ಕ.ಸಾ.ಪ. 107ನೆಯ ಸಂಸ್ಥಾಪನಾ ದಿನಾಚರಣೆ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಬೈಲಹೊಂಗ – ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ತಿನ 107ನೇ ಸಂಸ್ಥಾಪನಾ ದಿನಾಚರಣೆಯನ್ನು ಗೋಕಾಕದ ತಾಲೂಕಿನ ಹಿರಿಯ ಸಾಹಿತಿಗಳಾದ ಪ್ರೊ.ಚಂದ್ರಶೇಖರ ಅಕ್ಕಿ ಅವರು ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಉಪನ್ಯಾಸ ಡಾ.ವ್ಹಿ. ಎಸ್ ಮಾಳಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸುದೀರ್ಘ 107 ವರ್ಷಗಳ ಹಳೆಯ ಕನ್ನಡ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಭಾಷೆಯ ಪ್ರಪ್ರಥಮ ಹೆಮ್ಮೆಯ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ. ಗಡಿನಾಡು, ಹೊರನಾಡು ಹಾಗೂ ವಿದೇಶಗಳಲ್ಲಿ ಎಲ್ಲೆಲ್ಲಿ ಕನ್ನಡಿಗರಿದ್ದಾರೋ, ಅಲ್ಲೆಲ್ಲ ಕಸಾಪ ಸಂಸ್ಥೆ ಸ್ಥಾಪಿಸಿ ಕನ್ನಡ ಭಾಷೆಗೆ ಗೌರವ ಸನ್ಮಾನ ದೊರೆಯುವಂತೆ ಮಾಡಿದೆ.

ಮೈಸೂರು ಅರಸರು ಹಾಗೂ ಸರ್ ಎಮ್ ವಿಶ್ವೇಶ್ವರಯ್ಯನವರ ಕನಸಿನ ಕನ್ನಡ ಸಂಸ್ಥೆ 1915 ಮೇ 5 ರಂದು ಸ್ಥಾಪನೆಯಾಯಿತು. ಇದುವರೆಗೆ 25 ಕಸಾಪ ರಾಜ್ಯಾಧ್ಯಕ್ಷರು ಈ ಸಂಸ್ಥೆಯನ್ನು ಕನ್ನಡ ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿ ಕಲೆಯನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಶ್ರಮಿಸಿದ್ದಾರೆ. ಪ್ರಥಮ ಅಧ್ಯಕ್ಷರಾಗಿ ಎಚ್ ವಿ ನಂಜುಂಡಯ್ಯನವರಿಂದ ಆರಂಭಗೊಂಡ ಸಂಸ್ಥೆ ಬೆಳಗಾವಿಯ ಬಹದ್ದೂರ ರಾಜಾ ಲಖಮನಗೌಡರ 1641ರಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ವಿಶೇಷ 1970ರಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆರಂಭಗೊಂಡು ಇದುವರೆಗೂ ಗಡಿನಾಡಿನಲ್ಲಿ, ಹಳ್ಳಿ ಪಟ್ಟಣಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡು ಕನ್ನಡ ಭಾಷೆಯ ಕಂಪನ್ನು ಬೀರಿದೆ. ಬೆಳಗಾವಿಯ ಸಾಹಿತಿಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಕನಸು ನನಸಾಗಬೇಕಿದೆ. ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

- Advertisement -

ಕಸಾಪ ಸಂಸ್ಥೆ ಕನ್ನಡ ಪುಸ್ತಕಗಳ ಪ್ರಕಟಣೆ, ಕನ್ನಡ ರತ್ನಕೋಶ ಪ್ರಕಟಣೆ, ಕಸಾಪ ದತ್ತಿ ಪ್ರಶಸ್ತಿ, ಕನ್ನಡ ನುಡಿ ಪತ್ರಿಕೆ ಪ್ರಕಟಿಸುವುದರ ಮೂಲಕ ಸಾಹಿತ್ಯದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿದೆ ಎಂದರು.

ಪ್ರೊ. ಚಂದ್ರಶೇಖರ ಅಕ್ಕಿಯವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ ಮೂಲಕ ಮೈಸೂರು ಇತಿಹಾಸದ ಮೇರು ಸಂಸ್ಥೆಯನ್ನು ವಿನಮ್ರವಾಗಿ ಸ್ಮರಿಸುವುದರ ಮೂಲಕ ಅದರ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕುವುದೇ ಆಗಿದೆ. ಕಸಾಪ ಇನ್ನೂ ಹಲವು ಬದಲಾವಣೆಗಳ ಮೂಲಕ ಸಾಹಿತ್ಯದಲ್ಲಿ ಅರ್ಥಪೂರ್ಣ ಮೈಲುಗಲ್ಲು ಸಾಧಿಸುತ್ತ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತಮ್ಮ ಆಶಯ ನುಡಿಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಗೌರವ ಕಾರ್ಯದರ್ಶಿ ಎಂ ವಾಯ್ ಮೆಣಸಿನಕಾಯಿ ಸ್ವಾಗತಿಸಿದರು. ಜ್ಯೋತಿ ಬದಾಮಿ ವಂದನಾರ್ಪಣೆ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷರ ಸಹಯೋಗ ಹಾಗೂ ರಾಮದುರ್ಗ ತಾಲೂಕಿನ ಅಧ್ಯಕ್ಷರಾದ ಪಾಂಡುರಂಗ ಜಟಗನ್ನವರ ನೇತೃತ್ವದಲ್ಲಿ ನಡೆಯಿತು.

ತಮಿಳುನಾಡಿನ ಕಸಾಪ ಅಧ್ಯಕ್ಷೆ ತಮಿಳ ಸೆಲ್ವಿ ಚಿಕ್ಕೋಡಿ ತಾಲೂಕಿನ ಶಿಕ್ಷಣ ಇಲಾಖೆಯ ರೇವತಿ ಹಿರೇಮಠ, ರಜನಿ ಜಿರಿಗ್ಯಾಳ, ಆಲಿಬಾದಿ, ಜಿಲ್ಲೆಯ, ರಾಜ್ಯದ ಸಾಹಿತಿಗಳು 75 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!