ದಿಟ್ಟ ಎಸ್ ಐ ಅನ್ನಪೂರ್ಣಾ ಆರೋಗ್ಯ ವಿಚಾರಿಸಿದ ಈರಣ್ಣ ಕಡಾಡಿ

0
80

ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದ ಹೆಮ್ಮೆ ಸುಪುತ್ರಿ ಪಿಎಸ್ಐ ಅನ್ನಪೂರ್ಣಾ ಮುಕ್ಕನ್ನವರ ಅವರು ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದ ಪಾತಕಿಯನ್ನು ತಮ್ಮ ಪ್ರಾಣದ ಹಂಗು ತೊರೆದು ಪಾತಕಿಯನ್ನು ಎನ್ ಕೌಂಟರ್ ನಲ್ಲಿ ಮಟ್ಟಹಾಕಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಶುಭ ಹಾರೈಸಿ, ಧೈರ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಘಟನೆ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘೋರವಾದ ಸಂಗತಿ. ಇಂತಹ ಘೋರ ಕೃತ್ಯಗಳು ಎಂದೆಂದಿಗೂ ನಡೆಯಬಾರದು ಮೃತ ಮಗುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಸಂತಾಪ ಸೂಚಿಸಿದ್ದಾರೆ.

ದುಷ್ಟ ಶಕ್ತಿಗಳನ್ನು ಮಟ್ಟಹಾಕಿದ ಮಹಿಳಾ ಎಸ್ ಐ ಅನ್ನಪೂರ್ಣ ಅವರಂಥ ಅಧಿಕಾರಿಗಳು ಇನ್ನೂ ಹೆಚ್ಚಾಗಬೇಕು ಎಂದು ಅವರು ಹಾರೈಸಿದರು

ಪ್ರಮುಖರಾದ ಬಸವರಾಜ ಹುಳ್ಳೇರ,ಶ್ರೀಶೈಲ ತುಪ್ಪದ,ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕರಿದ್ದರು

LEAVE A REPLY

Please enter your comment!
Please enter your name here