ಬನಹಟ್ಟಿ – ಇದು ನನ್ನೊಬ್ಬಳ ಯಶಸ್ಸಲ್ಲ ನನಗೆ ಶಿಕ್ಷಣ ನೀಡಿದ ಎಲ್ಲ ಶಿಕ್ಷಕರದ್ದು ಹಾಗೂ ನನಗೆ ಪ್ರೋತ್ಸಾಹ ನೀಡಿದ ನನ್ನ ಪಾಲಕರದ್ದು ಎಂದು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಸೌಮ್ಯ ಅಮ್ಮಲಜೇರಿ ಹೇಳಿದರು.
ವಿದ್ಯಾರ್ಥಿನಿ ಸೌಮ್ಯ ಗುರುಲಿಂಗ ಅಮ್ಮಲಜೇರಿ ಎಸ್ ಎಸ್ ಎಲ್ ಸಿ ಪರೀಕ್ಷೆ 2022 ರಲ್ಲಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದು ಗ್ರಾಮೀಣ ಮಟ್ಟದಲ್ಲಿ ಕಲಿತರೂ ಯಶಸ್ಸು ಸಾಧಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬನಹಟ್ಟಿ – ರಬಕವಿ ನಗರಗಳ ಮಧ್ಯೆ ಇರುವ ರಾಮಪೂರ ಎಂಬ ಗ್ರಾಮದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿತಿರುವ ಸೌಮ್ಯ ಬಾಗಲಕೋಟೆ ಜಿಲ್ಲೆಗೆ ಪ್ರಥಮ ರ್ಯಾಂಕ್ ಹಾಗೂ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದು ತನ್ನ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲಾ ಆಡಳಿತ ಮಂಡಳಿ, ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಅಲ್ಲದೆ ಕುಟುಂಬವರ್ಗದವರು ಸಮಸ್ತ ಕುರುಹಿನಶೆಟ್ಟಿ ಸಮಾಜ ಬಾಂಧವರು ಸೌಮ್ಯ ಅವರಿಗೆ ಶುಭಹಾರೈಸಿದ್ದಾರೆ