spot_img
spot_img

ಬೆಳಗಾವಿಯಲ್ಲಿ ನೌಕರರ ಆಸ್ಪತ್ರೆ ಮತ್ತು ವಿಮಾ ನಿಗಮ ಸ್ಥಾಪನೆಗೆ ಕಡಾಡಿ ಮನವಿ

Must Read

spot_img

ಮೂಡಲಗಿ: ಬೆಳಗಾವಿ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಇ.ಎಸ್.ಐ.ಸಿ (ESIC) ಆಸ್ಪತ್ರೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯಸಭೆಯಲ್ಲಿ ಸಂಸದರಾದ ಈರಣ್ಣ ಕಡಾಡಿ ಒತ್ತಾಯಿಸಿದರು.

ಗುರುವಾರ (ಮಾ 18) ರಂದು ನವದೆಹಲಿ ಸಂಸತ್ ಅಧಿವೇಶನದ ಕಾರ್ಯ ಕಲಾಪದ ಶೂನ್ಯ ಅವಧಿಯಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು ಬೆಳಗಾವಿ ಕರ್ನಾಟಕದ ವಾಯುವ್ಯ ಭಾಗದಲ್ಲಿ ಕೈಗಾರಿಕಾ ಪ್ರದೇಶವಾಗಿದ್ದು, ಸಕ್ಕರೆ ಕಾರ್ಖಾನೆಗಳ ನೆಲೆಬೀಡಾಗಿದೆ. ಪ್ರಮುಖವಾಗಿ ಕಬ್ಬು, ಹತ್ತಿ, ತಂಬಾಕು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ 36 ದೊಡ್ಡ ಕೈಗಾರಿಕೆಗಳಿವೆ, ಅವುಗಳಲ್ಲಿ ಪ್ರಮುಖ ಉತ್ಪಾದನಾ ಚೀನಿ, ಫೌಂಡ್ರಿ, ಕಬ್ಬಿಣ, ಅಲ್ಯೂಮಿನಿಯಂ ಮತ್ತು ಪಾಲಿಹೈಡ್ರಾನ್ ಕಾರ್ಖಾನೆಗಳಿವೆ. ಕರ್ನಾಟಕದ ಪ್ರಮುಖ ಚೀನಿ ಉತ್ಪಾದನಾ ಕಾರ್ಖಾನೆಗಳು ಬೆಳಗಾವಿಯಲ್ಲಿವೆ ಎಂದರು.

ಎಕಸ್ ಎಸ್.ಈ.ಜೆಢ್ ಏರೋಸ್ಪೇಸ್ ತಯಾರಿಕೆ ಘಟಕ ಹೀಗೆ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳ ಉಪಸ್ಥಿತಿಯಿಂದಾಗಿ, ದಿನಕ್ಕೆ ಎರಡು ಲಕ್ಷಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದಾರೆ. ಇ.ಎಸ್.ಐ.ಸಿ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಉತ್ತಮವಾದ ಆಸ್ಪತ್ರೆ ಇಲ್ಲದಿರುವ ಕಾರಣ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗಿದೆ ಮತ್ತು ಇ.ಎಸ್.ಐ.ಸಿ ಆಸ್ಪತ್ರೆ ಇಲ್ಲದ ಕಾರಣ ಮತ್ತು ತುರ್ತು ವೈದ್ಯಕೀಯ ನೆರವು ಸಾಧ್ಯವಿಲ್ಲ ಆದ್ದರಿಂದ ಕರ್ಮಚಾರಿಗಳ ಹಿತದೃಷ್ಟಿಯಿಂದ ಕೈಗಾರಿಕೆಗಳ ನಾಡು ಬೆಳಗಾವಿಯ ಉದ್ಯಮಭಾಗದಲ್ಲಿ ಒಂದು ಸುಸಜ್ಜಿತವಾದ ಇ.ಎಸ್.ಐ.ಸಿ ಆಸ್ಪತ್ರೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವ ಅವಶ್ಯಕತೆ ಇದೆ ಇದರಿಂದ ಲಕ್ಷಾಂತರ ಕಾರ್ಮಿಕರ ಪರಿವಾರದವರಿಗೆ ಆರೋಗ್ಯದ ರಕ್ಷಣೆಯನ್ನು ನೀಡಿದಂತಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ತದನಂತರ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರಾದ ಸಂತೋಷಕುಮಾರ ಗಂಗ್ವಾರ್ ಅವರ ಕಛೇರಿಗೆ ಭೇಟಿ ನೀಡಿ, ಬೆಳಗಾವಿ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಇ.ಎಸ್.ಐ.ಸಿ (ESIC) ಆಸ್ಪತ್ರೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!