“ವೃಷಭಶ್ರೀ” ಮತ್ತು “ಬ್ರಾಹ್ಮಿಶ್ರೀ” ಪ್ರಶಸ್ತಿ ಮತ್ತು ಶ್ರೀ ಜ್ಞಾನೇಶ್ವರ ಜೈನ ಆದರ್ಶ ಶಿಕ್ಷಕ ಪ್ರಶಸ್ತಿಗಳು ಪ್ರಕಟ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಬೆಳಗಾವಿ: ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತ ನೌಕರರ ಸಂಘ ಹಾಗೂ ಬೆಳಗಾವಿ ವಿಭಾಗದ ಜೈನ ಶಿಕ್ಷಕರ ವೇದಿಕೆ ವತಿಯಿಂದ ಸಮಾಜ ಸೇವೆ ವಿಭಾಗದಲ್ಲಿ ಪ್ರತಿ ವರ್ಷ ನೀಡಲಾಗುವ ರಾಜ್ಯಮಟ್ಟದ “ವೃಷಭಶ್ರೀ” ಮತ್ತು ” ಬ್ರಾಹ್ಮಿಶ್ರೀ “ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಬೆಳಗಾವಿಯ ಹಿರಿಯ ಪತ್ರಕರ್ತ ಕುಂತಿನಾಥ ಕಲಮನಿ ಅವರಿಗೆ “ವೃಷಭಶ್ರೀ” ಪ್ರಶಸ್ತಿ ಮತ್ತು ಬೆಂಗಳೂರಿನ ರತ್ನತ್ರಯ ಕ್ರಿಯೇಶನ್ಸ್‌ನ ಡಾ.ನೀರಜಾ ನಾಗೇಂದ್ರಕುಮಾರ ಅವರಿಗೆ “ಬ್ರಾಹ್ಮಿಶ್ರೀ”ಪ್ರಶಸ್ತಿ ನೀಡಲಾಗಿದೆ. ಜ್ಞಾನೇಶ್ವರ ಆದರ್ಶ ಜೈನ ಶಿಕ್ಷಕ ಪ್ರಶಸ್ತಿ ವಿಜೇತರು.

 1. ಶ್ರೀಮತಿ ಸುರೇಖಾ ಅ ಪಾಟೀಲ ಬೆಳಗಾವಿ ಗ್ರಾಮೀಣ
 2. ಶ್ರೀಮತಿ ವನಿತಾ ಹಾಲಪ್ಪನವರ ಬೆಳಗಾವಿ ನಗರ
 3. ಶ್ರೀ. ರತ್ನಾಕರ ಸಾಗರ ಖಾನಾಪೂರ
 4. ಜಯಪಾಲ ಚೌಗಲಾ ಹುಕ್ಕೇರಿ
 5. ಶ್ರೀ ತಾತ್ಯಾಸಾಹೇಬ ಸಾಜನೆ ರಾಯಬಾಗ
 6. ಶ್ರೀ. ಮಾಣಿಕ ಶಿರಗುಪ್ಪಿ ನಿಪ್ಪಾಣಿ
 7. ಶ್ರೀಮಂತ ಜೈನರ ಕಿತ್ತೂರ
 8. ಶ್ರೀಮತಿ ಕಲಾವತಿ ಕೆಂಚೆಪ್ಪನವರ, ಗೋಕಾಕ
 9. ಶ್ರೀಮತಿ ಸತ್ಯವತಿ ನಾಂದ್ರೇಕರ, ಅಥಣಿ
 10. ಶ್ರೀಮತಿ ಅರ್ಪಣಾ ಕಡಬಿ, ಬೈಲಹೊಂಗಲ
 11. ಶ್ರೀ ಬಾಳಗೌಡ ಪಾಟೀಲ ಸಹಾಯಕ ಪ್ರಾಧ್ಯಾಪಕರು, ಸಂಕೇಶ್ವರ.
 12. ಶ್ರೀ ರವಿ ಪಾಟೀಲ ಸಹಾಯಕ ಪ್ರಾಧ್ಯಾಪಕರು ಕೆ.ಕೆ.ಕೊಪ್ಪ
 13. ಶ್ರೀಮತಿ ವೀರಶ್ರೀ ಸಮಾಜೆ ರಾಯಬಾಗ
 14. ಶ್ರೀ ಎಂ ಎನ್ ಸಂಗೋಳ್ಳಿ ಗರಗ
 15. ಶ್ರೀ ಬಿ.ಎಂ.ರಾಜನ್ನವರ ಧಾರವಾಡ
 16. ಶ್ರೀಮತಿ ಎ.ಕೆ.ಮರೆಣ್ಣವರ ಧಾರವಾಡ
 17. ಶ್ರೀಮತಿ ಜ್ವಾಲಾ ನೀರಲಕಟ್ಟಿ ಡುಮ್ಮವಾಡ ಧಾರವಾಡ
 18. ಶ್ರೀ ಶಾಮಪ್ಪ ಜಿನ್ನಪ್ಪನವರ ಹಳೇತೇಗೂರ
 19. ಶ್ರೀ. ಎಸ್.ಡಿ.ಕುರಕುರಿ ಧಾರವಾಡ
 20. ಮಂಜುನಾಥ ಸಂಗೋಳ್ಳಿ ಕಲಘಟಕಗಿ
 21. ಮಂಜುನಾಥ ಕುರಕುರಿ ಯರಿಕೊಪ್ಪ
 22. ಡಾ. ಶಾಂತಿಸಾಗರ ಶಿರಹಟ್ಟಿ ಮೈಸೂರ
 23. ಶ್ರೀ ಭರತೇಶ ಲೋಕಾಪೂರ ಬಾಗಲಕೋಟೆ
 24.  ಶ್ರೀ. ತವನಪ್ಪ ಮುತ್ತಿನ ರಾಯಚೂರ.

ಆದರ್ಶ ಜೈನ ಶಿಕ್ಷಕ ದಂಪತಿಗಳು

 1. ಶ್ರೀಧರ ಪಟಗುಂದಿ ಮತ್ತು ಜಯಶ್ರೀ ರಾಜಮಾನೆ ಬೆಳಗಾವಿ
 2. ಶ್ರೀ. ಪಿ.ಎಫ್. ದಂಡಿನ ಹಾಗೂ ಶ್ರೀಮತಿ ವ್ಹಿ.ಎಮ್. ಕುಲಕರ್ಣಿ ಧಾರವಾಡ ಇವರುಗಳು ಆಯ್ಕೆಯಾಗಿದ್ದಾರೆಂದು ಆಯ್ಕೆ ಸಮಿತಿ ಅಧ್ಯಕ್ಷರಾದ ಡಾ.ನಾಗರಾಜ ಮರೆಣ್ಣವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಪ್ರಶಸ್ತಿಗಳ ಪ್ರದಾನ ಸಮಾರಂಭವು ಜ್ಞಾನೇಶ್ವರ ಆದರ್ಶ ಜೈನ ಶಿಕ್ಷಕ ಪ್ರಶಸ್ತಿ ಆಯ್ಕೆ ಸಮಿತಿ, ಚಾರ್ತುಮಾಸ ಕಮಿಟಿ ಹಾಗೂ ಶ್ರೀ ಜಯಕೀರ್ತಿ ವಿದ್ಯಾಲಯ ಗರಗ ಇವರ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಸೆ. 12 ರಂದು ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆಯಲಿರುವ ಬೆಳಗಾವಿ ವಿಭಾಗೀಯ 9 ನೇ ಜೈನ ಶಿಕ್ಷಕರ ಸಮಾವೇಶ -2021 ಹಾಗೂ ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಿ ಗೌರವಿಸಲಾಗುವುದು.

ಸಮಾರಂಭದ ಹಿರಿಯ ಉಪನ್ಯಾಸಕರಾದ ಡಾ. ನಾಗರಾಜ ಮರೆಣ್ಣವರ ಅವರು ವಹಿಸಲಿದ್ದು, ಧಾರವಾಡ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕ ಎ.ಬಿ.ದೇಸಾಯಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬಿಎಓ ಚಿಕ್ಕೋಡಿ ಬಿ..ಎ.ಮೆಕಲಮರಡಿ , ವಿಶೇಷ ಆಹ್ವಾನಿತರಾಗಿ ಎಚ.ಪಿ.ಮೋಹನಕುಮಾರ ಶಾಸ್ತ್ರೀ , ಜಿ.ಪಂ.ಸದಸ್ಯ ಟಿ.ಪಿ.ಅಷ್ಟಗಿ , ಮುಖ್ಯಅತಿಥಿಗಳಾಗಿ ಮಹಾದೇವ ಪಟಗುಂದಿ, ಅಮೃತ ಕುಡಚಿ, ಜಯಕೀರ್ತಿ ವಿದ್ಯಾಲಯದ ಅಧ್ಯಕ್ಷರಾದ ಸುದರ್ಶನ ಆರ್ ದಿಂಡಲಕೊಪ್ಪ , ಚಾರ್ತುಮಾಸ ಕಮಿಟಿಯ ಅಧ್ಯಕ್ಷರಾದ ಸುದರ್ಶನ ಬಿ.ದಿಂಡಲಕೊಪ್ಪ ಹಾಗೂ ಅತಿಥಿ ಉಪನ್ಯಾಸಕರಾಗಿ ಪಿ.ಜಿ.ಕೆಂಪಣ್ಣವರ ಅವರು ಆಗಮಿಲಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!