ಕೋವಿಡ್‍ದಿಂದ ಮೃತರಿಗೆ ಪರಿಹಾರ ಧನ ನೀಡಲು, ಬೆಲೆ ಏರಿಕೆ ಖಂಡಿಸಿ ಜೆಡಿಎಸ್‍ನಿಂದ ಮನವಿ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಮೂಡಲಗಿ – ಕೋವಿಡ್ ದಿಂದ ಮೃತಪಟ್ಟ ಕುಟುಂಬಕ್ಕೆ ರೂ. 10ಲಕ್ಷ ಪರಿಹಾರ, ಸಂಕಷ್ಟದಲ್ಲಿರುವ ಪ್ರತಿ ರೈತ ಕುಟುಂಬಕ್ಕೆ ರೂ. 10ಸಾವಿರ ಪರಿಹಾರ ಹಾಗೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಕಬ್ಬಿಣ, ಸಿಮೆಂಟ್, ರಸಗೊಬ್ಬರ, ಮತ್ತು ದಿನಸಿ ವಸ್ತುಗಳ ಬೆಲೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಆಗ್ರಹಿಸಿ ತಹಸೀಲ್ದಾರ ಡಿ.ಜಿ.ಮಹಾತ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುಗಳಿಗೆ ಗುರುವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಶಂಕರ ಮಾಡಲಗಿ ಅವರು, ಸರ್ಕಾರವು ಕೋವಿಡ್‍ನಿಂದ ಮೃತರಿಗೆ ಪರಿಹಾರ ನಿಡಲು ಎಪಿಲ್, ಬಿಪಿಎಲ್ ಎಂದು ತಾರತಮ್ಯ ಮಾಡದೇ ಅವರ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ನೀಡಬೇಕು. ರಾಜ್ಯದಲ್ಲಿರುವ ಬಡವರು, ವಾಹನ ಚಾಲಕರು, ಮಾಲೀಕರು, ಕಟ್ಟಡ ನಿರ್ಮಾಣ ಮಾಲೀಕರು ಮತ್ತು ಕಟ್ಟಡ ಕಾರ್ಮಿಕರು ಅಲ್ಲದೇ ಮುಖ್ಯವಾಗಿ ಕೃಷಿಕ ಕುಟುಂಬಗಳು ಕಷ್ಟದಲ್ಲಿವೆ. ಅಂಥವರ ಕುಟುಂಬಗಳಿಗೆ ಸರ್ಕಾರಗಳು ನೆರವಾಗಬೇಕಾಗಿದೆ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರಕಾಶ ಸೋನವಾಲ್ಕರ, ಅರಭಾಂವಿ ಬ್ಲಾಕ್ ಅಧ್ಯಕ್ಷ ಈರಣ್ಣ ಕೊಣ್ಣೂರ, ಪ್ರಕಾಶ ಬಾಗೋಜಿ ಮಾತನಾಡಿದರು.
ಮುಖಂಡರಾದ ಮಲ್ಲಪ್ಪ ಮದಗುಣಕಿ, ಶ್ರೀಕಾಂತ ಪರುಶೆಟ್ಟಿ, ಚನ್ನಪ್ಪ ಅಥಣಿ, ಶಿವಲಿಂಗ ಹೋಸತೋಟ, ಮಲ್ಲಪ್ಪ ತೇರದಾಳ, ಸಂಗಪ್ಪ ಕಳ್ಳಿಗುದ್ದಿ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ ಸದಸ್ಯರಾದ ಆದಮ್ ತಾಂಬೂಳಿ, ಶಿವು ಸಣ್ಣಕ್ಕಿ, ಸತ್ಯೆವ್ವಾ ಅರಮನಿ, ಕಾಶಪ್ಪ ಝಂಡೇಕುರಬರ, ಸಿದ್ದಪ್ಪ ತುರಬಿ, ಬಸಪ್ಪ ನೇಮಗೌಡರ ಉಪಸ್ಥಿತರಿದ್ದರು.

- Advertisement -
- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!