spot_img
spot_img

ನಿಮ್ಮಂಥ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ – ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಮೂಡಲಗಿ – ನಿಮ್ಮಂಥ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ ಈ ಪ್ರೀತಿ, ಆಶೀರ್ವಾದವನ್ನು  ಇನ್ನು ಮುಂದಾದರೂ ನನಗೇ ನೀಡಬೇಕು ಎಂದು ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿಕೊಂಡರು.

ಪ್ರಸಕ್ತ ಚುನಾವಣೆಯಲ್ಲಿ ಭರ್ಜರಿ ೭೪೦೦೦ ಮತಗಳಿಂದ ವಿಜಯ ಸಾಧಿಸಿದ ನಂತರ ಅವರು ಮತದಾರರನ್ನುದ್ದೇಶಿಸಿ ಮಾತನಾಡಿದ ವಿಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ ಅರಭಾವಿ ಕ್ಷೇತ್ರದ ಎಲ್ಲಾ ಸಮುದಾಯಗಳ ಮತದಾರರನ್ನು ಸ್ಮರಿಸಿಕೊಂಡಿದ್ದಾರೆ.

ಮೇ. ೧೦ ರಂದು ನಡೆದ ಚುನಾವಣೆಯಲ್ಲಿ ಅರಭಾವಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತಹಾಕಿ ನನ್ನನ್ನು ಗೆಲ್ಲಿಸಿದ್ದೀರಿ ಅದಕ್ಕಾಗಿ ಎಲ್ಲ ಮತದಾರ ಪ್ರಭುಗಳಿಗೆ, ಬಿಜೆಪಿ ಕಾರ್ಯಕರ್ತರಿಗೆ ಹಾಗೂ ನಾಯಕರುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಹಾಗೂ ನಿಮ್ಮಂಥ ಮತದಾರರನ್ನು ಪಡೆದ ನಾನು ಪುಣ್ಯವಂತನೆಂದು ಭಾವಿಸುತ್ತೇನೆ ಎಂಬುದಾಗಿ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

- Advertisement -

ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಆರನೇ ಬಾರಿ ಅರಭಾವಿ ಶಾಸಕರಾಗಿ ಆಯ್ಕೆಯಾಗಿದ್ದು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗಿಂತ ಸುಮಾರು ೭೪ ಸಾವಿರ ಮತಗಳ ಲೀಡ್ ಪಡೆದು ಆಯ್ಕೆಯಾಗಿದ್ದಾರೆ.

ಕಳೆದ ಸಲ ಮೂಡಲಗಿ ತಾಲೂಕಾ ಹೋರಾಟದಿಂದ ಮುನ್ನೆಲೆಗೆ ಬಂದಿದ್ದ ಭೀಮಪ್ಪ ಗಡಾದ ಅವರು ಅರಭಾವಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಬಾಲಚಂದ್ರ ಜಾರಕಿಹೊಳಿಯವರಿಗೆ ಟಕ್ಕರ್ ಕೊಟ್ಟಿದ್ದರು ಆದರೆ ಈ ಸಲ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದರೂ ಕಾಂಗ್ರೆಸ್ ಪಕ್ಷವು ಅವರಿಗೆ ಟಿಕೆಟ್ ಕೊಡಲಿಲ್ಲ. ಆದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗಡಾದ ಅವರನ್ನು ಮತದಾರ ತಿರಸ್ಕರಿಸುವಂತಾಯಿತು ಎಂಬುದು ಒಂದು ರಾಜಕೀಯ ವಿಶ್ಲೇಷಣೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group