spot_img
spot_img

ಪತ್ರಕರ್ತ ಮುರುಗೇಶ ಹಿಟ್ಟಿ ನಿಧನ; ಕಾರ್ಯನಿರತ ಪತ್ರಕರ್ತರ ಸಂಘದ ಸಂತಾಪ

Must Read

ವಿಜಯಪುರ: ಸಿಂದಗಿಯ ಹಿರಿಯ ಪತ್ರಕರ್ತ ಮುರುಗೇಶ ಹಿಟ್ಟಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಂತಾಪ ಸೂಚಿಸಿದೆ.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಮುರುಗೇಶ ಹಿಟ್ಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ.ಚೂರಿ ಮಾತನಾಡಿ, ಪತ್ರಕರ್ತ ಮುರುಗೇಶ ಹಿಟ್ಟಿ ಅವರು ಸ್ನೇಹಜೀವಿಯಾಗಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಗು-ನಗುತಾ ಮಾತನಾಡುವ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ನಿಧನ ತುಂಬಾ ಬೇಸರವನ್ನುಂಟು ಮಾಡಿದೆ ಎಂದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಮಾತನಾಡಿ, ಪತ್ರಕರ್ತ ಮುರುಗೇಶ ಹಿಟ್ಟಿ ಅವರು ಅಜಾತಶತ್ರು ಆಗಿದ್ದರು. ಅವರಿಗೆ ಯಾರೂ ವಿರೋಧಿಗಳೇ ಇರಲಿಲ್ಲ. ಆತ ವಿದ್ಯಾರ್ಥಿ ದೆಸೆಯಿಂದಲೂ ಓರ್ವ ಒಳ್ಳೆಯ ಹೋರಾಟಗಾರ. ಸಿಂದಗಿ ತಾಲುಕಿನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಅವರ ಜೊತೆಗೂಡಿ ಎಬಿವ್ಹಿಪಿ ಸಂಘಟನೆ ಕಟ್ಟಿ ಬೆಳೆಸಿದ್ದನ್ನು ಸ್ಮರಿಸಿದರು.

ಸಲಹಾ ಸಮಿತಿ ಸದಸ್ಯರಾದ ರಾಜು ಪಾಟೀಲ, ದೇವೇಂದ್ರ ಹೆಳವರ ಮಾತನಾಡಿ, ಪತ್ರಕರ್ತ ಮುರುಗೇಶ ಹಿಟ್ಟಿ ಅವರು ನಮ್ಮೆಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ ಒಬ್ಬ ಒಳ್ಳೆಯ ಸ್ನೇಹಿತ. ಅವರು ಅಕಾಲಿಕವಾಗಿ ನಿಧನ ಹೊಂದಿರುವುದು ಎಲ್ಲರಿಗೂ ತುಂಬಾ ದುಃಖವನ್ನುಂಟು ಮಾಡಿದೆ. ಅವರ ಕುಟುಂಬದವರಿಗೆ ಆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ಕೆ.ಕೆ.ಕುಲಕರ್ಣಿ ಮಾತನಾಡಿ ಸಂಘದ ಸಕ್ರಿಯ ಸದಸ್ಯರಾಗಿದ್ದ ಮುರುಗೇಶ ಹಿಟ್ಟಿ ಅವರ ನಿಧನದಿಂದ ಪತ್ರಕರ್ತರ ಸಂಘಕ್ಕೆ ಹಾನಿಯಾದಂತಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿ ಮೆಂಡೇಗಾರ, ಸುನೀಲ ಗೋಡೆನ್ನವರ, ಆಸೀಫ್ ಬಾಗವಾನ, ಸುನೀಲ ಕಾಂಬಳೆ, ನಾಮನಿರ್ದೇಶಿತ ಸದಸ್ಯರಾದ ಗುರು ಗದ್ದನಕೇರಿ, ನವೀದ ಅಂಜುಮ ಮಮದಾಪೂರ, ಸದಸ್ಯರಾದ ಅರವಿಂದ ಬಿರಾದಾರ, ಡಿ.ಎಸ್.ಮೇತ್ರಿ, ಸುನೀಲ ಭಾಸ್ಕರ ಹಾಗೂ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕೌಜಲಗಿ ಹೊಸ ತಾಲೂಕು ರಚನೆಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ

ಎಲ್ಲರೂ ಸೇರಿ ಒಗ್ಗಟ್ಟಾಗಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನಿಸೋಣ ಕೌಜಲಗಿ(ತಾ.ಗೋಕಾಕ): ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್...
- Advertisement -

More Articles Like This

- Advertisement -
close
error: Content is protected !!