ಮೂಡಲಗಿ – ಹಾದಿ ಬೀದೀಲಿ ಹೋಗೋರನ್ನೆಲ್ಲಾ ಕರೆದು ಟಿಕೆಟ್ ಕೊಡಲಿಕ್ಕೆ ಇದೇನು ಬಸ್ ಟಿಕೆಟ್ಟಾ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ ಪ್ರಶ್ನೆ ಮಾಡಿದರು.
ತಾಲೂಕಿನ ಕಲ್ಲೋಳಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ಆಸ್ತಿಯನ್ನು ಅಣ್ಣ ತಮ್ಮಂದಿರು ಹಂಚಿಕೊಳ್ಳಬೇಕು ನೆರೆಹೊರೆಯವರಿಗೆ ಆಸ್ತಿಯಲ್ಲಿ ಪಾಲು ಕೊಡಲು ಬರುವುದಿಲ್ಲ ಅದೇ ರೀತಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಒಂದು ಘನತೆಯಿದೆ ಯಾರೋ ಹಾದಿ ಬೀದೀಲಿ ಹೋಗುವವರು ಕೇಳಿದರೆ ಕೊಡಲಿಕ್ಕೆ ಅದೇನು ಬಸ್ ಟಿಕೆಟ್ಟಾ ಎಂದರು.
ನಾನು ಬಾಲಚಂದ್ರ ಜಾರಕಿಹೊಳಿಯವರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಗಡಾದ ಮತ್ತು ಕಂಪನಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನೆಂದೂ ಸ್ವಾಭಿಮಾನ ಬಿಟ್ಟು ನಡೆದಿಲ್ಲ. ಕೊರೋನಾ ಕಾಲದಲ್ಲಿ ಜಾರಕಿಹೊಳಿಯವರಿಂದ ಗಡಾದ ಅವರು ಕಿಟ್ ಪಡೆದಿದ್ದಾರೆ ಆದರೆ ನಾನು ಪಡೆದುಕೊಂಡಿಲ್ಲ. ನಾನೇ ಬೇರೆಯವರಿಗೆ ನೀಡಿದ್ದೇನೆ ಹೊರತು ಪಡೆದುಕೊಂಡಿಲ್ಲ ಎಂದರು.
ಯಾರು ಕಾಂಗ್ರೆಸ್ ಪಕ್ಷಕ್ಕಾಗಿ ಸೇವೆ ಮಾಡಿದ್ದಾರೋ, ಯಾರು ಪಕ್ಷದ ಸೇವೆ ಮಾಡಿದ್ದಾರೋ, ಯಾರು ಕೆಪಿಸಿಸಿ, ಎಐಸಿಸಿ ನಿರ್ದೇಶನದ ಪ್ರಕಾರ ಹೋರಾಟ ಮಾಡಿದ್ದಾರೋ, ಕಾಂಗ್ರೆಸ್ ಪಕ್ಷವನ್ನು ಗಂಟು ಮೂಟೆ ಕಟ್ಟಿ ಎನ್ಎಸ್ಎಫ್ ಕಚೇರಿಯ ಒಂದು ಕೋಣೆಯ ಮೂಲೆಯಲ್ಲಿ ಕೂಡಿಹಾಕಿದ್ದನ್ನು ಬಿಡಿಸಿಕೊಂಡು ಬಂದರೊ ಅವರಿಗೆ ಟಿಕೆಟ್ ಕೊಡುತ್ತಾರೆ ಹೊರತು ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿದವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲು ಆಗುವುದಿಲ್ಲ ಎಂದ ಅರವಿಂದ ದಳವಾಯಿಯವರು, ಗಡಾದ ಅವರೇ ನೀವು ಜೆಡಿಎಸ್ ನಲ್ಲಿ ಇದ್ದುಕೊಂಡು ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದೀರಿ, ಹಾದಿ ಬೀದೀಲಿ ಹೋಗುವವರಿಗೆ ಟಿಕೆಟ್ ಕೊಡಲಿಕ್ಕೆ ಇದೇನು ಬಸ್ ಟಿಕೆಟ್ಟಾ ಗಡಾದ ಅವರೇ…..ಎಂದು ಟಾಂಗ್ ಕೊಟ್ಟರು.
ವರದಿ: ಉಮೇಶ ಬೆಳಕೂಡ