ಮೂಡಲಗಿ: ಕೇಂದ್ರೀಯ ಆಡಳಿತಾತ್ಮಕ ಅನುಸೂಚಿತ ಭಾಷಾ ಸಮಿತಿಯ ಸದಸ್ಯರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಸಂಸತ್ತಿನ ಸಚಿವಾಲಯದ ಹೆಚ್ಚುವರಿ ನಿರ್ದೇಶಕ ಆರ್.ಪಿ.ತಿವಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭಾ ಸದಸ್ಯರು 20 ಜನ, ರಾಜ್ಯಸಭಾ ಸದಸ್ಯರು 10 ಜನ ಸೇರಿದಂತೆ ಒಟ್ಟು 30 ಜನ ಸದಸ್ಯರನ್ನು ಈ ಸಮಿತಿಯು ಒಳಗೊಂಡಿರುತ್ತದೆ. ಕೇಂದ್ರ ಗೃಹ ಸಚಿವ ಅಮಿತ ಶಾ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೇಂದ್ರೀಯ ಆಡಳಿತಾತ್ಮಕ ಅನುಸೂಚಿತ ಭಾಷಾ ಸಮಿತಿಯ ಸದಸ್ಯರಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕರ್ನಾಟಕ ರಾಜ್ಯದ ಸದಸ್ಯರಾಗಿ ರಾಷ್ಟ್ರಮಟ್ಟದಲ್ಲಿ ಆಯ್ಕೆಗೊಂಡಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕ್ರಿಯಾಶೀಲ ವ್ಯಕ್ತಿತ್ವ ಪರಿಗಣಿಸಿ ಕೇಂದ್ರ ನಾಯಕತ್ವ ಜವಾಬ್ದಾರಿಗಳನ್ನು ನೀಡಿದೆ. ಈರಣ್ಣ ಕಡಾಡಿ ಅವರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿವಿಧ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವುದು ರಾಜ್ಯದ ಜನತೆ ಹೆಮ್ಮೆಪಡುವಂತಾಗಿದೆ.