ಮೂಡಲಗಿ: ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಿದಾಗ ಅವರು ತೋರುವ ಪ್ರೀತಿ, ವಿಶ್ವಾಸ ಅತ್ಯಂತ ಅಮೂಲ್ಯವಾದದ್ದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ದುರ್ಗಾದೇವಿ ದೇವಸ್ಥಾನದ ಎದುರುಗಡೆ ನಿರ್ಮಿಸಲಾದ ಶೆಲ್ಟರ ಕಾಮಗಾರಿಯ ಉದ್ಗಾಟನೆ ನೆರವೇರಿಸಿ ಪರಿಶಿಷ್ಟ ಸಮುದಾಯ ಬಂಧುಗಳಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡಕುಟುಂಬಗಳಿಗೆ ಅನುಕೂಲವಾಗುವಂತೆ ಈ ಕಾಮಗಾರಿ ಮಾಡಲಾಗಿದೆ ಗ್ರಾಮದ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಬೈರನಟ್ಟಿ-ಸುಣಧೋಳಿ ರಸ್ತೆಗೆ ಬಸ್ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಗ್ರಾಮದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪ್ರಮುಖರಾದ ಪ್ರಕಾಶ ಮಾದರ, ಚಂದ್ರಪ್ಪ ಗಾಣಿಗೇರ, ಭೀಮಣ್ಣ ಹಟ್ಟಿಹೊಳಿ, ಶ್ರೀಶೈಲ ಮಾಲಿ, ಶಶಿಕಾಂತ ಬೆಣ್ಣಿ, ಮುರಗೆಪ್ಪ ಪಾಟೀಲ, ಬಸವರಾಜ ಗಾಣಿಗೇರ, ನಿಂಗಪ್ಪ ಕಮತೆ, ಚಂದ್ರಶೇಖರ ಗುಂಡೊಳ್ಳಿ, ನಾಗಪ್ಪ ಗಾಣಿಗೇರ, ಮಾರುತಿ ಹೊರಟ್ಟಿ, ತುಕಾರಾಮ ಮಾದರ, ದುರ್ಗಪ್ಪ ಮೇತ್ರಿ, ಉದ್ದಪ್ಪ ಮಾದರ, ಸುರೇಶ ಕಂಕಣವಾಡಿ, ಪರಸಪ್ಪ ಮಾದರ, ಯಲ್ಲಪ್ಪ ಮಾದರ, ಅಶೋಕ ಮಾದರ, ನಾಗಲಿಂಗ ಮಾದರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.