ಬಾಗಲಕೋಟೆ – ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ತಾಲಿಬಾನಿಗಳು, ಮನುಷ್ಯತ್ವ ಇಲ್ಲದವರು, ರಾಕ್ಷಸಿ ಪ್ರವೃತ್ತಿ ಇರುವವರು ಅವರೆಲ್ಲ ತಾಲಿಬಾನಿಗಳು.ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಅದಕ್ಕೇ ಅವರಿಗೆ ತಾಲಿಬಾನಿಗಳು ಅಂತ ಕರೆದಿದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುರುಚ್ಚರಿಸಿದ್ದಾರೆ.
ಬಾದಾಮಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬಿಜೆಪಿಯವರಿಗೆ ಇಲ್ಲ.ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರ ಆಡಳಿತ ನಡೆಸೋದಿಲ್ಲ ಅವರು ಅದಕ್ಕೆ ಅವರಿಗೆ ತಾಲಿಬಾನಿಗಳು ಹಿಟ್ಲರ್ ವಂಶಸ್ಥರು ಅಂತ ಕರೆಯೋದು ನಾನು ಎಂದರು.
ಸಿ ಟಿ ರವಿಗೆ ತಿರುಗೇಟು
ಸಿ ಟಿ ರವಿಯವರ ಮಾತುಗಳಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ,ದೇಶಕ್ಕೆ ಸ್ವಾತಂತ್ರ್ಯ ಆರ್ ಎಸ್ ಎಸ್ ನಿಂದ ಬಂದಿದೆಯಾ? ಗೋಡ್ಸೆಯಿಂದ ಸ್ವಾತಂತ್ರ್ಯ ಬಂದಿತ್ತಾ ? ಸಾವರ್ಕರ್ ರಿಂದ ಬಂದಿತ್ತಾ ? ಎಂದು ಪ್ರಶ್ನೆ ಮಾಡಿದರು.
ಮಹಾತ್ಮಾ ಗಾಂಧಿ, ಗೋಖಲೇ, ತಿಲಕ್ ರವರು, ಲಜಪತ್ ರಾಯ್, ನೆಹರೂ ಅವರಿಂದ ಸ್ವಾತಂತ್ರ್ಯ ಬಂದಿದೆ.ಅವರಿಗೆ ಇತಿಹಾಸ ಗೊತ್ತಿಲ್ಲ ಪಾಪ..ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನವರು ಯಾರಾದ್ರೂ ಒಬ್ರು ಸತ್ತಿದ್ದಾರಾ ದೇಶಕ್ಕೋಸ್ಕರ ? ಸಿ ಟಿ ರವಿನಾ ಕೇಳಿ ನಿಮ್ಮಲ್ಲಿ ಯಾರಾದ್ರೂ ದೇಶಕ್ಕೊಸ್ಕರ ಸತ್ತಿದ್ದಾರಾ ಅಂತ. ತ್ಯಾಗ, ಬಲಿದಾನ, ಪ್ರಾಣ ಕೊಟ್ಟೋರು ದೇಶ ಭಕ್ತರು. ಸಿಟಿ ರವಿಯಿಂದ ದೇಶ ಭಕ್ತಿ ಪಾಠ ಕಲಿಬೇಕಾ? ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದರು.