spot_img
spot_img

June 5: ಇಂದು ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳು

Must Read

- Advertisement -

ಪರಿಸರದ ಕಾಳಜಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ ೫ ರಂದು ವಿಶ್ವದಾದ್ಯಂತ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪರಿಸರವು ನಮ್ಮ ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಗೆ ಪ್ರಕೃತಿ ನೀಡಿರುವ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ.

ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಕೆರೆ, ಹಳ್ಳ, ನದಿ, ಸಾಗರ ಇತ್ಯಾದಿಗಳನ್ನು ನಾವು ಉಳಿಸಿಕೊಂಡು ಹೋಗುವುದು ಇಂದು ಬಹಳಷ್ಟು ಅವಶ್ಯಕತೆ ಇದೆ. ನಾವೆಲ್ಲರೂ ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಗಳವರೆಗೂ ಹೀಗೆಯೇ ಉಳಿಯಬೇಕಿದೆ.

ನಮ್ಮ ಮುಂದಿನ ಪೀಳಿಗೆಗೆ ನಾವು ಈ ಪರಿಸರವನ್ನು ಹಾಳು ಮಾಡದೆ ಉಳಿಕೊಂಡು ಹೋಗಬೇಕಾಗಿದೆ. ಈ ಕೊರೋನಾದ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ಗೊತ್ತಾಗಿರಬಹುದು ಹಣಕ್ಕಿಂತ ಪರಿಸರ ಎಷ್ಟು ಮುಖ್ಯ ಎಂದು. ಇನ್ನು ಮುಂದಾದರು ಪರಿಸರದ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಬರುವಲ್ಲಿ ಯಾವದೇ ಅನುಮಾನವಿಲ್ಲ‌.

- Advertisement -

ಆದಕಾರಣ ಜನ ಎಚ್ಚೆತ್ತುಕೊಂಡು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಭಾವಿಸಿ, ಪರಿಸರವನ್ನು ನಾವು ಪೂಜಿಸಿದರೆ ಅದು ನಮ್ಮ ರಕ್ಷಣೆ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು

ಇವತ್ತು ಜನ ಪರಿಸರದ ಬಗ್ಗೆ ಕಾಳಜಿ ವಹಿಸದೇ ಇದ್ರೆ ಹಲವಾರು ನೈಸರ್ಗಿಕ ವಿಕೋಪಗಳಿಗೆ ನಾವೇ ಆಹ್ವಾನ ನೀಡಿ ನಮ್ಮನ್ನು ನಾವೇ ವಿನಾಶದತ್ತ ಕರೆದೊಯ್ಯುವ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಂತೆ. ನಮ್ಮ ಮಕ್ಕಳಿಗೆ Google ನಲ್ಲಿ ಸರ್ಚ್ ಮಾಡಿ ಗಿಡ,ಮರ,ನೀರು ನಮ್ಮ ಪರಿಸರ ಮೊಬೈಲ್‌ ನಲ್ಲಿ ತೊರಿಸುವಂಥ ಕಾಲ ಬರದಂತೆ ನೋಡುವುದು ನಮ್ಮ ಕೈಯಲ್ಲಿ ಇದೆ.

ಆದರಿಂದ ನೀರನ್ನು ಮಿತವಾಗಿ ಬಳಸಿ ಗಿಡಮರಗಳನ್ನು ಸಾಧ್ಯವಾದಷ್ಟು ಜನರು ಬೆಳಸಲು ಮುಂದಾಗಬೇಕು ಪರಿಸರ ದಿನಾಚರಣೆಯನ್ನು ಅರ್ಥ ಬರ್ತದೆ ಅಂತ ನನ್ನ ಮನವಿ.

- Advertisement -

ಕೆ ದೀಪಕ್

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group