spot_img
spot_img

ವಿಜಯಪುರದಲ್ಲಿ ಜೆಡಿಎಸ್ ಬರುವುದು ನಿಶ್ಚಿತ – ಚಂದ್ರಾ ಶ್ರೀನಿವಾಸ

Must Read

- Advertisement -

ಸಿಂದಗಿ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ದ್ವೇಷದ ರಾಜಕಾರಣ ಮಾಡುತ್ತ ಸುಳ್ಳು-ಪೊಳ್ಳು ಭರವಸೆಗಳನ್ನು ನೀಡುತ್ತ ಜನರನ್ನು ಯಾಮಾರಿಸುವ ಕಾರ್ಯಕ್ಕೆ ಕೈ ಹಾಕಿದೆ ಆದರೆ ಇವುಗಳನ್ನು ಮೆಟ್ಟಿ ನಿಂತು ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ವಿಜಯಪತಾಕೆ ಹಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂದ್ರಾ ಶ್ರೀನಿವಾಸ್ ಅಭಿಮತ ವ್ಯಕ್ತ ಪಡಿಸಿದರು.

ಪಟ್ಟಣದ ಬಂದಾಳ ರಸ್ತೆಯಲ್ಲಿರುವ ಜೆಡಿಎಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ 2014ರಿಂದ ದ್ವೇಷದ ರಾಜಕಾರಣ ಹೆಚ್ಚಾಗುತ್ತಿದ್ದು ಡಾ. ಅಂಬೇಡ್ಕರರ ಸಂವಿಧಾನವನ್ನು ಗಾಳಿಗೆ ತೂರಿ ದಲಿತರ, ಅಲ್ಪಸಂಖ್ಯಾತರ, ಕುಡುಬಡವರ ಸೌಲಭ್ಯಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ. ಪ್ರಾದೇಶಿಕ ಪಕ್ಷ ಕೆಲವು ತಿಂಗಳು ಅಧಿಕಾರ ನಡೆಸಿದರೂ ಕೂಡಾ ಜನಸಾಮಾನ್ಯರಿಗೆ ಪ್ರಯೋಜನವಾಗುವಂಥ ಸೌಲಭ್ಯಗಳನ್ನು ನೀಡಿದೆ. ಅಲ್ಲದೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿ,  ಶಾಶ್ವತ ಕುಡಿಯುವ ನೀರಾವರಿ ಯೋಜನೆಗಳನ್ನು ರೂಪಿಸಿ ರೈತರ ಬಾಳನ್ನು ಹಸನಾಗಿಸಿದೆ. ಇಡೀ ದೇಶದಲ್ಲಿ ಪ್ರತಿಶತ 50 ಮಹಿಳಾ ಮೀಸಲಾತಿ ತರಬೇಕೆನ್ನುವ ಹೋರಾಟ ನಡೆಸಿದ್ದು ಜೆಡಿಎಸ್ ಪಕ್ಷದಿಂದ ಮಾತ್ರ ಅದರ ಪ್ರತಿಫಲವಾಗಿ ಪ್ರತಿಶತ 33 ಮೀಸಲಾತಿ ದೊರೆಯುವಂತಾಗಿದೆ ಎಂದರು.

ದೇಶದಲ್ಲಿ ಎರಡು ರೀತಿಯ ರಾಜಕಾರಣಿಗಳನ್ನು ನೋಡುತ್ತೇವೆ ಒಬ್ಬರು ದುಡ್ಡು ದೋಚಲು ರಾಜಕಾರಣ ಮಾಡಿದರೆ ಇನ್ನೊಬ್ಬರು ಜನಸೇವೆಯೇ ಜನಾರ್ಧನ ಸೇವೆ ಎನ್ನುವ ನಿಟ್ಟಿನಲ್ಲಿ ಜನರ ಮಧ್ಯದಲ್ಲಿದ್ದು ಜನಸಮಾನ್ಯರ ಸೇವೆ ಸಲ್ಲಿಸುವುದಾಗಿದೆ ಸಿಂದಗಿಯ ಜೆಡಿಎಸ್ ಅಭ್ಯರ್ಥಿ ಸೈನಿಕರಾಗಿ ದೇಶ ಸೇವೆ ಮಾಡಿದ್ದಾರೆ ಅದರಂತೆ ಜನರ ಸೇವೆ ಮಾಡಲು ಹೊರಟ್ಟಿದ್ದಾರೆ ಅದನ್ನು ಗುರುತಿಸಿ ಶಿವಾನಂದ ಪಾಟೀಲ ಸೋಮಜ್ಯಾಳ ಅವರನ್ನು ಗುರುತಿಸಲಾಗಿದೆ ಹಿಂದಿನ ಅವಧಿಯಲ್ಲಿ ಕಾರ್ಯಕ್ರಮಗಳನ್ನು ನೋಡಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಕೊಂಕಣ ರೇಲ್ವೆ ಪ್ರಾರಂಭ:

- Advertisement -

ಇಡೀ ದೇಶದಲ್ಲಿ ಸಂದರ್ಭಕ್ಕೆ ತಕ್ಕಂತೆ ಸೌಲಭ್ಯಗಳನ್ನು ದೊರಕಿಸಿಕೊಳ್ಳುವಲ್ಲಿ ಜನತಾ ಪರಿವಾರ 25 ವರ್ಷಗಳಿಂದ ಹೋರಾಟ ನಡೆಸಿದೆ ಕೊಂಕಣ ರೇಲ್ವೆ ಪ್ರಾರಂಭಿಸಲು ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಂಡು ಜೈಲುವಾಸ ಕೂಡ ಮಾಡಿದ ಕೀರ್ತಿ ಜಾರ್ಜ್ ಫರ್ನಾಂಡಿಸ್, ದಂಡೋತಿ, ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ ಎಂದರು.

ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಮಾತನಾಡಿ, ರಾಜ್ಯದಲ್ಲಿ ಯಾವಾಗ್ಗೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಿದೆ ಅಂದು ರಾಜ್ಯ ಅಭಿವೃಧ್ಧಿ, ರೈತರ ಸಾಲ ಮನ್ನಾಗಳಂಥ ಜನಪರ ಯೋಜನೆಗಳನ್ನು ಜಾರಿಗೆ ಜನಸಾಮಾನ್ಯರ ಆಶೊತ್ತರಗಳಿಗೆ ಸ್ಪಂದಿಸಿದೆ ಆ ಕಾರಣಕ್ಕೆ ಸೈನಿಕರ ಖೋಟಾದಡಿ ಟಿಕೆಟ ಕೇಳಿದ್ದೆ ನನ್ನನ್ನು ಗುರುತಿಸಿದ್ದಾರೆ ಅವರು ನನ್ನ ಮೇಲಿಟ್ಟ ವಿಶ್ವಾಸವನ್ನು ಉಳಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗೊಲ್ಲಾಳಪ್ಪಗೌಡ ಪಾಟೀಲ ಗೊಲಗೇರಿ, ದಾನಪ್ಪಗೌಡ ಚನ್ನಗೊಂಡ ವಕೀಲರು, ಸುಧಾ, ಅಂಕಿತಾ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group