಂಡರ್‌ಗಳನ್ನು ಒಬ್ಬರನ್ನೂ ಬಿಡದೆ ಇಸ್ರೇಲ್ ಹೊಡೆದು ಹಾಕಿದೆ. ಇನ್ನು ಉಳಿದಿರುವುದು ಇರಾಕಿನ ಬದ್ರ್ , ಅಸೈಬ್ ಅಲ್ ಹಕ್, ಗಾಝಾದ ಇಸ್ಲಾಮಿಕ್ ಜಿಹಾದ್, ಮತ್ತು ಯೆಮನ್ ದೇಶದ ಹೌತಿ ಸಂಘಟನೆಗಳು ಮಾತ್ರ . ಇವುಗಳನ್ನು ಕೂಡ ಬೆಂಜಮಿನ್ ನೆತನ್ಯಾಹು ಬೆನ್ನು ಬಿಡದೆ ಮುಗಿಸುತ್ತಾರೆ ಎಂಬ ನಿರೀಕ್ಷೆ ಇದೆ. ಹೆಚ್ಚಿನ ಈ ಎಲ್ಲಾ ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುತ್ತಿರುವುದು ಇರಾನ್ ಸರಕಾರ. ಹಾಗಾಗಿ ಇಸ್ರೇಲ್ ಈಗ ಸಮಸ್ಯೆಯ ಬುಡಕ್ಕೆ ಕೈ ಹಾಕಿದೆ. ಇನ್ನು ಕೆಲವೇ ದಿನಗಳಲ್ಲಿ ಇರಾನಿನ ತೈಲಾಗಾರಗಳಿಗೆ ಬೆಂಕಿ ಬೀಳುವುದಿದೆ. ಇಸ್ರೇಲ್ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಇಸ್ರೇಲಿನ ಮೂಲಕ ಅಮೇರಿಕಾ ಇರಾನನ್ನು ಸರ್ವನಾಶ ಮಾಡಲು ಎಲ್ಲಾ ತಯಾರಿ ನಡೆಸಿದೆ. ಅಗತ್ಯ ಬಿದ್ದರೆ ಅಮೇರಿಕಾ ಮತ್ತದರ ಮಿತ್ರ ದೇಶಗಳು ನೇರವಾಗಿ ಯುದ್ಧಕ್ಕೆ ದುಮುಕುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಸಂಯುಕ್ತ ರಾಷ್ಟ್ರ ಮಂಡಳಿಯ ಮಹಾಸಭೆಯಲ್ಲಿ ಮೊನ್ನೆ ಇಸ್ರೇಲಿ ಪ್ರಧಾನಿ ಬೆಂಜಮಮಿನ್ ನೆತನ್ಯಾಹು ಭಾಷಣಕ್ಕಾಗಿ ಎದ್ದು ಬಂದಾಗ ಇತಿಹಾಸದಲ್ಲಿ ಎಂದೂ ನಡೆಯದ ಘಟನೆ ನಡೆದು ಹೋಯಿತು. ಸಭೆಯಲ್ಲಿದ್ದವರು ಸಭಾತ್ಯಾಗ ಮಾಡಿದರು. ಬೇರೆ ಯಾರೇ ನಾಯಕನಾದರೂ ಈ ಬೆಳವಣಿಗೆಯಿಂದ ಕುಸಿದು ಹೋಗುತ್ತಿದ್ದರು. ಆದರೆ ನೆತನ್ಯಾಹು ಮಾತ್ರ ಭರ್ಜರಿ ತಯಾರಿ ಮಾಡಿಕೊಂಡೇ ಬಂದಿದ್ದರು. ನಸ್ರಲ್ಲಾನ ಅಡಗುದಾಣ ಪತ್ತೆ ಹಚ್ಚುವ ಮೊಸಾದಿಗೆ ಈ ಅನ್ಯ ದೇಶದ ರಾಷ್ಟ್ರ ನಾಯಕರ ನಡೆ ತಿಳಿಯದೇ ಇದ್ದೀತೇ ? ಅವರಿಗೆ ಹೀಗಾಗುವುದೆಂದು ಮೊದಲೇ ತಿಳಿದಿತ್ತು.
ಕೇವಲ ಮುಸಲ್ಮಾನ ದೇಶಗಗಳಷ್ಟೇ ಅಲ್ಲ ಅನೇಕ ಐರೋಪ್ಯ ದೇಶಗಳು ಕೂಡ ಇಸ್ರೇಲಿಗೆ ಬಹಿಷ್ಕಾರ ಹಾಕಿದ್ದವು. ಆದರೆ ಭಾರತದ ಪ್ರತಿನಿಧಿಗಳು ಮಾತ್ರ ಪೂರ್ತಿ ಭಾಷಣವನ್ನು ಕೇಳಿ ನೆತನ್ಯಾಹು ಅವರನ್ನು ಬೆಂಬಲಿಸಿದರು.
“ನನಗೆ ಈ ಸಭೆಗೆ ಬರುವ ಉದ್ಧೇಶವಿರಲಿಲ್ಲ ಆದರೆ ಇಸ್ರೇಲ್ ಬಗ್ಗೆ ಜಗತ್ತಿನಾದ್ಯಂತ ಹರಡಿರುವ ಸುಳ್ಳಿನ ಪರದೆಯನ್ನು ಸರಿಸಬೇಕಿತ್ತು ಅದಕ್ಕಾಗಿ ಬಂದಿದ್ದೇನೆ. ನನ್ನ ದೇಶ ಯುದ್ಧ ಪೀಡಿತವಾಗಿದೆ. ಅಸಂಖ್ಯಾತ ನಿರಪರಾಧಿ ಇಸ್ರೇಲಿಗಳ ಕಗ್ಗೊಲೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ.
ನನ್ನ ಕೈಯಲ್ಲಿ ಎರಡು ನಕ್ಷೆಗಳಿವೆ. ಒಂದು ಆಶಿರ್ವಾದದ ನಕ್ಷೆ. ಮುಂಬರುವ ದಿನಗಳಲ್ಲಿ ವಿಶ್ವದ ಎರಡು ಮಹಾಖಂಡಗಳಾಗಿರುವ ಯೂರೋಪ್ ಮತ್ತು ಏಶಿಯಾವನ್ನು ಬೆಸೆಯುವ ಕೋಟ್ಯಾಂತರ ಜನರ ಬದುಕನ್ನು ಹಸನುಗೊಳಿಸುವ ನಕ್ಷೆ . ಇದರಲ್ಲಿ ಭಾರತ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ದೇಶಗಳಿವೆ. ಇನ್ನೊಂದು ಶಾಪದ ನಕ್ಷೆ . ಈ ನಕ್ಷೆಯಲ್ಲಿ ವಿಶ್ವದ ಅಭಿವೃದ್ಧಿಗೆ ಮಾರಕವಾಗಬಹುದಾದ ಶಕ್ತಿಗಳ ಹಿಡಿತ ಹೇಗೆ ಬಲವಾಗುತ್ತಿದೆ ಎಂದು ಬೆಂಜಮಿನ್ ವಿವರಿಸಿದರು.
ಆ ಕಪ್ಪು ಗುರುತಿನ ನಕ್ಷೆಯಲ್ಲಿ ಇರಾನ್ ಲೆಬನಾನ್ ಯೆಮನ್ ಸಿರಿಯಾ ದೇಶಗಳನ್ನು ತೋರಿಸಿದರು. ಈ ದೇಶಗಳು ಜಗತ್ತಿಗೆ ಶಾಪವಾಗಿವೆ. ಆರ್ಥಿಕ ಅಭಿವೃದ್ಧಿಗೆ ಇವುಗಳು ಮಾರಕವಾಗಿವೆ. ದ್ವೇಷ ಮತ್ತು ಉಗ್ರವಾದವನ್ನೇ ಈ ದೇಶಗಳು ಉಸಿರಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ನಕ್ಷೆಯಲ್ಲಿ ಒಂದು ವಿಶೇಷತೆ ಇತ್ತು ಬೆಂಜಮಿನ್ ತೋರಿಸಿದ ನಕ್ಷೆಗಳಲ್ಲಿ ಪ್ಯಾಲೆಸ್ತೀನ್ ಎಂಬ ದೇಶವೇ ಇರಲಿಲ್ಲ ! ಇದನ್ನು ಕಂಡಾಗ ದುಗಿನ್ ಮಾತುಗಳಲ್ಲಿ ಸಾರವಿದೆ ಅಂತ ಅನಿಸಲ್ವೇ ?
ಭಾಷಣ ಮುಂದುವರೆಸುತ್ತಾ ಅವರು ಬಹಿಷ್ಕಾರ ಹಾಕಿ ಹೋದವುಗಳೆಲ್ಲಾ ಹಿಪೋಕ್ರಟ್‌ಗಳು ಒಂದು ವೇಳೆ ನಮ್ಮ ಮೇಲೆ ನಡೆದ ದಾಳಿ ನಿಮ್ಮ ಯೂರೋಪಿನ ನೆಲದಲ್ಲಾಗಿದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಪ್ರಶ್ನಿಸಿದರು. ಹಿಂಸೆಯನ್ನು ತಡೆಯಲು ಪ್ರತಿಹಿಂಸೆ ಅನಿವಾರ್ಯ ಎಂಬ ಇಸ್ರೇಲಿನ ನೀತಿಯನ್ನು ನೆತನ್ಯಾಹು ಸಂಯುಕ್ತ ರಾಷ್ಟçಮಂಡಳಿಯ ಮುಂದೆ ಬಲವಾಗಿ ವಾದಿಸಿದರು. ಇಸ್ರೇಲ್ ಎಂತ “ಪೆದಂಬು ಪಾರ್ಟಿ” ಎಂದರೆ ಅದು ಸಂಯುಕ್ತ ರಾಷ್ಟ್ರ ಮಂಡಳಿಯಲ್ಲಿ ತನ್ನ ದೇಶದ ಪ್ರಧಾನಿಗಾದ ಅಪಮಾನಕ್ಕೆ ಅರ್ಧ ಗಂಟೆಯಲ್ಲೇ ಉತ್ತರ ಕೊಟ್ಟಿತು. ಅದು ಸಂಯುಕ್ತ ರಾಷ್ಟ್ರಮಂಡಳಿಯ ಪ್ರಧಾನ ಕಾರ್ಯದರ್ಶಿ ಅಂಥೋನಿಯೋ ಗುತ್ರೇಸ್‌ನನ್ನು ಇಸ್ರೇಲ್ ದೇಶಕ್ಕೆ ಕಾಲಿಡದಂತೆ ನಿಷೇಧಿಸಿ ಬಿಟ್ಟಿದೆ !
ಇರಾನ್ ಮತ್ತು ಇಸ್ರೇಲ್ ಮಧ್ಯೆ ಈಗ ಯುದ್ಧದ ವಾತಾವರಣವಿದೆ. ಇರಾನ್ ಮೊನ್ನೆ ಅಕ್ಟೋಬರ್ ಒಂದರ ರಾತ್ರಿ ೧೮೦ ಮಿಸೈಲ್ ಗಳನ್ನು ಇಸ್ರೇಲ್ ಮೇಲೆ ಉದುರಿಸಿತ್ತು.. ಎಲ್ಲವೂ ನೆಲ ಮುಟ್ಟುತ್ತಿದ್ದರೆ ನಕಾಶೆಯಲ್ಲಿ ಇಸ್ರೇಲ್ ಎಂಬ ಗುಬ್ಬಚ್ಚಿ ಗಾತ್ರದ ದೇಶ ಬೂದಿಯ ಗುಡ್ಡವಾಗಿ ಬದಲಾಗುತ್ತಿತ್ತು. ಆದರೆ ಅದು ಇಸ್ರೇಲ್… ತಂತ್ರಜ್ಞಾನದ ತವರು. ಮಲ್ಟಿ ಲೆಯರ್ ಏರ್ ಡಿಫನ್ಸ್ ತಂತ್ರಜ್ಞಾನ ಬಳಸಿ ಬಂದ ಮಿಸೈಲುಗಳನ್ನು ಆಗಸದಲ್ಲೇ ಚಿಂದಿ ಉಡಾಯಿಸಲಾಯಿತು. ಕೆಲವೊಂದು ಕೆಳ ಬಿದ್ದರೂ ಭಾರೀ ಜೀವ ಹಾನಿ ಉಂಟಾಗಿಲ್ಲ.
ಈ ಮಿಸೈಲ್ ದಾಳಿ ಕಂಡು ಗಾಝಾದ ಜನರು ಸಂಭ್ರಮಾಚರಿಸಿದರಂತೆ! ಕರೆಂಟು ನೀರು, ಡಿಸೇಲ್ ಪೆಟ್ರೋಲ್ ಮದ್ದು ..ಸಾಯಲಿ ಒಂದು ಹಿಡಿ ಅನ್ನಕ್ಕೂ ತತ್ತರಿಸುತ್ತಿರುವ ಆ ಜನರು ಇಂತಹ ದೈನಸೀ ಸ್ಥಿತಿಯಲ್ಲೂ ಸಂಭಭ್ರಮಿಸುತ್ತಾರೆ ಎಂದರೆ ಅವುಗಳ ಮಾನಸೀಕತೆ ಹೇಗಿರಬೇಡ ?
ಕಳೆದ ವರ್ಷ ಅಕ್ಟೋಬರ್ ಏಳಕ್ಕೂ ಈ ಗಾಝಾ ನಿವಾಸಿಗಳು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಸಂಭ್ರಮಿಸಿದ್ದರು. ಅದರ ಪ್ರತಿಫಲವನ್ನು ಈಗ ಒಂದು ವರ್ಷದ ನಂತರವೂ ಬಿಟ್ಟೂ ಬಿಡದೇ ಉಣ್ಣುತ್ತಿದ್ದಾರೆ. ಗಾಝಾದ ಕತೆ ಒತ್ತಟ್ಟಿಗಿರಲಿ.
೨೦೨೪ರ ಎಪ್ರಿಲ್ ತಿಂಗಳಲ್ಲಿ ಇರಾನ್ ಮೊನ್ನೆ ಮಾಡಿದ ರೀತಿಯಲ್ಲೇ ಇಸ್ರೇಲ್ ಮೇಲೆ ೩೦೦ ಮಿಸೈಲ್ ಹಾರಿಸಿತ್ತು. ಆದರೆ ಇಸ್ರೇಲ್ ಅಮೇರಿಕಾದ ಮಾತು ಕೇಳಿ ಪ್ರತಿಕ್ರಿಯೆ ನೀಡದೇ ಸುಮ್ಮನಿತ್ತು. ಆದರೆ ಈ ಬಾರಿ ಇಸ್ರೇಲ್ ಎರಡೂ ದಾಳಿಯ ಲೆಕ್ಕವನ್ನು ಬಡ್ಡಿ ಸಮೇತ ನೀಡಲು ಮುಂದಾಗಿದೆ.
ಅಷ್ಟಕ್ಕೂ ಇರಾನ್ ಮತ್ತು ಇಸ್ರೇಲ್ ಹುಟ್ಟುತ್ತಲೇ ಶತ್ರುತ್ವ ಮೈಗೂಡಿಸಿಕೊಂಡಿದ್ದವೇ ? ಇಲ್ಲ. ೧೯೪೮ರಲ್ಲಿ ನವ ಇಸ್ರೇಲ್ ಹುಟ್ಟಿದಾಗ , ಅದನ್ನು ಒಂದು ದೇಶ ಎಂದು ಒಪ್ಪಿಕೊಳ್ಳಲು ಇಡೀ ಅರಬ್ ಜಗತ್ತು ನಿರಾಕರಿಸಿದಾಗ , ಅವರೆಲ್ಲರ ವಿರೋಧ ಕಟ್ಟಿಕೊಂಡು ಇಸ್ರೇಲಿಗೆ ದೇಶದ ಮಾನ್ಯತೆ ನೀಡಿದ ಎರಡೇ ಇಸ್ಲಾಮಿಕ್ ದೇಶಗಳೆಂದರೆ ಒಂದು ಇರಾನ್ ಮತ್ತೊಂದು ಟರ್ಕಿ.
ಸುನ್ನಿ ದೇಶಗಳ ನಡುವೆ ಸಿಕ್ಕಿ ಒದ್ದಾಡುತ್ತಿದ್ದ ಇರಾನ್ ಎಂಬ ಶಿಯಾ ದೇಶಕ್ಕೆ ಇಸ್ರೇಲ್ ಎಂಬ ಯಹೂದಿ ದೇಶ ಆಪ್ತವಾಯಿತು. ಸಂಬಂಧಗಳು ಎಷ್ಟು ಬಲಗೊಂಡವು ಎಂದರೆ ಇಸ್ರೇಲಿನ ಗುಪ್ತಚರ ಸಂಸ್ಥೆಯಾದ ಮೊಸಾದ್ ಮತ್ತು ಇರಾನ್ ದೇಶದ ಗುಪ್ತಚರ ಸಂಸ್ಥೆ ಸವಾಕ್ ಜೊತೆಯಾಗಿ ನೂರಾರು ಕಾರ್ಯಾಚರಣೆಗಳನ್ನು ನಡೆಸಿದ್ದವು. ೧೯೭೭ರಲ್ಲಿ ಇವರಿಬ್ಬರೂ ಸೇರಿ ನ್ಯೂಕ್ಲಿಯರ್ ಮಿಸೈಲ್ ತಯಾರಿಸುವ ಯೋಜನೆಗೂ ಕೈ ಹಾಕಿದರು.
ನೂರಾರು ಇಸ್ರೇಲಿ ವಿಜ್ಞಾನಿಗಳು ಇರಾನಿನ ಪ್ರಯೋಗಾಲಯಗಳಲ್ಲಿ ದುಡಿದರು. ಇಬ್ಬರೂ ಜೊತೆಯಾಗಿ ಸದ್ದಾಂ ಎಂಬ ಸರ್ವಾಧಿಕಾರಿಯ ವಿರುದ್ಧ ಹೋರಾಡಿದರು.
ಯಾವಾಗ ಅಯಾತುಲ್ಲಾ ರೊಮೆಲ್ಲಾ ಖೊಮೆನಿ ಎಂಬ ಕಟ್ಟರ್ ಮುಸ್ಲಿಂ ಜಿಹಾದಿಯೊಬ್ಬ ಇರಾನಿನ ಆಡಳಿತವನ್ನು ಕೈಗೆತ್ತಿಕೊಂಡನೋ ಆಗ ಪೂರ್ತಿ ಚಿತ್ರಣ ಬದಲಾಯಿತು. ಇದಾಗಿದ್ದು ೧೯೭೮-೭೯ರ ನಡುವೆ. ಸ್ವಚ್ಛಂದ ದೇಶವಾಗಿದ್ದ ಇರಾನಿನಲ್ಲಿ ಇದ್ದಕ್ಕಿದ್ದ ಹಾಗೆ ಇಸ್ಲಾಮಿಕ್ ಕ್ರಾಂತಿ ನಡೆದು ಪೂರ್ತಿ ದೇಶ ಮತೀಯವಾದಿಗಳ ಕೈಗೆ ಜಾರಿತು.
ಖೊಮೇನಿ ಇಸ್ರೇಲ್ ಜೊತೆಗೆ ತನ್ನ ದೇಶದ ಸಂಬಂಧವನ್ನು ಸಂಪೂರ್ಣ ಕಡಿತಗೊಳಿಸಿದ. ಇಸ್ರೇಲಿಗಳ ಎಲ್ಲಾ ಕಛೇರಿಗಳನ್ನು ಮುಚ್ಚಿ, ದೇಶ ಬಿಟ್ಟು ಹೋಗುವಂತೆ ಯಹೂದಿಗಳಿಗೆ ಖೊಮೇನಿ ಆದೇಶ ಮಾಡಿದ. ಇಸ್ರೇಲ್ ದೂತಾವಾಸದ ಕಛೇರಿ ಮೇಲೆ ಪ್ಯಾಲೇಸ್ತೀನ್ ಬಾವುಟ ಹಾರಿತು. ಅಲ್ಲಿವರೆಗೂ ಇಸ್ರೇಲ್ ಜೊತೆಗಿದ್ದ ಇರಾನ್ ಮತೀಯ ಕಾರಣದಿಂದ ಪ್ಯಾಲೆಸ್ತೀನ್ ಪರ ನಿಂತುಬಿಟ್ಟಿತು. ರಾತರಿ ಹಗಲಾಗುವುದರೊಳಗೆ ಆಪ್ತಮಿತ್ರರು ಬದ್ಧಶತ್ರುಗಳಾದರು.
ಇರಾನಿನಲ್ಲಿ ಇಸ್ರೇಲ್ ಆರಂಭಿಸಿದ್ದ ಅಣು ಅಸ್ತç ಅಭಿವೃದ್ಧಿ ಯೋಜನೆಯನ್ನು ಖೊಮೇನಿ ಮುಂದುವರೆಸಲು ನಿರ್ಧರಿಸಿದ. ಅದನ್ನು ತಾನು ಮೊದಲು ಇಸ್ರೇಲ್ ಮೇಲೆಯೇ ಪ್ರಯೋಗಿಸಲಿದ್ದೇನೆ ಎಂದು ಬಹಿರಂಗ ಬೆದರಿಕೆ ಹಾಕ ತೊಡಗಿದ. ಈಗ ಇಸ್ರೇಲಿಗೆ ಯಾವುದೇ ಮಾರ್ಗದಲ್ಲಾದರೂ ಆ ಯೋಜನೆಯನ್ನು ತಡೆಯಲೇ ಬೇಕಿತ್ತು. ಅದರ ಜವಾಬ್ದಾರಿಯನ್ನು ಇಸ್ರೇಲ್ ಮೊಸಾದ್ ಮುಖ್ಯಸ್ಥರ ಹೆಗಲಿಗಿಟ್ಟಿತು. ಆಗ ಉರುಳಿತು ನೋಡಿ ಹತ್ತಕ್ಕೂ ಅಧಿಕ ಇರಾನಿಯನ್ ವಿಜ್ಞಾನಿಗಳ ಹೆಣ. ಹೇಗೆ ? ಎಲ್ಲಿ ? ಯಾರಿಂದ ? ಎಂದು ಕೇಳಬೇಡಿ. ಒಂದರ ಮೇಲೆ ಒಂದರಂತೆ ಅಣು ವಿಜ್ಞಾನಿಗಳು ಸತ್ತು ಬೀಳ ತೊಡಗಿದರು. ಇರಾನಿನ ನ್ಯೂಕ್ಲಿಯರ್ ಪ್ಲಾಂಟ್ ಮೇಲೆ ಇಸ್ರೇಲ್ ನೇರ ದಾಳಿ ನಡೆಸಿ ಅದನ್ನು ಲಯ ಮಾಡಿಬಿಟ್ಟಿತು. ಆ ಬಳಿಕ ಇರಾನ್ ಅಂತಹದ್ದೊಂದು ಸಾಹಸಕ್ಕೆ ಕೈ ಇಡಲಿಲ್ಲ.
ಕಳೆದ ವರ್ಷ ೭ ಅಕ್ಟೋಬರ್ ೨೦೨೩ರಲ್ಲಿ ಪ್ಯಾಲೆಸ್ತೀನ್ ಉಗ್ರ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ ಇಸ್ರೇಲಿನೊಳಗೆ ನುಗ್ಗಿ ಅಮಾಯಕ ನಾಗರೀಕರನ್ನು ಕೊಂದು ಹೊತ್ತೊಯ್ದು ದಾಂದಲೆ ನಡೆಸಿದಾಗ ಇರಾನ್ ಶಬ್ಬಾಸ್ ಎಂದಿತು. ನಿಮ್ಮ ಜೊತೆಗೆ ನಾನಿದ್ದೇನೆ ಎಂಬ ಸಂದೇಶವನ್ನು ಕೂಡ ಇರಾನ್ ಹಮಾಸ್ ಉಗ್ರರಿಗೆ ನೀಡಿತು. ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರು ೮ ಅಕ್ಟೋಬರ್ ೨೦೨೩ರಂದು ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಬಹಿರಂಗವಾಗಿ ಇಸ್ರೇಲನ್ನು ಎದುರು ಹಾಕಿಕೊಂಡರು. ಇಸ್ರೇಲಿನ ಸೇನೆ ಒಂದೆಡೆ ತನ್ನೊಳಗಿನ ಶತ್ರುಗಳ ಜೊತೆಗೆ ಗಾಝಾದಲ್ಲಿ ಬಡಿದಾಡುತ್ತಿರಬೇಕಾದರೆ ಹಿಜ್ಬುಲ್ಲಾ ಮತ್ತಿತರ ಬಾಹ್ಯ ಶತ್ರುಗಳ ದಾಳಿಯನ್ನು ವಾಯು ಸೇನೆಯ ಮೂಲಕ ಎದುರಿಸುತ್ತಿತ್ತು.
ಸುತ್ತಲೂ ಮುತ್ತಿಕೊಂಡ ಶತ್ರುಗಳ ಜೊತೆಗೆ ಅಭಿಮನ್ಯುವಿನಂತೆ ಇಸ್ರೇಲ್ ಏಕಾಂಗಿಯಾಗಿ ಏಗುತ್ತಿರುವಾಗ ಜಗತ್ತು ಮಾತ್ರ ಆ ಪುಟ್ಟ ದೇಶದ ಅತ್ಮರಕ್ಷಣಾ ಹಕ್ಕನ್ನು ಸಮರ್ಥಿಸುವ ಬದಲು ಅದಕ್ಕೆ ನಿರ್ದಯಿ ನರಹಂತಕ ದೇಶ ಎಂಬ ಹಣೆಪಟ್ಟಿ ಕಟ್ಟುವ ತವಕದಲ್ಲಿತ್ತು. ಆದರೆ ಇಸ್ರೇಲ್ ಇಷ್ಟು ಕಾಲ ಹೋರಾಡಿದ್ದು ಕೇವಲ ಜೀವ ವಿರೋಧಿ ಇಸ್ಲಾಮಿಕ್ ಜಿಹಾದಿಗಳ ವಿರುದ್ಧ ಮಾತ್ರ. ಅಮಾಯಕರು ಒಂದು ವೇಳೆ ಸತ್ತಿದ್ದರೆ ಅದು ಉಗ್ರರ ಜೊತೆಗೆ ನಿಂತ ತಪ್ಪಿನಿಂದಲೇ ಹೊರತು ಇಸ್ರೇಲಿನಿಂದಾಗಿ ಅಲ್ಲ.
ಇಸ್ರೇಲನ್ನು ಅರಬ್ ನಾಡಿನಿಂದ ಒರೆಸಿ ಹಾಕುತ್ತೇವೆ ಎಂದು ಹೊರಟವರಿಗೆಲ್ಲಾ ಕೇವಲ ಒಂದೇ ವರ್ಷದಲ್ಲಿ ಇಸ್ರೇಲ್ ಗೋರಿ ಕಟ್ಟಿ ಬಿಟ್ಟಿದೆ.
ಇಸ್ರೇಲ್ ಕಳೆದ ಒಂದು ವರ್ಷದಲ್ಲಿ ಕೊಂದು ಮುಗಿಸಿದ ಉಗ್ರರ ಪಟ್ಟಿ ಹೀಗಿದೆ. ೨೫ ಡಿಸೆಂಬರ್ ೨೦೨೩ರಂದು ಸಿರಿಯಾದ ರಾಜಧಾನಿ ಡಮಸ್ಕಸ್‌ನಲ್ಲಿ ಐಆರ್‌ಜಿಸಿ ಕಮಾಂಡರ್ ರಾಝೀ ಮೊಸಾವಿಯ ಹತ್ಯೆ ಮಾಡಲಾಯಿತು , ೨ ಜನವರಿ ೨೦೨೪ರಂದು ಸಾಲೆ ಅಲ್ ಅರೂರಿ ಎಂಬ ಹಮಾಸ್‌ನ ಮುಖಂಡನ ಬೆರೂತಿನಲ್ಲಿ ಮುಗಿಸಲಾಯಿತು.
೧೦ ಮಾರ್ಚ್ ೨೦೨೪ ಅಲ್ ಕಸಂ ಬ್ರಿಗೇಡ್‌ನ ಕಮಾಂಡರ್ ಆಗಿದ್ದ ಮರ್ವಾನ್ ಈಸಾನನ್ನು ಗಾಝಾದಲ್ಲೇ ಹತ್ಯೆ ಮಾಡಲಾಯಿತು. ಈತ ಅಕ್ಟೋಬರ್ ಏಳರ ದಾಳಿಯ ಪ್ರಮುಖ ಸೂತ್ರದಾರನಾಗಿದ್ದ . ೧ ಎಪ್ರಿಲ್ ೨೦೨೪ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸದಲ್ಲಿ ಮೊಹಮ್ಮದ್ ರೆಝಾ ಝೈದಿ ಎಂಬ ಐ ಆರ್‌ಜಿಸಿ ಮುಖಂಡನ ಕೊಲೆಯಾಯಿತು. ಇದಕ್ಕೆ ಪ್ರತಿಯಾಗಿ ಇರಾನ್ ೩೦೦ ಮಿಸೈಲುಗಳನ್ನು ಇಸ್ರೇಲ್ ಮೇಲೆ ಹಾರಿಸಿತು. ೧೩ ಜುಲೈ ೨೦೨೪ರಂದು ಅಲ್ ಕಸಂ ಬ್ರಿಗೇಡಿನ ಮತ್ತೊಬ್ಬ ನಾಯಕ ಮೊಹಮ್ಮದ್ ದಿಯೇಫ್ ಸತ್ತು ಬಿದ್ದ. ೩೦ ಜುಲೈ ೨೦೨೪ ಬೇರೂತಿನಲ್ಲಿ ಫೂವಾದ್ ಶೂಕ್ರ್ ಎಂಬ ಹಿಜ್ಬುಲ್ಲಾದ ಸಂಸ್ಥಾಪಕ ಸದಸ್ಯನನ್ನು ಕೊಂದು ಹಾಕಿತು. ಇವನ ಕೊಲೆಯ ನಂತರ ನಸ್ರಲ್ಲಾನ ಸರತಿ ಬಂತು .
೩೦ ಜುಲೈ ರಾತ್ರಿ ಹಮಾಸ್‌ನ ಜನಪ್ರಿಯ ನಾಯಕ ಇಸ್ಮಾಯಿಲ್ ಹನಿಯಾನ ಕೊಲೆಯಾಯಿತು. ಈತ ಇರಾನಿನ ಮಸೂದ್ ಪ್ರಿಸೇಷ್ಕಯಾನ್‌ನ ಶಪಥಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ. ಮಸೂದನ ಕೈ ಕುಲುಕಿ ಬಂದು ಮಲಗಿದವನನ್ನು ಇಸ್ರೇಲ್ ಆತ ಮಲಗಿದ ಕೋಣೆಯ ಸಮೇತ ಸ್ಪೋಟ ಮಾಡಿಬಿಟ್ಟಿತು.
೨೭ ಸೆಪ್ಟೆಂಬರ್ ೨೦೨೪ರಂದು ಇಸ್ರೇಲ್ ಹಿಜ್ಬುಲ್ಲಾದ ಮುಖ್ಯಾಲಯದ ಮೇಲೆ ಬಾಂಬು ಹಾಕಿತು. ಆಗ ಅಲ್ಲಿ ಹಸನ್ ನಸ್ರಲ್ಲಾಹ್ ಮತ್ತಿತರ ಪ್ರಮುಖರು ಇಸ್ರೇಲಿನ ಮೇಲೆ ಅಚ್ಚರಿಯ ದಾಳಿ ನಡೆಸುವ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ಅಚ್ಚರಿಯ ದಾಳಿ ನಡೆದೇ ಬಿತ್ತು. ಅಲ್ಲಿದ್ದವರ ಹೆಣಗಳೂ ಪೂರ್ತಿಯಾಗಿ ಸಿಗಲಿಲ್ಲ. ಹಸನ್ ನಸ್ರಲ್ಲಾ ಜೊತೆಗೆ ಅನೇಕ ಪ್ರಮುಖ ಕಮಾಂಡರ್‌ಗಳು ಈ ಘಟನೆಯಲ್ಲಿ ಹತ್ಯೆಯಾದರು. ಒಂದು ಮೂಲದ ಪ್ರಕಾರ ಐಆರ್‌ಜಿಸಿಯ ಹಿರಿಯ ಕಮಾಂಡರ್ ಅಬ್ಬಾಸ್ ನೀಲ್ಫರ್ ಶಾಹ್ ಕೂಡ ಆವತ್ತೇ ಸತ್ತಿದ್ದಾನೆ ಎಂಬ ಮಾಹಿತಿ ಇದೆ.
ನಸ್ರಲ್ಲಾಹ್ ಹತ್ಯೆ ಹಿಜ್ಬುಲ್ಲಾದ ಪಾಲಿಗೆ ಮಾರಣಾಂತಿಕ ಹೊಡೆತವಾಗಿದೆ. ಕಳೆದ ೩೨ ವರ್ಷಗಳಿಂದ ಈತನೇ ಹಿಜ್ಬುಲ್ಲಾ ಎಂಬ ರಕ್ಕಸ ಪಡೆಯನ್ನು ಮುನ್ನಡೆಸುತ್ತಿದ್ದ. ಈತನೇ “ಆಕ್ಸಿಸ್ ಆಫ್ ರೆಸಿಸ್ಟೆನ್ಸ್” ಎಂಬ ಉಗ್ರ ಸಂಘಟನೆಗಳ ಒಕ್ಕೂಟ ರಚಿಸಿ ಇಸ್ರೇಲಿನ ಸರ್ವನಾಶಕ್ಕೆ ಸಂಚು ರೂಪಿಸಿದ್ದು, ಇರಾನ್ ಈತನ ಸಾವಿಗೆ ಐದು ದಿನಗಳ ಶೋಕಾಚರಣೆ ಘೋಷಿಸಿ ಬಾಯಿ ಬಡಿದುಕೊಂಡಿದೆ ಎಂದರೆ ಈತ ಅದೆಷ್ಟು ಪ್ರಭಾವಿ ವ್ಯಕ್ತಿಯಾಗಿದ್ದ ಒಮ್ಮೆ ಯೋಚಿಸಿ.
ಇರಾನ್ ಮೊನ್ನೆ ಒಂದನೇ ತಾರೀಕಿನ ದಾಳಿಗೆ ಮುಂದಾಗಿದ್ದು ನಸ್ರಲ್ಲಾಹ್‌ನ ಸಾವಿಗೆ ಪ್ರತಿಕಾರ ತೀರಿಸಲು ಎನ್ನುವುದು ಒಂದು ವಾದವಾದರೆ ಇನ್ನೊಂದು ವಾದ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಗ್ರೂಪಿನ ಮುಖ್ಯಸ್ಥನಾಗಿದುಕೊಂಡು ಇರಾನ್ ಕೈ ಕಟ್ಟಿ ಕುಳಿತ ಕಾರಣ ಇರಾನ್ ಮುಸ್ಲಿಂ ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಗಿದೆ. ಈ ಮುಜುಗರ ತಪ್ಪಿಸಲು ಅದು ದಾಳಿ ನಡೆಸಿದೆ.
ಅದು ಮುಖ ಉಳಿಸಿಕೊಳ್ಳಲಷ್ಟೇ ದಾಳಿ ನಡೆಸಿದೆ ಎನ್ನುವುದು ಅದು ಹಾರಿಸಿರುವ ೧೮೨ ಮಿಸೈಲುಗಳಿಂದಲೇ ಸ್ಪಷ್ಟವಾಗುತ್ತದೆ. ಅದು ಇಸ್ರೇಲಿನ ಭಯವನ್ನು ಬಗಲಲ್ಲಿ ಕಟ್ಟಿಕೊಂಡೇ ಹೊಡೆಯುವಂತ ನಾಟಕ ನಡೆಸಿದೆ. ಆದರೆ ಈ ದಾಳಿ ಇರಾನಿನ ಪಾಲಿಗೆ ದುಬಾರಿಯಾಗಲಿದೆ. ಲೆಬನಾನ್ ಮತ್ತು ಗಾಝಾದ ಹಾಗೆ ಇಸ್ರೇಲ್ ಜೊತೆಗೆ ಬೌಗೋಳಿಕ ಸೀಮೆಗಳು ಇಲ್ಲದ ಕಾರಣ ಸೇನೆ ನುಗ್ಗುವ ಸಾಧ್ಯತೆಗಳಿಲ್ಲವಾದರೂ ಇಸ್ರೇಲ್ ಮತ್ತು ಇರಾನ್ ನಡುವೆ ಮಿಸೈಲ್ ಮತ್ತು ರಾಕೇಟುಗಳ ದಾಳಿ ಪ್ರತಿದಾಳಿ ನಡೆಯಬಹುದು. ಲಡಾಕು ವಿಮಾನಗಳ ಮೂಲಕ ಇರಾನಿನ ಪ್ರಮುಖ ನಗರಗಳನ್ನು ಉದ್ವಸ್ತಗೊಳಿಸಬಹುದು.
ತನ್ನ ಗುಪ್ತಚರ ಏಜೆಂಟ್‌ಗಳ ಮೂಲಕ ಇರಾನಿನ ಪ್ರಮುಖರ ಹತ್ಯೆ ಮಾಡಿಸಬಹುದು. ಅರಾಜಕತೆ ಸೃಷ್ಟಿಸಿ ಸರಕಾರವನ್ನು ಮುಗುಚಿ ಹಾಕಬಹುದು, ಇರಾನಿನಲ್ಲಿ ಜನರ ಮೂಲಕ ದಂಗೆ ಎಬ್ಬಿಸಬಹುದು. ತೈಲ ಸಾಗಣೆಯ ಸಂಪರ್ಕಗಳ ಮೇಲೆ ದಾಳಿ ನಡೆಸಿ ಹಿಡಿತ ಸಾಧಿಸಬಹುದು. ಹತ್ತು ವರ್ಷಗಳ ಹಿಂದೆ ಮಾಡಿದಂತೆ ಇರಾನಿನ ನ್ಯೂಕ್ಲಿಯರ್ ಪ್ರೋಜೆಕ್ಟ್ ಮೇಲೆ ಸೈಬರ್ ದಾಳಿ ನಡೆಸಬಹುದು. ಅಥವಾ ಆ ರಿಸರ್ಚ್ ಸ್ಟೇಷನನ್ನೇ ದ್ವಂಸ ಮಾಡಬಹುದು.
ಒಂದು ವೇಳೆ ಯುದ್ಧ ನಡೆದೇ ಬಿಟ್ಟರೆ ಅದರಲ್ಲಿ ಇಸ್ರೇಲ್ ಬದುಕಿ ಉಳಿಯಲು ಸಾಧ್ಯವೇ ? ಈ ಪ್ರಶ್ನೆ ಅನೇಕರಲ್ಲಿದೆ. ಇಂಟರ್‌ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ಸ್ಟಾಟಜಿಕ್ ಸ್ಟಡಿ ಪ್ರಕಾರ ಇರಾನಿನ ಜನಸಂಖ್ಯೆ ಇಸ್ರೇಲಿಗಿಂತ ಹತ್ತು ಪಟ್ಟು ಹೆಚ್ಚಿದ್ದರೂ ರಕ್ಷಣಾ ಬಜೆಟ್‌ನಲ್ಲಿ ಇಸ್ರೇಲ್ ಇರಾನಿಗಿಂತ ೮ ಪಟ್ಟು ಅಧಿಕವಿದೆ. ಇಸ್ರೇಲ್ ಈಗಾಗಲೇ ೩೪೦ ಜೆಟ್ ಫೈಟರ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಇಸ್ರೇಲ್ ಬತ್ತಳಿಕೆಯಲ್ಲಿರುವ ಎಫ್ ೧೫ ದೂರದ ಗುರಿಯನ್ನು ನಿಖರವಾಗಿ ಹೊಡೆಯುವ ಸಾಮರ್ಥ್ಯ ಹೊಂದಿದ್ದರೆ ಎಫ್ ೩೫ ವಿಮಾನ ರಡಾರುಗಳನ್ನೇ ಯಾಮಾರಿಸಿ ಶತ್ರುದೇಶದೊಳಗೆ ನುಗ್ಗಿ ಅಲ್ಲೊಲ ಕಲ್ಲೋಲ ಮಾಡಬಲ್ಲವು.
ಇನ್ನು ಇರಾನ್ ಬಳಿ ಇರುವ ಎಫ್೪ಎಸ್, ಎಫ್೫ಎಸ್ ,ಎಫ್೧೪ಎಸ್, ಯುದ್ಧ ವಿಮಾನಗಳು ೧೯೬೦ರ ಕಾಲದ್ದು. ಆದರೆ ಬ್ಯಾಲೆಸ್ಟಿಕ್ ಮಿಸೈಲುಗಳು ಮತ್ತು ಡ್ರೋನ್ ತಂತ್ರಜ್ಞಾನದಲ್ಲಿ ಇರಾನ್ ಸಾಕಷ್ಟು ಮುಂದುವರೆದಿದೆ. ಅದರ ಬಳಿ ಕನಿಷ್ಟ ಮೂರು ಸಾವಿರ ಬ್ಯಾಲೆಸ್ಟಿಕ್ ಮಿಸೈಲುಗಳಿವೆ ಎಂದು ಕೆಥೆನ್ ಮೆಕಂಝಿ ಎಂಬ ಅಮೇರಿಕಾದ ಮಿಲಿಟರಿ ಅಧಿಕಾರಿ ಹೇಳಿದ್ದು ನೆನಪು.
ಇರಾನ್ ಕೊಟ್ಟ ಮಿಸೈಲುಗಳನ್ನೇ ಹೌತಿ ಉಗ್ರರು ಹಿಂದೆ ಸೌದಿ ಮೇಲೆ ಹಾರಿಸಿದ್ದರು. ಉಗ್ರ ಸಂಘಟನೆಗಳಿಗೆ ಸಧ್ಯ ಮಿಸೈಲು ಪೂರೈಸುತ್ತಿರುವುದು ಇರಾನ್ ಎಂಬ ಸತ್ಯ ಜಗಜ್ಜಾಹೀರಾಗಿದೆ. ಆದರೆ ಈ ಮಿಸೈಲುಗಳನ್ನು ತಡೆಯಲು ಇಸ್ರೇಲ್ ಬಳಿಯೂ ವ್ಯಸ್ಥೆ ಇದೆ. ಏರೋ ಸಿಸ್ಟಂ , ಡೇವಿಡ್ ಸ್ಲಿಂಗ್, ಐರನ್ ಡೋಂ ಹೀಗೆ ಅನೇಕ ತಂತ್ರಜ್ಞಾನಗಳನ್ನು ಇಸ್ರೇಲ್ ಅಭಿವೃಧ್ಧಿ ಪಡಿಸಿದೆ.
ಯೋಧರ ಸಂಖ್ಯಾ ದೃಷ್ಠಿಯಲ್ಲಿ ನೋಡಿದರೂ ಇರಾನಿನ ಬಳಿ ೬ ಲಕ್ಷ ಯೋಧರಿದ್ದರೆ ಇಸ್ರೇಲ್ ಬಳಿ ಇರುವುದು ಕೇವಲ ೧ ಲಕ್ಷ ಎಪ್ಪತ್ತು ಸಾವಿರ ಯೋಧರು. ಆದರೆ ಯುದ್ಧ ಕಾಲದಲ್ಲಿ ಇಸ್ರೇಲ್ ಜೇನು ಗೂಡಾಗಿ ಬಿಡುತ್ತದೆ. ಹದಿನೆಂಟು ದಾಟಿದವರೆಲ್ಲಾ ಗಂಡು ಹೆಣ್ಣೆಂಬ ಭೇದವಿಲ್ಲದೆ ಬಂದೂಕು ಕೈಗೆತ್ತಿಕೊಳ್ಳುತ್ತಾರೆ. ಈಗಂತೂ ಇಸ್ರೇಲ್ ಹಿಂದೆಂದಿಗಿಂತಲೂ ವ್ಯಗ್ರವಾಗಿದೆ. ಇಸ್ರೇಲಿನ ಪೂರ್ವ ಪ್ರಧಾನಿ ಬೆನೆಟ್ ನಫ್ತಾಲಿ ಅವರು ಒಂದು ಟ್ವೀಟ್ ಮಾಡಿದ್ದಾರೆ ಅದರಲ್ಲಿ ಅವರು ಕಳೆದ ಐವತ್ತು ವರ್ಷದಲ್ಲಿ ನಮಗೆ ಒದಗಿರದ ಅವಕಾಶ ಈಗ ಒದಗಿದೆ. ಇರಾನ್ ನ ನ್ಯೂಕ್ಲಿಯರ್ ಪ್ರೋಗ್ರಾಂ ನಾಶಮಾಡಲು ನಮಗೆ ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಇರಾನ್ ಈ ಅಪಾಯವನ್ನು ಗೊತ್ತಿದ್ದೂ ಮೈ ಮೇಲೆ ಎಳೆದುಕೊಂಡಿರಬಹುದೇ ?
ಇರಾನಿನ ರಾಷ್ಟ್ರಪತಿಯಾಗಿರುವ ಮಸೂದ್ ಅವರು ಮೊನ್ನೆ ನಡೆದ ದಾಳಿಗೆ ಸಮ್ಮತಿಸಿರಲಿಲ್ಲ ಎಂಬ ವಿಚಾರವನ್ನು ನ್ಯೂಯಾರ್ಕ್ ಟೈಂ ವರದಿ ಮಾಡಿದೆ. ಆದರೆ ಸೇನಾ ಕಮಾಂಡರ್‌ಗಳು ಮಾತ್ರ ನಾವು ಇಸ್ರೇಲಿನ ಪ್ರತಿಯೊಂದು ಮಹತ್ವದ ಕಟ್ಟಡಗಳ ಮೇಲೆ ಬಾಂಬು ದಾಳಿ ನಡೆಸುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ ಅಸಲಿಗೆ ಇರಾನ್ ಸೇನೆ ಕಾರ್ಯಾಚರಿಸುವುದು ರಾಷ್ಟ್ರಪತಿಯ ಆದೇಶದ ಮೇಲಲ್ಲ ಅದು ಕೇಳುವುದು ಅಲ್ಲಿನ ಅಯಾತೊಲ್ಲ ಖೊಮೆನಿಗಳ ಮಾತು ಮಾತ್ರ.
ಅಲ್ಲಿ ಡೆಮೋಕ್ರಸಿ , ಬ್ಯೂರೋಕ್ರಸಿ, ರಾಜಾಡಳಿತಕ್ಕಿಂತ ಭಿನ್ನವಾದ ಒಂದು ವ್ಯವಸ್ಥೆ ಇದೆ ಅದನ್ನು “ಥಿಯೋಕ್ರಸಿ” ಎನ್ನುತ್ತಾರೆ. ಧರ್ಮಗುರುಗಳೇ ಇರುವ ಗಾರ್ಡಿಯನ್ ಕೌನ್ಸಿಲ್ ಅಲ್ಲಿ ಸುಪ್ರಿಂ. ಇದರ ಮುಖ್ಯಸ್ಥ ಅಲಿ ಅಯಾತುಲ್ಲ ಖೋಮೆನಿ ಕೆಲವು ಸಮಯದ ಹಿಂದೆ ಮುಸಲ್ಮಾನರಿಗೆ ಭಾರತ ಸುರಕ್ಷಿತ ಸ್ಥಳ ಅಲ್ಲ ಎಂದು ಹೇಳಿಕೆ ನೀಡಿದ್ದ.! ಈಗ ಇಸ್ರೇಲಿನ ಮೀಸೈಲುಗಳು ಅವನನ್ನೇ ಹುಡುಕುತ್ತಿವೆ. ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ಬೆಕ್ಕು ತನ್ನ ಮರಿಗಳನ್ನು ಅಡಗಿಸಿಡುವ ಹಾಗೆ ಇರಾನಿನ ಭದ್ರತಾ ಅಧಿಕಾರಿಗಳು ಈ ಖೋಮೇನಿಯನ್ನು ದಿನಕ್ಕೊಂದು ಸ್ಥಳದಲ್ಲಿ ಅಡಗಿಸಿಡುತ್ತಿದ್ದಾರೆ.
ಇರಾನಿ ಸೇನೆಗೆ ಇಸ್ರೇಲ್ ಮೇಲೆ ದಾಳಿ ಮಾಡುವಂತೆ ಸೂಚಿಸಿದ್ದು ಇದೇ ಖೋಮೇನಿಗಳ ಪಟಾಲಮ್ಮು . ಈ ಮೆದುಳಿಲ್ಲದ ಮುಂಡಾಸುಧಾರಿಗಳು ಇರಾನಿನ ಭವಿಷ್ಯವನ್ನು ಮೂರಾಬಟ್ಟೆ ಮಾಡುವ ಒಂದು ಅವಕಾಶವನ್ನೂ ಬಿಟ್ಟುಕೊಟ್ಟವರಲ್ಲ. ಈ ಬಾರಿಯೂ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ.
(ವಾಟ್ಸಪ್ ಕೃಪೆ)