spot_img
spot_img

ಜನಪರ ಆಡಳಿತ ನೀಡಲು ಜೆಡಿಎಸ್ ಸೇರಿದೆ – ಶಿವಾನಂದ ಪಾಟೀಲ

Must Read

spot_img
- Advertisement -

ಸಿಂದಗಿ:  ರಾಜ್ಯದಲ್ಲಿ ಯಾವಾಗ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬಂದಿದೆಯೋ ಅಂದು ರೈತಪರ, ಜನಪರ ಆಡಳಿತ ನೀಡಿದೆ ಆ ಕಾರಣಕ್ಕೆ ಬಿಜೆಪಿಯನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ ತಾಲೂಕಿನ ರೈತ ಭಾಂಧವರು ನನಗೆ ಸೇವೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.

ಅದಕ್ಕೆ ರಾಜಕೀಯ ಪ್ರವೇಶ ಮಾಡಿದ್ದೇನೆ ಒಬ್ಬ ಸೈನಿಕನಾಗಿ ನನ್ನ ಜೀವನ ಇರುವವರೆಗೂ ಜನ ಸೇವೆಯೇ ಜನಾರ್ಧನ ಸೇವೆ ಮಾಡುವೆ ಎಂದು ಸಿಂದಗಿ ಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜ್ಯಾಳ ಹೇಳಿದರು.

ಪಟ್ಟಣದ ಬಂದಾಳ ರಸ್ತೆಯಲ್ಲಿರುವ ಜೆಡಿಎಸ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನನ್ನ 4 ವರ್ಷದ ರಾಜಕೀಯ ಅವಧಿಯಲ್ಲಿ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ.ಇಬ್ರಾಹೀಂ, ಜಿಲ್ಲೆಯ ಏಕೈಕ ಶಾಸಕ ದೇವಾನಂದ ಚವ್ಹಾಣ ತಾಲೂಕಿನ ನಿಷ್ಠಾವಂತ ಕಾರ್ಯಕರ್ತರಿಗೆ ಮತ್ತು ಕುಲಬಾಂಧವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಹಾಗೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಾವಧಿಯಲ್ಲಿ ಈ ಕ್ಷೇತ್ರದಲ್ಲಿ ನೀರಾವರಿ, ಆಲಮೇಲ ತಾಲೂಕು ಘೋಷಣೆ ಸೇರಿದಂತೆ ನೀಡಿದ ಅನೇಕ ಕೊಡುಗೆಗಳನ್ನು ಮುಂದಿಟ್ಟುಕೊಂಡು ಭೂತ ಮಟ್ಟದ ಕಾರ್ಯಕರ್ತರ ಪಡೆ ನಿರ್ಮಿಸಿ ಹೊಸ ಪರ್ವ ಪ್ರಾರಂಭಿಸಿ ಪ್ರಾಮಾಣಿಕತೆ, ಭ್ರಷ್ಟಾಚಾರರಹಿತ, ಸಮಾಜದಲ್ಲಿ ಪ್ರತಿಯೊಂದು ಕಷ್ಟಗಳನ್ನು ಅರಿತು ಯಾವ ರೀತಿ ಸಹಾಯ ಮಾಡಬಹುದು ಮತ್ತು ರಾಜ್ಯದಲ್ಲಿ ಮಾಜಿ ಸಿಎಂ ಕುಮಾರಣ್ಣ ಅವರು ಪಂಚತಂತ್ರ ಯೋಜನೆ, ಜನಜಲಧಾರೆ ಯೋಜನೆಯಲ್ಲಿ ಇಟ್ಟುಕೊಂಡ ಪ್ರಣಾಳಿಕೆ ಗಳನ್ನು ಈ ಕ್ಷೇತ್ರಕ್ಕೂ ಅನ್ವಯವಾಗುವಂತೆ ಪ್ರಚಾರ ಮಾಡುವ ಮೂಲಕ ಜನಮನ ಗೆಲ್ಲುತ್ತೇನೆ. ಆ ಕಾರಣಕ್ಕೆ ಹಲವು ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ನನ್ನೊಳಗೊಂಡು ಅನೇಕ ರಾಜಕೀಯ ಮುಖಂಡರ ಪಡೆ ಹರಿದು ಬರುತ್ತಿದೆ ಎಂದು ಆಶಯವ್ಯಕ್ತಪಡಿಸಿದರು. 

- Advertisement -

ಈ ಸಂದರ್ಭದಲ್ಲಿ ಸೈನಿಕ ಮಂಜುನಾಥ ಯಂಕಂಚಿ, ಮಹಾಂತೇಶ ಪಾರಗೊಂಡ,  ಪ್ರಕಾಶ ಪಾಟೀಲ ಕೊರಳ್ಳಿ, ದಾವಲಸಾಬ ನದಾಫ್, ರಾಜು ಗಣಿಹಾರ, ಚಂದು ಅತನೂರ, ಮಲ್ಲಯ್ಯ ಹಿರೇಮಠ, ಸಂತೋಷ ಶಿರಕನಳ್ಲಿ, ಅರುಣ ಪಾಟೀಲ, ಅಪ್ಪುಗೌಡ ಪಟೀಲ ಗೋಲಗೇರಿ, ಸಮೀರ ತಾಂಬೋಳೀ, ಸಿದ್ದು ಶಿರಕನಳ್ಳಿ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group