ಮೂಡಲಗಿ: ಶಿಕ್ಷಕರು ಮಕ್ಕಳನ್ನು ವಿವೇಕಾನಂದರ ಆಶಯದಂತೆ ದೈಹಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಸದೃಢರನ್ನಾಗಿ ಮಾಡಬೇಕೆಂದು ಬೀದರದ ಚಿದಂಬರ ಆಶ್ರಮದ ಶ್ರೀ ಸಿದ್ದಾರೂಢ ಮಠದ ಶ್ರೀ ಡಾ. ಶಿವಕುಮಾರ್ ಸ್ವಾಮೀಜಿಯವರು, ಹೇಳಿದರು.
ಪಟ್ಟಣದ ಬಿ. ವಿ. ಸೋನವಾಲ್ಕರ ಹಿಪ್ಪೋಕ್ಯಾಂಪಸ್ ಪಬ್ಲಿಕ್ ಶಾಲೆ ಹಾಗೂ ಶ್ರೀ ವಿ. ಬಿ. ಸೋನವಾಲ್ಕರ್ ಮೆಮೊರಿಯಲ್ ಆಂಗ್ಲಮಾಧ್ಯಮ ಶಾಲೆಯಿಂದ ಜರುಗಿದ ಸ್ವಾಮಿ ವಿವೇಕಾನಂದರ 161ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ ಅವರು, ಸ್ವಾಮೀ ವಿವೇಕಾನಂದರು ತಮ್ಮ ಜೀವನದುದ್ದಕ್ಕೂ ಆಧ್ಯಾತ್ಮ ಚಿಂತನೆ, ಭಾರತೀಯ ಪರಂಪರೆ, ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ.
ಜಗತ್ತಿನಾದ್ಯಂತ ಜನರಿಗೆ ಸ್ವಾಮೀ ವಿವೇಕಾನಂದರು ಆದರ್ಶಪ್ರಾಯರಾಗಿದ್ದಾರೆ. ಶಿಕ್ಷಕರು ಮಕ್ಕಳಲ್ಲಿ ದೈಹಿಕ ಹಾಗೂ ಬುದ್ಧಿಶಕ್ತಿಗೆ ಮಹತ್ವವನ್ನು ನೀಡಿದಷ್ಟೇ ಮಹತ್ವವನ್ನು ಕೌಶಲ್ಯ ಹಾಗೂ ಮೌಲ್ಯಗಳನ್ನು ಬೆಳೆಸಲು ನೀಡಬೇಕು ಎಂದರು
ಬಿ.ವಿ.ಸೋನವಾಲ್ಕರ್ ಹಿಪ್ಪೋ ಕ್ಯಾಂಪಸ್ ಪಬ್ಲಿಕ್ ಶಾಲೆಯ ಅಧ್ಯಕ್ಷ ವೀರಣ್ಣ ಹೊಸೂರ ಮಾತನಾಡಿ, ಮಕ್ಕಳಿಗೆ ವಿವೇಕಾನಂದರ ಹಿತನುಡಿಗಳನ್ನು ಹೇಳಿ ಪ್ರತಿಯೊಬ್ಬರೂ ಒಂದು ಗುರಿ ಹೊಂದಿರಲೇಬೇಕು ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯರಾದ ಪ್ರಶಾಂತ ಹಾಗೂ ಶಿವಾನಂದ ಲಮಾಣಿ, ಎರಡೂ ಶಾಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಪಟ್ಟಣ ಗಣ್ಯರು ಭಾಗಿಯಾಗಿದ್ದರು.