spot_img
spot_img

ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ – ಸಂತೋಷ ಪಾರ್ಶಿ

Must Read

spot_img
- Advertisement -

ಮೂಡಲಗಿ: – ನಮ್ಮ ದೇಶವನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ವೀರ ಧೀರ ಸೈನಿಕರ ನಿಸ್ವಾರ್ಥ ದೇಶಪ್ರೇಮ, ದೇಶಭಕ್ತಿ ಹೆಮ್ಮೆ ತರವಂತಹ ಸಂಗತಿ. ಸೈನಿಕರಿಗೆ ಗೌರವ ಕೊಡುವುದರೊಂದಿಗೆ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ಅಭಿಪ್ರಾಯಪಟ್ಟರು.

ಪಟ್ಟಣದ ಆರ್.ಡಿ.ಎಸ್. ಸಿ.ಬಿ.ಎಸ್.ಇ. ಶಾಲೆಯಲ್ಲಿ ಹಮ್ಮಿಕೊಂಡ ವೀರಯೋಧರ ಹುತಾತ್ಮ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯೋಧರು ಮಳೆ ಬಿಸಿಲು ಚಳಿ ಎನ್ನದೇ ರಾತ್ರಿ ಹಗಲು ಕಷ್ಟಪಟ್ಟು ದೇಶದ ರಕ್ಷಣೆ ಮತ್ತು ನಮ್ಮನ್ನು ರಕ್ಷಣೆ ಮಾಡುತ್ತಾರೆ ಅವರನ್ನು ಸದಾಕಾಲ ಸ್ಮರಿಸುವುದು ನಮ್ಮ ಕರ್ತವ್ಯ. ಜನ್ಮ ನೀಡಿದ ತಾಯಿತಂದೆಯ ಋಣದ
ಜೊತೆಗೆ ಸೈನಿಕರ ಮತ್ತು ಅನ್ನನೀಡಿದ ರೈತರ ಋಣ
ಸ್ಮರಿಸುವುದು ಅಗತ್ಯವಿದೆ ಎಂದರು.

ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯ ಜೋಶೆಫ್ ಬೈಲಾ ಮಾತನಾಡಿ, ದೇಶದ ರಕ್ಷಣೆ ಯಲ್ಲಿ ಸೈನಿಕರು ಬಹುದೊಡ್ಡ
ಪಾತ್ರವಹಿಸುತ್ತಾರೆ. ತಮ್ಮ ಕುಟುಂಬ ತೊರೆದು ನಿಸ್ವಾರ್ಥ
ದೇಶಸೇವೆ ಮಾಡುವ ವೀರಯೋಧರು ಇದ್ದಾಗಲೇ ಅಖಂಡ ಭಾರತದ ಸೌರ್ವಭೌಮತ್ವಕ್ಕೆ ಸ್ಪೂರ್ತಿ ತುಂಬುತ್ತದೆ. ಸೈನಿಕರು
ತಮ್ಮ ಉಸಿರು ಇರುವವರೆಗೂ ದೇಶಸೇವೆ ಈಶ ಸೇವೆ ಎಂದು ಭಾವಿಸುತ್ತಾರೆ ವಿದ್ಯಾರ್ಥಿಗಳು ಸೈನಿಕರಿಗೆ ಗೌರವಕೊಡುವ ನೈತಿಕತೆ ಬೆಳಸಿಕೊಳ್ಳಬೇಕೆಂದರು.

- Advertisement -

ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ
ಪಾರ್ಶಿ ವಹಿಸಿಕೊಂಡು ಮಾತನಾಡಿ, ರೈತ ನಮೆಗಲ್ಲಾ ಅನ್ನ ನೀಡಿದರೆ ಸೈನಿಕರು ನಮ್ಮ ದೇಶದಲ್ಲಿ ಉಸಿರು ಇರುವಂತೆ ಮಾಡುತ್ತಾರೆ. ನಮಗಾಗಿ ಪ್ರಾಣ ನೀಡುವ ಅನ್ನದಾತರ ಸೈನಿಕರ ಕಾರ್ಯ ಚಿರಸ್ಮರಣೀಯ ಎಂದರು.

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group