spot_img
spot_img

ಪತ್ರಕರ್ತರು ಕಾನೂನು ಚೌಕಟ್ಟಿನಲ್ಲಿ ಪರಂಪರೆಯ ಕರ್ತವ್ಯ ಪಾಲಿಸಬೇಕು – ಡಾ.ಎಸ್ ಎಸ್ ಪಾಟೀಲ

Must Read

ಮೂಡಲಗಿ : ಪತ್ರಿಕೋದ್ಯಮ ಒಂದು ವೃತ್ತಿ, ಒಂದು ಶಿಸ್ತು, ಸಮಾಜದಲ್ಲಿ ನಮ್ಮ ನಡೆ-ನುಡಿಗಳನ್ನು ರೂಪಿಸುವಲ್ಲಿ ಪತ್ರಿಕೆಯ ಪಾತ್ರ ಮಹತ್ವಪೂರ್ಣವಾದದ್ದು, ಪತ್ರಕರ್ತರು ಕಾನೂನು ವಿಧಿಸುವ ಸೂತ್ರವನ್ನು, ಚೌಕಟ್ಟನ್ನು, ಪರಂಪರೆಯ ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ ಎಂದು ಡಾ. ಎಸ್ ಎಸ್ ಪಾಟೀಲ ಹೇಳಿದರು.

ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಶನಿವಾರ ಸಂಜೆ ಹಮ್ಮಿಕೊಳ್ಳಲಾದ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಪ್ರಪಂಚದಲ್ಲಿ ಪತ್ರಿಕೆಯಲ್ಲಿಯೂ ಬಹಳ ಪೈಟೋಟಿ ಇರುವುದನ್ನು ಇಂದು ನೋಡುತ್ತಿದ್ದೇವೆ. ನಮ್ಮ ಪತ್ರಿಕೆ ಓದುಗರನ್ನು ಆಕರ್ಷಿಸಬೇಕು, ಹೆಚ್ಚು ಜನಪ್ರಿಯವಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲ ಪತ್ರಿಕೆಗಳು ಜನಪ್ರಿಯತೆ ಪಡೆಯಲು ಮುನ್ನಡೆ ಸಾಧಿಸಲು ಸ್ಪರ್ಧಾತ್ಮಕವಾಗಿ ತಮ್ಮ ಕಾರ್ಯನಿರ್ವಹಿಸುತ್ತಿವೆ ಎಂದರು.

ಡಾ ಭಾರತಿ ಕೋಣಿ ಹಾಗೂ ಡಾ ಸಂದೀಪ ಕನಕರಡ್ಡಿ ಮಾತನಾಡಿ, ಸಕಾಲಕ್ಕೆ ಸರಿಯಾಗಿ ಸುದ್ದಿಯನ್ನು ಸಮಗ್ರವಾಗಿ ಓದುಗರಿಗೆ ಒದಗಿಸುವುದು ಪತ್ರಿಕೆಯ ಜವಾಬ್ದಾರಿ. ಸತ್ಯ, ನಿಖರ, ವಸ್ತುನಿಷ್ಠ ಇವೆಲ್ಲಾ ಆಗಿದ್ದು, ಸಕಾಲಿಕವಾಗಿಲ್ಲದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ವರದಿಗಾರರು ಸಕಾಲಿಕವಾದ ಸುದ್ದಿಗೆ ಹೆಚ್ಚು ಮಹತ್ವಕೊಟ್ಟು ಪ್ರಕಟಣೆ ಮಾಡಬೇಕು ಎಂದರು.

ಪತ್ರಕರ್ತ ಮಲ್ಲು ಬೋಳನವರ ಹಾಗೂ ಚಂದ್ರಶೇಖರ ಪತ್ತಾರ ಮಾತನಾಡಿ, ಸಮಾಜಕ್ಕೆ ಹಾಗೂ ಜನರಿಗೆ ವೈದ್ಯರ ಪಾತ್ರ ಅವರ ಪ್ರಾಮುಖ್ಯತೆ ಮತ್ತು ಜವಾಬ್ದಾರಿಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡಿರುತ್ತದೆ. ವೈದ್ಯರು ರೋಗಿಯ ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೇ ಸಮಾಜದ ಆರೋಗ್ಯವನ್ನು ಕಾಪಾಡುತ್ತಾರೆ. ರೋಗಿಯ ಜೀವ ಉಳಿಸುವುದಕ್ಕಾಗಿ ವೈದ್ಯರು ಕೊನೆ ಕ್ಷಣದವರೆಗೂ ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ. ವೈದ್ಯರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ತಾಳ್ಮೆ, ಸಹನೆಯಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ವಿದ್ಯಾ ಪೂಜೇರಿ, ಡಾ. ರಮೇಶ ಗುದ್ದಿಗೊಪ್ಪ, ಡಾ. ಶಾನೂರ ನದಾಫ್, ಪತ್ರಕರ್ತರಾದ ಅಲ್ತಾಪ್ ಹವಾಲ್ದಾರ, ಸುರೇಶ ಪಾಟೀಲ, ಸುಭಾಷ ಗೋಡ್ಯಾಗೋಳ, ಭೀಮಶಿ ತಳವಾರ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚ್ಚರಡ್ಡಿ, ವೇದಿಕೆಯ ಪದಾಧಿಕಾರಿಗಳಾದ ಶಿವನಗೌಡ ಪಾಟೀಲ, ಲಕ್ಷ್ಮಣ ಮೆಳ್ಳಿಗೇರಿ ತಿಮ್ಮಣ್ಣಾ ಕೋಳಿಗುಡ್ಡ, ಸವಿತಾ ಸತ್ತಗೇರಿ, ರುಕ್ಮವ್ವಾ ದಳವಾಯಿ, ರೇಖಾ ನಾವಿ ಗ್ರಾಮದ ಮುಖಂಡರಾದ ರಮೇಶ ಕೆಚ್ಚರಡ್ಡಿ, ಈರಪ್ಪ ಸಂಕನ್ನವರ, ಯುಹಾನ್ ಮಾರಾಪೂರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!