ಮೂಡಲಗಿ ಸಿದ್ದಿ ಕಲಾವಿದರಿಗೆ ಜಾನಪದ ರತ್ನ ಪ್ರಶಸ್ತಿ

Must Read

ಮೂಡಲಗಿ: ಸಮೀಪದ ಮುಗಳಖೋಡದಲ್ಲಿ ಕಳೆದ ಸೋಮವಾರ ಜರುಗಿದ ಶ್ರೀ ನಿಜಗುಣ ಶಿವಯೋಗಿ ಜಯಂತಿ ನಿಮಿತ್ತವಾಗಿ ಶ್ರೀ ಶಂಭುಲಿಂಗ ಭಜನಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೂಡಲಗಿಯ ಸಿದ್ಧಿ ಸೋಂಗು ಕಲಾವಿದರಾದ ಚುಟುಕುಸಾಬ ಮಂಟೂರ (ಜಾತಗಾರ), ಸೈಪನಸಾಬ ಇಮಾಮಸಾಬ ಮಂಟೂರ, ಹುಸೇನಬಿ ಮಂಟೂರ ಹಾಗೂ ಅನೀತ ನೊಂದರಗಿ ಇವರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಕನ್ನಡ ಜಾನಪದ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಗಣ್ಯರಾದ ರಾಮಣ್ಣ ಮಾಳಿ ಇವರ ಭಕ್ತಿಯ ಸೇವೆಯಲ್ಲಿ ಭಜನಾ ಮಂಡಳಿ ಅಧ್ಯಕ್ಷ ಮಹಾಲಿಂಗ ಯಡವನ್ನವರ, ಸಂಚಾಲಕ ಬಸವರಾಜ ಗೋಕಾಕ, ಮುಖ್ಯ ಅತಿಥಿಗಳಾದ ಹಸನಸಾಬ ನದಾಫ್ ಹಾಗೂ ಮೀರಾಸಾಬ ನದಾಫ್ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಊರಿನ ಹಿರಿಯ ಪ್ರಮುಖ ಗಣ್ಯರು , ಅನೇಕ ಕಲಾವಿದರು ಹಾಗೂ ಮತ್ತಿತರರು ಇದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group