ಬೀದರ – ಬಿಜೆಪಿ ಹೈಕಮಾಂಡ್ ಅಳೆದು ತೂಗಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತದೆ. ಯಾರೂ ಯಾವುದೇ ಕಲ್ಪನೆ ಮಾಡಿಕೊಳ್ಳಬೇಕಾಗಿಲ್ಲ ಎಂದು ಬಸನಗೌಡಾ ಪಾಟೀಲ ಯತ್ನಾಳ ಹೇಳಿದರು.
ಬೀದರ್ ಜಿಲ್ಲೆ ಹುಮ್ನಾಬಾದ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಶ್ರಾವಣ ಮುಗಿಯುವುದರೊಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ 2024 ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿ ಆಗುತ್ತಾರೆ. ಕಾಂಗ್ರೆಸ್ ನ ನಾಯಕರಾದ ತಾಯಿ ಮಗ ಜೈಲಿಗೆ ಹೋಗಲಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕ ಯಾರಾಗುತ್ತಾರೆ ಎಂಬ ಪ್ರಶ್ನೆಗೆ, ಆ ಬಗ್ಗೆ ನನಗೆ ಮಾಹಿತಿ ಇಲ್ಲ, ಹೈಕಮಾಂಡ್ ಅಳೆದು ತೂಗಿ ಆಯ್ಕೆ ಮಾಡುತ್ತದೆ ಎಂದರು. ನಾನು ನಾಯಕನಾಗಲು ಹಣೆ ಬರಹದಲ್ಲಿ ಬರೆದಿಲ್ಲ ಎಂದು ಯತ್ನಾಳ ಚಟಾಕಿ ಹಾರಿಸಿದರು.
ಪಕ್ಷದಲ್ಲಿ ವಲಸಿಗರು ಮೂಲದವರು ಅಂತ ಏನೂ ಇಲ್ಲ ನಾವೆಲ್ಲ ಒಂದೆ ಯಾರೂ ಪಕ್ಷ ಬಿಡುವುದಿಲ್ಲ. ಬಿಟ್ಟು ಅಲ್ಲಿ ಹೋಗಿ ಏನು ಮಾಡುತ್ತಾರೆ ? ಅವರೇ 135 ಜನ ಇರುವ ಕಾಂಗ್ರೆಸ್ ನಲ್ಲಿ ಡಿಶುಂ ಡಿಶುಂ ನಡೆಯುತ್ತಿದೆ ಇವರು ಹೋಗಿ ಏನು ಮಾಡುತ್ತಾರೆ ಎಂದರು
ಈ ಅವಧಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಸಿದ್ದರಾಮಯ್ಯ ಬಿಟ್ಟುಕೊಟ್ಟರೆ ಡಿಕೆ ಸಿಎಂ ಆಗುವುದು. ಆದರೆ ಸಿದ್ದರಾಮಯ್ಯ ಅವರೆ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ. ಅವರು ಬಿಟ್ಟು ಕೊಡುವುದಿಲ್ಲ ಎಂದು ಯತ್ನಾಳ ನುಡಿದರು.
ವರದಿ: ನಂದಕುಮಾರ ಕರಂಜೆ, ಬೀದರ