spot_img
spot_img

ಕನ್ನಡ ನಾಡು -ನುಡಿಗೆ ಕೊಡುಗೆ ಕೊಟ್ಟ ಜಯದೇವಿ ತಾಯಿ ಲಿಗಾಡೆ ಮತ್ತು ಶಾಂತಾದೇವಿ ಮಾಳವಾಡ

Must Read

- Advertisement -

ಜಯದೇವಿತಾಯಿ ಲಿಗಾಡೆ ಯವರು ಗಡಿನಾಡ ಕನ್ನಡಿಗರಿಗಾಗಿ, ಕನ್ನಡ ನಾಡು -ನುಡಿಗಾಗಿ ಪಣತೊಟ್ಟವರಾಗಿದ್ದರು ಎಂದು ಹೇಳುತ್ತಾ, ಶರಣೆ ಸವಿತಾ ದೇಶಮುಖ ಅವರು ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿಉಪನ್ಯಾಸದ 21 ನೆಯ ದಿವಸ ಅವರು ಮಾತನಾಡಿದರು.

ಜಯದೇವಿತಾಯಿಯವರು ಗಡಿನಾಡ ಕನ್ನಡತಿ, ಸಾಧ್ವಿಮಣಿ, ಸಿದ್ಧರಾಮನ ಕರುಣೆಯ ಕೂಸೆಂದು ಖ್ಯಾತಿಗೊಂಡವರು.
ಸೊನ್ನಲಿಗೆಯ ಮಗಳಾಗಿ, ಸೊಸೆಯಾಗಿ, ಕನ್ನಡಿಗರ ತಾಯಿಯಾಗಿ ನಿಂತರು.ಸಂಸಾರ ದಲ್ಲಿ ಇದ್ದುಕೊಂಡೇ, ಸಾಧಿಸಿದ ಸಾಧನೆಗಳು ಅನೇಕ. ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರು ಕೊಟ್ಟ ಯಾವ ಆಸೆ-ಆಮಿಷಕ್ಕೂ ಒಳಗಾಗದೆ, ರಾಷ್ಟೀಯ ಸೇವಾದಳಗಳು, ಪ್ರೌಢ ಸ್ತ್ರೀ ಶಾಲೆಗಳನ್ನು ಸ್ಥಾಪಿಸಿದರು. ನಿಜಾಮನ ಪೈರಮಾನ್ ಉಲ್ಲಂಘಿಸಿ ಅದನ್ನು ಪ್ರತಿರೋಧಿಸಿದರು.ರಾಷ್ಟ್ರದ ಯುವಜನರನ್ನು ಹುರಿದುಂಬಿಸಿ, ಯುವ ಸಂಘಗಳನ್ನು ಸಂಘಟಿಸಿದರು. ಭಾಷೆಯ ಬೆಳವಣಿಗೆಗಾಗಿ ಹೋರಾಡಿದರು ಹಾಗೂ ಯುವಜನರಲ್ಲಿ ಭಾಷಾಭಿಮಾನವನ್ನು ಬಿತ್ತಿದರು. ಕರ್ನಾಟಕದ ಏಕೀಕರಣದಲ್ಲಿ ಅವರ ಕೊಡುಗೆ ಅಪಾರವಾದದ್ದು. ಭಾಷಾವಾರು ಪ್ರಾಂತ್ಯಕ್ಕಾಗಿ ಸಹ ಅವರು ದುಡಿದರು. ವಚನ ಸಪ್ತಾಹವನ್ನು ಮಂಜಪ್ಪನವರ ಜೊತೆಗೂಡಿ ವಚನ ಸಾಹಿತ್ಯವನ್ನು ಪ್ರಚಾರ ಮಾಡಿದರು ಎಂದು ನಮ್ಮ ಜೊತೆಗೆ ಹಂಚಿಕೊಂಡರು.

- Advertisement -

ಜಯದೇವಿತಾಯಿಯವರು ಕನ್ನಡ ಮತ್ತು ಮರಾಠಿಯಲ್ಲಿ ಶರಣ ಸಾಹಿತ್ಯದ ಕುರಿತು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಮತ್ತು ಸಿದ್ಧರಾಮ ಪುರಾಣವನ್ನೂ ಸಹ ಬರೆದಿದ್ದಾರೆ. ಶರಣ ಸಾಹಿತ್ಯವನ್ನು ಪ್ರಕಟಿಸಲು ಹಣವನ್ನೂ ಸಹ ನೀಡಿದರು ಎನ್ನುವುದನ್ನು ಸ್ಮರಿಸಿದರು.

ಅಖಿಲ ಭಾರತ ಲಿಂಗಾಯತ ವೀರಶೈವ ಮಹಿಳಾ ಪರಿಷತ್ ನ ಅಧ್ಯಕ್ಷರಾಗಿದ್ದರು ಹಾಗೂ ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಸದಸ್ಯರಾಗಿದ್ದರು ಮತ್ತು ರಾಜ್ಯ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ ಪಡೆದಿದ್ದರು ಎಂದು ಅವರ ಬಗೆಗೆ ಇನ್ನೂ ಅನೇಕ ವಿಚಾರಗಳನ್ನು ಹೇಳುತ್ತಾ ತಮ್ಮ ಉಪನ್ಯಾಸವನ್ನು ಮುಗಿಸಿದರು.

ಶಾಂತಾದೇವಿ ಮಾಳವಾಡ ಅವರು ಗೃಹಿಣಿಯಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ ಎಂದು ಹೇಳುತ್ತಾ, ಅಂಜಲಿದೇವಿ ಅವರು ತಮ್ಮ ಮಾತನ್ನು ಪ್ರಾರಂಭ ಮಾಡಿದರು.

- Advertisement -

ಕನ್ನಡ ಸಾಹಿತ್ಯ ಪರಿಷತ್ ಅವರಿಗೆ ಗೌರವ ಸದಸ್ಯತ್ವ ನೀಡಿ ಸನ್ಮಾನಿಸಿದ್ದು, ಬಾಗಲಕೋಟೆ ಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಜ. ಚ. ನಿ ಬೆಳ್ಳಿ ಹಬ್ಬ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಬಂದದ್ದನ್ನು ನಮ್ಮ ಜೊತೆಗೆ ಹಂಚಿಕೊಂಡರು.

ಕನ್ನಡ ತಾಯಿ, ಕೆಳದಿ ಚೆನ್ನಮ್ಮನ ಜೀವನ ಚರಿತ್ರೆ, ಸಮುಚ್ಚಯ, ವಧುವಿಗೆ ಉಡುಗೊರೆ, ಮೊಗ್ಗೆಯ ಮಾಲೆ, ಸೊಬಗಿನ ಮನೆ, ಶ್ರೀಗಿರಿಯಿಂದ ಹಿಮಗಿರಿಗೆ, ಮಹಿಳಾ ಚೇತನ, ಸಾರ್ವಜನಿಕ ರಂಗದಲ್ಲಿ ಮಹಿಳೆ, ಪುರಾತನ ಶಿವಶರಣರು, ಹರಿಹರನ ಪ್ರಾರ್ಥನೆಗಳು, ದಾಂಪತ್ಯ ಯೋಗ.. ಹೀಗೆ ಅವರು ಬರೆದ ಕೃತಿಗಳನ್ನು ಹೆಸರಿಸುತ್ತಾ, ಅವರ ಇನ್ನಷ್ಟು ಸೇವೆಯನ್ನು ನಮ್ಮೊಂದಿಗೆ ಹಂಚಿಕೊಂಡು ತಮ್ಮ ಉಪನ್ಯಾಸವನ್ನು ಮುಗಿಸಿದರು.

ಪ್ರೊ. ಶಾರದಾ ಪಾಟೀಲ ಅವರು ಶರಣೆಯರು ಶರಣರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಟ್ಟತನ ಮೆರೆದಿದ್ದಾರೆ
ಚೌಕಟ್ಟುಗಳನ್ನು ಮೀರಿ ಬೆಳೆದಿದ್ದಾರೆ, ವಿಮೋಚನೆಯ ದೀಪವನ್ನು ಕೊಂಡೊಯ್ದಿದ್ದಾರೆ ಎಂದು ಹೇಳುತ್ತಾ, ಮಹಿಳೆಯರು ಸಂಭ್ರಮ, ಗೆಲುವು, ಸುಖ, ಹರುಷದ ಜೊತೆಗೆ ಸಂಘರ್ಷಗಳನ್ನು ಎದುರಿಸಿ,. ಮೇರು ಪರ್ವತವನ್ನೇ ಏರಿದ್ದಾರೆ ಎಂದು ಹೇಳುತ್ತಾ, ಕನ್ನಡದ ಕೃತಿಗಳನ್ನು ಹೆಸರಿಸಿ, ಇಬ್ಬರೂ ಉಪನ್ಯಾಸಕರ ವಿಷಯವನ್ನು ನಮ್ಮೊಂದಿಗೆ ಮಾರ್ಗದರ್ಶನದಲ್ಲಿ ಹಂಚಿಕೊಂಡರು.

ಡಾ. ಶಶಿಕಾಂತ ಪಟ್ಟಣ ಅವರು ತಾವು ಮೊದಲು ಜಯದೇವಿ ತಾಯಿ ಅವರನ್ನು ನೋಡಿದ್ದು, ನಾಲ್ಕನೆಯ ಕ್ಲಾಸ್ ವರೆಗೆ ಅಷ್ಟೇ ಶಾಲೆಗೆ ಹೋಗಿದ್ದರೂ, ಕನ್ನಡ ಕಲಿತು 19 ನೆಯ ಶತಮಾನದಲ್ಲಿ ಕನ್ನಡ ಸಾರಸ್ವತ ಲೋಕದಲ್ಲಿ ಸಾಮ್ರಾಜ್ಞಿಯಾಗಿ ಮೆರೆದರು ಎಂದು ಹೇಳುತ್ತಾ, ಶಾಂತಾದೇವಿ ಅವರು 9 ನೆಯ ಕ್ಲಾಸ್ ವರೆಗೆ ಓದಿದ್ದರೂ ಸಹ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮ ಗುರುತನ್ನು ಮೂಡಿಸಿದ್ದರು ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದನ್ನು ಅಕ್ಕನ ಬಳಗ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಎಲ್ಲವನ್ನೂ ಅತ್ಯಂತ ಅಭಿಮಾನದಿಂದ ಹಂಚಿಕೊಂಡರು.

ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಡಾ. ಸರಸ್ವತಿ ಪಾಟೀಲ್ ಅವರ ಸ್ವಾಗತ -ಪ್ರಾಸ್ತಾವನೆ -ಪರಿಚಯ
ಶರಣೆ ಅಕ್ಕಮಹಾದೇವಿ ತೆಗ್ಗಿ ಅವರ ಶರಣು ಸಮರ್ಪಣೆ, ತ್ರಿವೇಣಿ ವಾರದ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.ಡಾ. ಶಾರದಾಮಣಿ ಹುನಶಾಳ ಅವರು ಕಾರ್ಯಕ್ರಮವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group