spot_img
spot_img

ಪರಿಸರದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ – ಗಿರಿಜನ್ನವರ

Must Read

- Advertisement -

ಬೈಲಹೊಂಗಲ – ನಮ್ಮ ಸುತ್ತಲೂ ಉತ್ತಮ ಪರಿಸರ ವಿದ್ದರೆ ಎಲ್ಲರೂ ಒಳ್ಳೆಯ ಆರೋಗ್ಯ ಹೊಂದಲು ಸಾಧ್ಯವೆಂದು ನ್ಯಾಯವಾದಿ ಗಂಗಾಧರ್ ಗಿರಿಜನ್ನವರ್ ಹೇಳಿದರು.

ಪಟ್ಟಣದ ಹೊಸೂರು ರಸ್ತೆಯಲ್ಲಿರುವ ಬಗಳಾಂಬಾ ದೇವಿ ದೇವಸ್ಥಾನದ ಆವರಣದಲ್ಲಿರುವ ಪಂಚವಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನಲ್ಲಿ ಗಿಡಮರಗಳನ್ನು ಬೆಳೆಸಿದರೆ ಅದರಿಂದ ಮಾನವನಿಗೆ ಬೇಕಾದ ಆಕ್ಸಿಜನ್ ದೊರೆತು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಆದಕಾರಣ ಎಲ್ಲರೂ ತಮ್ಮ ಮನೆಯ ಸುತ್ತ ಒಳ್ಳೆಯ ಪರಿಸರ ಹೊಂದಲು ಗಿಡಮರಗಳನ್ನು ನೆಡಬೇಕೆಂದು ನುಡಿದರು.

ನಿವೃತ್ತ ಉಪ ತಹಸಿಲ್ದಾರ ಡಿ ಎ  ಕುಲಕರ್ಣಿ ಮಾತನಾಡಿ ಎಲ್ಲರೂ ಒಳ್ಳೆಯ ಆರೋಗ್ಯ ಹೊಂದಬೇಕಾದರೆ ಗಿಡಮರಗಳನ್ನು ಬೆಳೆಸಬೇಕು ಎಂದು ನುಡಿದು ಬಗಳಾಂಬ ದೇವಿ ದೇವಸ್ಥಾನವನ್ನು ಎಲ್ಲರೂ ಸೇರಿ ಅಭಿವೃದ್ಧಿಪಡಿಸಲು ಕೈಜೋಡಿಸಬೇಕೆಂದು ನುಡಿದರು.

- Advertisement -

ಸಾನ್ನಿಧ್ಯ ವಹಿಸಿದ್ದ ದೇವಸ್ಥಾನದ ಧರ್ಮಾಧಿಕಾರಿ ವೇ  ಮೂ,  ವೀರೇಶ ಸ್ವಾಮಿಗಳು ಮಾತನಾಡಿ, ಮಹಾಮಾರಿ ಕೊರೋನಾ ರೋಗವನ್ನು ದೂರ ಮಾಡಿ ಎಲ್ಲರಿಗೂ ಉತ್ತಮ ಆರೋಗ್ಯವನ್ನು ದೇವಿ ಕರುಣಿಸಲಿ ಹಾಗೂ ಎಲ್ಲರೂ ತಮ್ಮ ಮನೆಗಳಲ್ಲಿ ಗಿಡಗಳನ್ನು ಬೆಳೆಸಿ ಉತ್ತಮ ಪರಿಸರವನ್ನು ಹೊಂದಬೇಕೆಂದು ನುಡಿದರು.

ಎಸ ಫ್ ಹರಕುಣಿ, ಬಿ ಬಿ ಸಂಗಣ್ಣವರ, ಮಹಾಂತೇಶ ಅಕ್ಕಿ,ಮಹಾಂತೇಶ ಹರಕುಣಿ , ಮಲ್ಲಿಕಾರ್ಜುನ  ಬಡ್ಡಿಮನಿ, ಜವಾಹರ ಪತ್ತಾರ, ಶಿವಾಜಿ  ಕೋಳೇಕರ, ಶಾಂತಮ್ಮ  ಕೊಪ್ಪದ  ಇದ್ದರು.

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group