spot_img
spot_img

ಪ್ರವಾಹ ಸಂತ್ರಸ್ತರಿಗೆ ಜಪಾನಂದ ಶ್ರೀಗಳಿಂದ ಆಹಾರ ಸಾಮಗ್ರಿ ವಿತರಣೆ

Must Read

- Advertisement -

ಮೂಡಲಗಿ: ಬೆಳಗಾವಿ ಸುತ್ತಮುತ್ತ ಮತ್ತು ಪಶ್ಚಿಮಘಟದಲ್ಲಿ ಸುರಿದ ಮಳೆಯಿಂದ ಘಟಪ್ರಭಾ ನದಿ ದಡದಲ್ಲಿನ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಪ್ರವಾಹಕ್ಕೀಡಾಗಿರುವ ಸುಮಾರು ೫೬೭ ಸಂತ್ರಸ್ತ ಕುಟುಂಬಗಳಿಗೆ ದಿನ ನಿತ್ಯ ಬಳಕೆಯ ಆಹಾರ ಪಧಾರ್ಥ ಬಟ್ಟೆಗಳ ಕಿಟ್ಟನ್ನು ತುಮಕೂರ ಜಿಲ್ಲೆಯ ಪಾವಗಡ ರಾಮಕೃಷ್ಣ ಸೇವಾ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಜಪಾನಂದ ಜೀ ಮಹಾರಾಜರು ವಿತರಿಸಿ ಮಾನವೀಯತೆ ಮೆರೆದರು.

ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಿಸಿದ ಶ್ರೀ ಜಪಾನಂದಜೀ ಮಹಾರಾಜರು ಮಾತನಾಡಿ, ಬೆಳಗಾವಿ, ಬಾಗಲಕೋಟ ಸೇರಿದಂತೆ ನಾಡಿನಲ್ಲಿ ಸಂಕಷ್ಟಕ್ಕೆ ಒಳಗಾದ ಜನರಿಗೆ ನಮ್ಮ ರಾಮಕೃಷ್ಣ ಸೇವಾ ಆಶ್ರಮ ಇನ್ಪೋಸಿಸ್ ಫೌಂಡೇಶನ್ ಅವರ ಸಹಯೋಗದಲ್ಲಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಕಾರದೊಂದಿಗೆ ಕಳೆದ ಮೂವತ್ತು ವರ್ಷಗಳಿಂದ ಸಹಾಯ ಮಾಡುತ್ತಾ ಬಂದಿದ್ದು, ಈ ಪ್ರವಾಹ ಸಂತ್ರಸ್ತರಿಗೆ ಮೊದಲನೇಯದಾಗಿ ಸುಮಾರು ಐದು ಸಾವಿರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದೇವೆ. ಘಟಪ್ರಭಾ ನದಿ ತೀರದ ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಿಸುವ ಕಾರ್ಯಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮೂಡಲಗಿ ತಾಲೂಕಾಡಳಿತದ ಸಹಾಯ ಶ್ಲಾಘನೀಯವಾದದ್ದು. ಈ ಒಂದು ಸೇವೆಯನ್ನು ನಿಮಗೆ ನಾನು ಮಾಡುತ್ತಿಲ್ಲ ನಿಮ್ಮಲ್ಲಿರುವ ಭಗವಂತನಿಗೆ ಮಾಡುತ್ತಿದ್ದೇವೆ. ದೇವತಾ ಸ್ವರೂಪಿಗಳು ನೀವು ನಿಮಗೆ ಏನೇ ಕೊಟ್ಟರು ಅದು ಭಗವಂತನಿಗೆ ಸೇರಿದ್ದು ಎಂದರು.
ರಾಮಕೃಷ್ಣ ಸೇವಾ ಆಶ್ರಮದಿಂದ ಉಚಿತವಾಗಿ ಕುಷ್ಠರೋಗ, ಕ್ಷಯರೋಗ ಆಸ್ಪತ್ರೆ, ಕಣ್ಣು ಇಲ್ಲದವರಿಗೆ ಕಣ್ಣಿನ ಆಸ್ಪತ್ರೆ, ಎಚ.ಐ.ವಿ/ಏಡ್ಸ್ ಆಸ್ಪತ್ರೆಯನ್ನು ಕಷ್ಟದಲ್ಲಿರುವವರಿಗೆ ಸೇವೆಯನ್ನು ಮಾಡಿಕೊಂಡು ಬರುವುದಕ್ಕೆ ಇನ್ಪೋಸಿಸ್ ಫೌಂಡೇಶನ್ ಸಹಕಾರ ನೀಡುತ್ತದೆ. ಎಲ್ಲರಿಗೂ ಭಗವಂತನ ಕೃಪೆ ಸದಾ ಆಗಲಿ ಎಂದು ಎಂದು ಪೂಜ್ಯ ಶ್ರೀ ಜಪಾನಂದ ಜೀ ಶ್ರೀಗಳು ಪ್ರಾರ್ಥಿಸಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಬೆಳಗಾವಿ ರಾಮಕೃಷ್ಣ ಸೇವಾ ಆಶ್ರಮದ ಜಿಲ್ಲಾ ಸಂಯೋಜಕ ಮಹಾಂತೇಶ ಲೋಟಿ ಮತ್ತು ಪಾವಗಡದ ಹರ್ಷಾ ಮಾತನಾಡಿದರು.

- Advertisement -

ಸಂತ್ರಸ್ತರಿಗೆ ಸಾಮಗ್ರಿ ವಿತರಣೆಯಲ್ಲಿ ಮೂಡಲಗಿ ಗ್ರೇಡ್-೨ ತಹಶೀಲ್ದಾರ ಶಿವಾನಂದ ಬಬಲಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಿಕ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐ ರಾಜು ಪೂಜೇರಿ, ಮಸಗುಪ್ಪಿ ಗ್ರಾ.ಪಂ ಅಧ್ಯಕ್ಷ ಹನಮಂತ ಕುಲಕರ್ಣಿ, ಪಿಡಿಒ ಆರ್.ಎನ್.ಗುಜನಟ್ಟಿ, ಗ್ರಾಮ ಆಡಳಿತಾಧಿಕಾರಿ ಎಸ್.ಕೆ.ತುಪ್ಪದ ಹಾಗೂ ಬೆಳಗಾವಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ರೋಟರಿ ಕ್ಲಬ್‌ದ ಅಶೋಕ ಬದಾಮಿ, ಡಾ.ಡಿ.ಎನ್.ಮಿಸಾಳೆ, ಅಶೋಕ ಮಳಗಲಿ, ಬಸವಸರಾಜ ಶೆಟ್ಟರ್, ಸೋಮಶೇಖರ ಮಗದುಮ್, ಕೆಂಚಪ್ಪ ಭರಮನ್ನವರ, ಗಿರೀಶ ಜವಾರ, ಬಸವರಾಜ ಹುಲ್ಲೇರ, ಗ್ರಾ.ಪಂ ಸದಸ್ಯರು, ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ಮಸಗುಪ್ಪಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಲಕ್ಷ್ಮಣ ಹೊಸಮನಿ ಸ್ವಾಗತಿಸಿ ನಿರೂಪಿಸಿದರು.

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group