ಶರಣ ಸಂಸ್ಕೃತಿ ಉತ್ಸವದ ವೇಳೆ ಅಂಗರಕ್ಷಕರ ಕುಟುಂಬವನ್ನು ಭೇಟಿಯಾದ ನ್ಯಾಯಮೂರ್ತಿ

Must Read

ಗೋಕಾಕ್‌ನಲ್ಲಿ ದಿನಾಂಕ ಇತ್ತೀಚೆಗೆ ನಡೆದ 21ನೇ ಶೂನ್ಯ ಸಂಪಾದನಾ ಮಠದ ಶರಣ ಸಂಸ್ಕೃತಿ ಉತ್ಸವದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ತಮ್ಮ ಅಂಗರಕ್ಷಕರಾದ ಆಂಜನೇಯ ಪಿ. ದುರ್ಗಣ್ಣವರ ಅವರ ನಿವಾಸಕ್ಕೆ ಭೇಟಿ ನೀಡಿದರು.

ಗೋಕಾಕ್ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ನಿವಾಸಿಯಾಗಿರುವ ಆಂಜನೇಯ ಪಿ. ದುರ್ಗಣ್ಣವರ ಅವರು ನ್ಯಾಯಮೂರ್ತಿಗಳ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಮನೆಗೆ ನ್ಯಾಯಮೂರ್ತಿಗಳ ಭೇಟಿ ಕುಟುಂಬದವರಿಗೆ ಅಪಾರ ಸಂತೋಷ ತಂದಿತು. ನ್ಯಾಯಮೂರ್ತಿ ಶ್ರೀಶಾನಂದ ಅವರ ಸರಳತೆ, ಆತ್ಮೀಯತೆ ಹಾಗೂ ಗೌರವಪೂರ್ಣ ವರ್ತನೆಯ ಕುರಿತು ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

ಈ ಭೇಟಿ ಗ್ರಾಮದಲ್ಲಿ ವಿಶೇಷ ಗೌರವ ಮತ್ತು ಸಂತಸದ ವಾತಾವರಣವನ್ನು ಸೃಷ್ಟಿಸಿತು.

LEAVE A REPLY

Please enter your comment!
Please enter your name here

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group