ಉಮೇಶ ಕತ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಮನವಿ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಸಿಂದಗಿ: ಕಡುಬಡವರಿಗೆ ನೀಡಲಾಗುತ್ತಿರುವ ಆಹಾರ ಧಾನ್ಯ ಬಗ್ಗೆ ಕೇಳಿದರೆ ಸಾಯುವುದು ಒಳ್ಳೆಯದು ಎಂದು ಉಢಾಫೆ ಉತ್ತರ ನೀಡಿದ ಆಹಾರ ಸಚಿವ ಉಮೇಶ ಕತ್ತಿ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಮಾಜಿ ತಾಲೂಕಾಧ್ಯಕ್ಷ ಪ್ರಕಾಶ ಹಿರೇಕರುಬರ, ವಕ್ತಾರ ಸಿದ್ದಣ್ಣ ಚೌಧರಿ ಮಾತನಾಡಿ, ಕಳೆದ ಒಂದು ವರ್ಷದಿಂದ ರಣಕೇಕೆ ಬಾರಿಸುತ್ತಿರುವ ಮಹಾಮಾರಿ ಕೋವಿಡ್ ಸೋಂಕು ಆವರಿಸಿದ್ದರಿಂದ ರಾಜ್ಯ ಸರಕಾರ ಲಾಕ್‍ಡೌನ್ ಹಾಕಿದೆ ಇದರಿಂದ ಬಡಜನರ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಊಟಕ್ಕೂ ಗತಿಯಿಲ್ಲದಂತಾಗಿದೆ ಇಂತಹ ಸಂದರ್ಭದಲ್ಲಿ ಕಳೆದ ಕಾಂಗ್ರೆಸ ಮತ್ತು ಜೆಡಿಎಸ್ ಪಕ್ಷಗಳ ಅಧಿಕಾರಾವಧಿಯಲ್ಲಿ ನೀಡುತ್ತಿದ್ದ ಆಹಾರಧಾನ್ಯಕ್ಕೆ ಕತ್ತರಿ ಹಾಕಿದೆ ಈ ನೀತಿಯನ್ನು ಸಾರ್ವಜನಿಕರು ದೂರವಾಣಿ ಮೂಲಕ ಸಚಿವರಿಗೆ ಬಡ ಕೂಲಿ ಕಾರ್ಮಿಕರು ಕರೆ ಮಾಡಿದರೆ ಸಾಯುವುದು ಒಳ್ಳೆಯದು ಎಂಬ ಉಡಾಫೆ ಉತ್ತರ ನೀಡುತ್ತಿರುವ ಆಹಾರ ಸಚಿವ ಉಮೇಶ ಕತ್ತಿ ಅವರ ಮೇಲೆ ಕ್ರಿಮಿನಲ್ ಕೇಸು ಹಾಕಿ ರಾಜ್ಯ ಬಿಜೆಪಿ ಸರಕಾರವನ್ನು ವಜಾ ಗೊಳಿಸಬೇಕು ಇಲ್ಲದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಕ್ತಾರ ಸಿದ್ದಣ್ಣ ಚೌಧರಿ ಮಾತನಾಡಿ, ರಾಜ್ಯದಲ್ಲಿ ಕೊರೋನಾ ಆವರಿಸಿದ್ದರಿಂದ 14 ದಿನಗಳ ಕಾಲ ಲಾಕ್‍ಡೌನ ಹೇರಿದೆ ಅದಕ್ಕೆ ಪೂರಕವಾಗಿ ಮನೆಯಲ್ಲಿ ಕುಳಿತ ಜನರ ಜೊತೆ ಸರಕಾರ ಕೈ ಜೋಡಿಸಬೇಕು ಆದರೆ ಬರೀ ಮೊಸಳೆ ಕಣ್ಣಿರು ಸುರಿಸಿ ಕೊರೋನಾ ಎಂಬ ರೋಗದ ಹೆಸರಿನಲ್ಲಿ ಹಣ ಲೂಟಿ ಹೊಡೆಯುತ್ತಿದೆ ಕಳೆದ ಸರಕಾರದಲ್ಲಿರುವ ಯೋಜನೆಗಳಿಗೆ ಕತ್ತರಿ ಹಾಕುವಂಥ ಆದೇಶ ಹೊರಡಿಸುತ್ತಿವೆ ಮತ್ತು ಗ್ಯಾಸ, ಪೆಟ್ರೋಲ್, ಡಿಸೇಲ್, ಎಣ್ಣೆ, ರಸಗೊಬ್ಬರಗಳ ಸೇರಿದಂತೆ ರೈತರಿಗೆ ಉಪಯುಕ್ತ ವಸ್ತುಗಳ ಮೇಲೆ ದುಬಾರಿ ಬೆಲೆ ಹಾಕಿದೆ ಆದರೆ ಕಳೆದ ಸರಕಾರಗಳಲ್ಲಿ ಅಂತ್ಯೋದಯ, ಬಿಪಿಎಲ್ ಬಡ ಕಾರ್ಡುದಾರರಿಗೆ ನೀಡಲಾಗುತ್ತಿರುವ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ಈಗಿನ ಬಿಜೆಪಿ ಸರಕಾರ 3 ಕೆಜಿಗೆ ತಂದು ನಿಲ್ಲಿಸಿದೆ ಕೂಡಲೇ ಇಂತಹ ಸರಕಾರವನ್ನು ವಜಾಗೊಳಿಸಿ ಬಡಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಂಕರಗೌಡ ಕೊಟಿಖಾನಿ, ಶರಣಪ್ಪ ವಿಜಾಪುರ ಸೇರಿದಂತೆ ಹಲವರಿದ್ದರು.

- Advertisement -
- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!