ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥರು ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ ಸಕಲ ಇಷ್ಟಾರ್ಥದಾಯಕ ಗಣಪ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಬೆಂಗಳೂರು: ಇಂದು ವಿಘ್ನೇಶ್ವರ ಗಣೇಶ ಚತುರ್ಥಿ ಹಬ್ಬ ಆಚರಣೆಯಾಗುತ್ತಿದೆ. ಕೊರೋನಾ ತಗ್ಗಿರುವ ಹಿನ್ನೆಲೆ ಸರ್ಕಾರ ಚೌತಿ ಆಚರಣೆಗೆ ಷರತ್ತು ಬದ್ಧ ಅನುಮತಿಕೊಟ್ಟಿದೆ. ಹೀಗಾಗಿ ನಾಡಿನ ಎಲ್ಲೆಡೆ ಅದ್ದೂರಿಯಾಗಿ ಗೌರಿ ಗಣೇಶ ಹಬ್ಬ ಆಚರಣೆಯಾಗುತ್ತಿದೆ. ಪ್ರತಿ ವರ್ಷವೂ ಅದ್ದೂರಿಯಾಗಿ ಬೆಂಗಳೂರಿನಲ್ಲಿ  ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥರು ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ  ಸಕಲ ಇಷ್ಟಾರ್ಥದಾಯಕ ಶಕ್ತಿ ಗಣಪನ  ಸನ್ನಿಧಿಯಲ್ಲಿಯೂ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸಾರ್ವಜನಿಕವಾಗಿ ಆಚರಿಸಿದೆ ಎಂದಿನಂತೆ ಪೂಜೆ ಕೈಂಕರ್ಯಗಳು ಸಕಲ ಇಷ್ಟಾರ್ಥದಾಯಕ ಶಕ್ತಿ ಗಣಪನ ದೇವಾಲಯದಲ್ಲಿನೇರವೇರಿತು.

ಪೇಜಾವರ  ಶ್ರೀ ಶ್ರೀ ವಿಶ್ವೇಶ ತೀರ್ಥರು ಶ್ರೀ ಪಾದರಿಂದ ಪ್ರತಿಷ್ಠಾಪನೆಗೊಂಡ ಶ್ರೀಶಕ್ತಿ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಶ್ರೀ ಶಕ್ತಿ ಗಣಪತಿಗೆ ಬೆಳ್ಳಿಯ ಕಿರೀಟ, ಮುಖವಾಡ, ಕವಚವನ್ನು ಧಾರಣೆ ಮಾಡಿ, ವಿಶೇಷ ಅಲಂಕಾರ ಮಾಡಲಾಗಿತ್ತು  .

ಸಕಲ ಇಷ್ಟಾರ್ಥದಾಯಕ ಶಕ್ತಿ ಗಣಪ ದೇವಸ್ಥಾನದ ಹಿನ್ನೆಲೆ, ಇಲ್ಲಿನ ವಿಶೇಷವೇನು?

ನಗರದ ಬನಶಂಕರಿ 3ನೇ ಹಂತದ ಹೊಸಕ್ಕೇರಿ ಹಳ್ಳಿಯ ಗ್ರಾಮಕ್ಕೆ ಸಮೀಪದಲ್ಲಿರುವ ಶ್ರೀ ದತ್ತ ಪೀಠದಿಂದ ಕೊಗಳತೆಯ ದೂರದಲ್ಲಿದೆ ಗುರು ದತ್ತ ಬಡವಾಣೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನ. ಮುಂಜಾನೆಯ ಸೂರ್ಯ ಉದಯಿಸುವ ಹೊತ್ತಿನಲ್ಲಿ ಶಾಂತ ವಾತಾವರಣ, ಹಕ್ಕಿಗಳ ಕಲರವದ ನಡುವೆ ಭಕ್ತಾದಿಗಳಿಗೆ ಭಗವಂತನ ದಿವ್ಯದರ್ಶನ ಮಾಡಿದ ಧನ್ಯತಾ ಭಾವ. ನಾಲ್ಕು ಕೈಗಳನ್ನು ಹೊಂದಿ, ಬಲ ಬದಿಯ ಎರಡು ಪಾಶ-ಅಂಕುಶಗಳನ್ನು ಹಾಗೂ ಮತ್ತೆರಡು ಕೈಗಳಲ್ಲಿ ಭಕ್ತರ ಇಷ್ಟಾರ್ಥಗಳನ್ನು ಸಿಂಧೂರ ವರ್ಣದ ಸ್ವಾಮಿ ನೆರವೇರಿಸುತ್ತಿದ್ದಾನೆ. ಗಣಪತಿಯ ಎಡ ಪಾರ್ಶ್ವದಲ್ಲಿ ಶಕ್ತಿ ದೇವಿ ಆಸೀನಳಾಗಿದ್ದಾಳೆ. ಅಭಯ ಮುದ್ರೆ, ಅಂಕುಶ(ಸೃಣೀ), ಪಾಶವನ್ನು ಧರಿಸಿ, ಮತ್ತೊಂದು ಕೈಯಿಂದ ಶಕ್ತಿಯನ್ನು ಗಣಪ ಆಲಂಗಿಸಿಕೊಂಡಿದ್ದಾನೆ.

- Advertisement -

ಶಕ್ತಿ ಗಣಪತಿಯು ಸೂರ್ಯಾಸ್ತದ ನಸುಗೆಂಪು ವರ್ಣದವನಾಗಿ, ಶಕ್ತಿಯು ಹಸಿರು ಬಣ್ಣವನ್ನು ಹೊಂದಿದ್ದಾಳೆ. ಇಂದ್ರಿಯಗಳ ನಿಯಂತ್ರಣವನ್ನು ಸಾಧಿಸಿ ಇಚ್ಛಿತ ಕೆಲಸದ ಮೆಲೆ ಏಕಾಗ್ರತೆ ಕೇಂದ್ರಿಕರಿಸಲು ಶಕ್ತಿ ಗಣಪತಿಯ ಆರಾಧನೆಯು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಮುದ್ಗಲ ಪುರಾಣದಲ್ಲಿ 32 ಗಣಪತಿಯ ಬಗ್ಗೆ ಉಲ್ಲೇಖವಿದೆ. ಇದರಲ್ಲಿ ಶಕ್ತಿ ಗಣಪತಿ ಕೂಡ ಒಂದು. ಶಕ್ತಿಯೆಂದರೆ ಪಾರ್ವತಿ ದೇವಿಯ ಅಂಶವಿರುವಂತಹ ದೇವತೆ. ಆ ಶಕ್ತಿ ದೇವತೆಯನ್ನು ಎಡ ಬದಿಯ ತೊಡೆಯ ಮೇಲೆ ಕುಳ್ಳಿರಿಸಿರುವ ಗಣಪನೇ ಶಕ್ತಿ ಗಣಪ. ಶಕ್ತಿ ಗಣಪತಿಯನ್ನು ಉಪಾಸನೆ ಮಾಡುವುದರಿಂದ ಸಕಲ ಜೀವಿಗಳಲ್ಲಿ, ಶಕ್ತಿ ಪರಾಕ್ರಮ ಪ್ರಾಪ್ತಿಯಾಗುತ್ತದೆ. ಇಷ್ಟಾರ್ಥದಾಯಕ, ವಿಘ್ನಗಳನ್ನು ಪರಿಹರಿಸುವ ಅಭೀಷ್ಟಗಳನ್ನು ನೀಡುವ ಹಾಗೂ ನಮ್ಮಲ್ಲಿ ನವ ಚೈತನ್ಯ, ಶಕ್ತಿ ತುಂಬುವ ಭಗವಂತನೇ ಶ್ರೀ ಶಕ್ತಿ ಗಣಪತಿ. ಶ್ರೀ ಶಕ್ತಿ ಗಣಪತಿ ನಾಲ್ಕು ಭುಜಗಳಿಂದ ಕೂಡಿದ್ದವನಾಗಿದ್ದಾನೆ. ಕೆಂಪು, ಸ್ವರ್ಣ, ನೀಲಿ, ಬಿಳಿ, ಪಿಂಗಳ ಕೂಡಿದಂತೆ ಸಿಂಧೂರ ವರ್ಣದವನಾಗಿದ್ದಾನೆ. ಮಾಧ್ವ ಸಂಪ್ರದಾಯದಲ್ಲಿ ಗಣಪತಿಯನ್ನು ವಿಶ್ವಂಭರ ಮೂರ್ತಿ ಎಂದು ಕರೆಯಲಾಗುತ್ತದೆ.


ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!