ಸಾಹಿತ್ಯ ಪರಿಷತ್ತಿಗೆ ರಾಜಕೀಯ ಲೇಪನವಾಗುತ್ತಿರುವುದು ವಿಷಾದನೀಯ – ಅಶೋಕ ಗಾಯಕವಾಡ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಸಿಂದಗಿ: ಕನ್ನಡದ ಸಂಸ್ಕ್ರತಿಯನ್ನು ಬೆಳೆಸದೇ ಕನ್ನಡದ ಅಭಿವೃದ್ದಿಯಾಗುತ್ತಿಲ್ಲ. ವಿಜಯಪುರ ಜಿಲ್ಲೆಯ ಸಾಹಿತ್ಯ ಪರಿಷತ್ತು ರಾಜಕೀಯ ಪ್ರೇರಿತವಾಗಿದೆ ಅದಕ್ಕೆ ಅಭಿವೃದ್ಧಿ ಕುಂಠಿತಗೊಂಡಿದೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಲವಾರು ವರ್ಷಗಳಿಂದ ಸದಸ್ಯರಿದ್ದರು ಕೂಡಾ ಒಂದೇ ಜಾತಿಗೆ ಸಿಮೀತ ಗೊಳಿಸುತ್ತಿದೆ ಅಲ್ಲದೆ ರಾಜಕೀಯ ಲೇಪನ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ.

ಕಾರಣ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಮೆರಗು ತರಬೇಕು ಎಂದು ಜಿಲ್ಲಾದ್ಯಕ್ಷ ಸ್ಥಾನಕ್ಜೆ ಸ್ಪರ್ದಿಸಿದ್ದು ಅವರನ್ನು ಮೇಲು ಕೀಳು ಕಾಣದೇ ಬಸವ ತತ್ವವನ್ನು ಅಳವಡಿಸಿಕೊಂಡ ಹಾಸೀಂಪೀರ ವಾಲೀಕಾರ ಅವರಿಗೆ ಸಹಕರಿಸಬೇಕು ಎಂದು ಹಿರಿಯ ವಕೀಲ ಅಶೋಕ ಗಾಯಕವಾಡ ಮನವಿ ಮಾಡಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಜಿಲ್ಲಾದ್ಯಕ್ಷರ ಚುನಾವಣೆ ಪ್ರಯಕ್ತ ಮತಯಾಚನೆ ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಿಂದಗಿ ಸಾಹಿತ್ಯ ಪರಿಷತ್ತು ಸಾಹಿತಿಗಳು ಸವಿಯನ್ನು ಉಣಬಡಿಸಬೇಕು ವಿನಹ ರಾಜಕೀಯ ಪ್ರೇರಿತವಾಗಬಾರದು ಎಂದು ಮನವಿ ಮಾಡಿಕೊಂಡರು.

- Advertisement -

ಈ ಸಂದರ್ಭದಲ್ಲಿ ಮಲ್ಲು ಗತ್ತರಗಿ ವಕೀಲರು ನಾತನಾಡಿದರು
ಸಾಹಿತ್ಯ ಪರಿಷತ್ತು ನಿಂತ ನೀರಾಗದೇ ಹರಿಯುವ ನೀರಾಗಬೇಕು ಅದಕ್ಜೆ ಹೊಸ ಹೊಸ ಕವಿಗಳನ್ನು. ಸಾಹಿತಿಗಳನ್ನು ಹುಟ್ಟು ಹಾಕುವಂಥವರಾಗಬೇಕಾಗಿದೆ.

ಸಾಹಿತ್ಯದ ಗಂಧ ಇರಲಾರದ ವ್ಯಕ್ತಿಯನ್ನು ಆಯ್ಕೆ ಮಾಡುತ್ತ ಹೊರಟಿದ್ದೇವೆ ಇದರಿಂದ ಕನ್ನಡವನ್ನು ಹಾಳು ಮಾಡಿದಂತಾಗಿದೆ ಅದಕ್ಕೆ ಒಳ್ಳೆಯ ಬಾಷಾಜ್ಞಾನ. ಸಾಹಿತ್ಯ ಗಂದವನ್ನುವುಳ್ಳವರನ್ನು ಗುರುತಿಸಬೇಕಾಗಿದೆ ಕನ್ನಡದಲ್ಲಿ ಶ್ರದ್ದೆ ಇರಬೇಕು ಅದನ್ನು ಬೆಳೆಸುವಂಥವರಾಗಿರಬೇಕು.

ಸಾಹಿತ್ಯ ಕ್ಷೇತ್ರ ರಾಜಕೀಯ ಕ್ಷೇತ್ರವಾಗಿ ಪರಿಣಮಿಸುತ್ತಿದೆ ಇದರಿಂದ ಸಾಹಿತ್ಯ ಮುಗ್ಗರಿಸಿ ಹೋಗುತ್ತಿದೆ. ಸಾಹಿತ್ಯ ಕ್ಷೇತ್ರವನ್ನು ಬೆಳೆಸುವಂಥ ಕಾರ್ಯಕ್ಕೆ ಸಿಂದಗಿಯಿಂದ ಬದಲಾವಣೆ ತರೊಣ ಎಂದರು.

ಈ ಸಂದರ್ಭದಲ್ಲಿ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಸಾನ್ನಿದ್ಯ ವಹಿಸಿದರು. ಬಿ.ಎ.ಪಾಟೀಲ. ಎಸ್ ಬಿ ಪಾಟೀಲ. ಮಾಹಾಂತೇಶ ಪಟ್ಟಣಶೇಟ್ಟಿ. ರಾಜಶೇಖರ ಕೂಚಬಾಳ ಅಭ್ಯರ್ಥಿ ಹಾಸೀಂಪೀರ ವಾಲೀಕಾರ ಮಾತನಾಡಿ, ಇಂದಿನ ಮಕ್ಕಳಿಗೆ ಸಾಹಿತ್ಯ ಗಂಧ ತಿಳಿಯಪಡಿಸಬೇಕು ಎನ್ನುವ ಕಳಕಳಿಯ ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರಿ ಅವರ ಕನಸು ನನಸು ಮಾಡುವ ಹೊಣೆಗಾರಿಕೆ ನನ್ನ ಮೇಲಿದೆ ರಾಜ್ಯದಲ್ಲಿ ಮಾದರಿಯ ಸಾಹಿತ್ಯ ಪರಿಷತ್ತು ಮಾಡುವ ಸಾಹಿತ್ಯ ಪರಿಷತ್ತಿನ ಘನತೆಯನ್ನು ಹೆಚ್ಚಿಸಲು ನನಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು.

ಬಸವ ಧರ್ಮವನ್ನು ಬೆಳೆಸುತ್ತೇನೆ. ಒಂದು ಧರ್ಮಕ್ಕೆ ಅಂಟಿಕೊಳ್ಳಲಾರೆ ಎಂದ ಅವರು, ಜಿಲ್ಲಾ ಸಾಹಿತ್ಯ ಭವನ ಕಟ್ಟಿಸುವ ಕನಸು ಕಂಡಿದ್ದೇನೆ ಎನ್ನುವ ಹಂಬಲ ವ್ಯಕ್ತಪಡಿಸಿದರು.

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!