ಕಾದರವಳ್ಳಿ ಶ್ರೀಮಠದ ನುಡಿ ಸೇವೆ ಅನನ್ಯ – ವೇಬಿನಾರ್ ಉಪನ್ಯಾಸ ಮಾಲಿಕೆಯಲ್ಲಿ ಮಂಗಲಾ ಮೆಟಗುಡ್ ಅಭಿಮತ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ರವಿವಾರ ದಿ. 8 ರಂದು ಕ.ಸಾ.ಪ ತಾಲೂಕು ಘಟಕ ಕಿತ್ತೂರು ಮತ್ತು ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಹಮ್ಮಿಕೊಂಡ ವೇಬಿನಾರ್ ಉಪನ್ಯಾಸ ಮಾಲಿಕೆಯ ಆರನೇ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕವಿ ಸಿದ್ದರಾಮ ತಳವಾರ ಮಾತನಾಡಿ, ಮಠಗಳ ಸಂಪ್ರದಾಯದಲ್ಲಿ ಕಾದರವಳ್ಳಿಯ ಸೀಮಿ ಮಠ ಹಲವಾರು ಅವಧೂತರ, ಶರಣರ, ಶ್ರೀಗಳ ಆಶೀರ್ವಾದದ ಫಲವಾಗಿ ಇಲ್ಲಿ ಕನ್ನಡ ನುಡಿ ಸಾಹಿತ್ಯಕವಾಗಿ ಬೆಳೆದಿದೆ. 12ನೇ ಶತಮಾನದ ಶರಣರು ಈ ದಾರಿಯಲ್ಲಿ ಹಾದುಹೋಗುವಾಗ ವಚನಸಾಹಿತ್ಯದ ಕಂಪನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ ಅದರ ಪ್ರತೀಕವಾಗಿ ಓದು ಬರಹ ಬಾರದ ಅನಕ್ಷರಸ್ಥ ರಿಂದಲೂ ಸಹ ನುಡಿ ಕಟ್ಟಲಾಗಿದೆ ಇದು ಶ್ರೀಮಠದ ಪರಿಸರದ ಪ್ರಭಾವ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ದಾನೇಶ ಸಾಣಿಕೊಪ್ಪ ‘ ಕನ್ನಡ ಸಾಹಿತ್ಯಕ್ಕೆ ಕಾದರವಳ್ಳಿಯ ಸೀಮಿಮಠದ ಕೊಡುಗೆ’ ಕುರಿತು ಉಪನ್ಯಾಸದಲ್ಲಿ ಶ್ರೀಮಠ ನಡೆದು ಬಂದ ದಾರಿಯ ಕುರಿತು ವಿವರಣೆ ನೀಡುತ್ತಾ 12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯವನ್ನು ರಕ್ಷಿಸಿ ಉಳವಿಗೆ ಕೊಂಡೊಯ್ಯುವಾಗ ಕಾದರವಳ್ಳಿ ಯಲ್ಲಿ ತಂಗಿದ್ದರು. ಶರಣರು ನಡೆದಾಡಿದ ಇಲ್ಲಿ ಕ್ರಮೇಣವಾಗಿ ನುಡಿ ಸೇವೆ ಆರಂಭವಾಯಿತು. ಏನು ಕಲಿಯದ ಕೂಲಿಯವ ಸಹ ಇಲ್ಲಿ ವಚನವನ್ನು ಬಾಯಿಮಾತಿನಲ್ಲಿ ಹಾಡಲು ಕಲಿತ. ತದನಂತರದಲ್ಲಿ ಇಲ್ಲಿಯ ಶ್ರೀಗಳು ಹಂತಹಂತವಾಗಿ ಭಕ್ತ ಸಮೂಹಕ್ಕೆ ಹಿತೋಪದೇಶ ನೀಡಿದುದರ ಫಲವಾಗಿ, ಹಲವಾರು ಅವಧೂತರ ಸಂಪ್ರದಾಯದ ಫಲವಾಗಿ ಜನಮಾನಸದಲ್ಲಿ ಜಾನಪದ ಪದಗಳಲ್ಲಿ ಸಹ ನುಡಿ ಬೆಳೆಯುತ್ತಾ ಬಂತು. ಕಾದರವಳ್ಳಿಯ ಶ್ರೀಮಠದಲ್ಲಿ ಆಗಿಹೋದ ಎಲ್ಲಾ ಸ್ವಾಮೀಜಿಯವರು ಸಹ ನುಡಿಗಾಗಿ ತಮ್ಮದೇ ಆದ ಸೇವೆ ಮಾಡಿದರು. 12ನೇ ಶತಮಾನದಿಂದ ಅಂದರೆ ಸುಮಾರು ಎಂಟು ಶತಮಾನಗಳ ಕಾಲ ಇಲ್ಲಿ ಅನೇಕರು ಕನ್ನಡವನ್ನು ಬೆಳೆಸುವಲ್ಲಿ, ಅದು ಜನಪದ ಪದಗಳಲ್ಲಿ, ಆಡುವ ಪದಗಳಲ್ಲಿ, ಶ್ರೀಮಠದ ಮಂಗಳ ಪದಗಳಲ್ಲಿ ನಾವು ಕನ್ನಡವನ್ನು ಕಾಣಬಹುದು. ಶ್ರೀಮಠದ ವಿಶೇಷ ಮಂಗಳ ಪದಗಳು ಕಾದರವಳ್ಳಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಭಾಗಗಳಲ್ಲಿ ಶ್ರೀಸಾಮಾನ್ಯರು ಸಹ ಮಂಗಳ ಪದಗಳನ್ನು ಕಟ್ಟಿರುವುದನ್ನು ನಾವು ಕಾಣಬಹುದು. ಹೇಗೆ ನಾಡು-ನುಡಿಗಾಗಿ ಸಾಹಿತ್ಯಕವಾಗಿ ಅನೇಕ ವಿಭಾಗಗಳಲ್ಲಿ ಅನೇಕರು ಶ್ರೀಮಠದ ಪ್ರಭಾವದಿಂದ ಬೆಳೆದಿದ್ದಾರೆ ಎಂದು ಶ್ರೀಮಠದ ಕನ್ನಡ ಸಾಹಿತ್ಯಿಕ ಕೊಡುಗೆಯನ್ನು ವಿವರಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಮಂಗಲಾ ಮೆಟಗುಡ್ ಮಾತನಾಡಿ ಎಂಟು ಶತಮಾನಗಳ ಸೇವೆ ಅನನ್ಯ, ಇದರ ಇತಿಹಾಸವನ್ನು ಮತ್ತು ಇಲ್ಲಿನ ಆಗುಹೋಗುಗಳನ್ನು ಕೇಳಿ ತಿಳಿದುಕೊಂಡರೆ ಮೈ ರೋಮಾಂಚನವಾಗುತ್ತದೆ. ಮತ್ತು ನಿಜಕ್ಕೂ ಧನ್ಯತಾಭಾವ ಬಂದೊದಗುತ್ತದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಾದರವಳ್ಳಿ ಸೀಮಿಮಠದ ಡಾ. ಪಾಲಕ್ಷ ದೇವರು ಐತಿಹಾಸಿಕವಾಗಿ ನಡೆದುಬಂದ ಪರಂಪರೆ, ಭಕ್ತರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಫಲವಾಗಿ ಕನ್ನಡ ಸೇವೆ ಮುಂದುವರೆದಿದೆ ಎಂದು ಆಶೀರ್ವದಿಸಿದರು. ಕಾರ್ಯಕ್ರಮದ ಸಂಯೋಜಕರು ಮತ್ತು ಕಿತ್ತೂರು ಕ.ಸಾ.ಪ ಘಟಕದ ಅಧ್ಯಕ್ಷ ಶೇಖರ್ ಹಲಸಗಿ ಅವರು ಮಾತನಾಡಿ ಕಾದರವಳ್ಳಿ ಗ್ರಾಮ ತನ್ನದೇ ಆದ ಶರಣ ಪರಂಪರೆಯ ನಾಡು. ಇಲ್ಲಿ ಅನೇಕ ಮಹಾತ್ಮರು ಸಂತರು ಅವತರಿಸಿದ್ದಾರೆ. ಇಂತಹ ಒಂದು ಪುಣ್ಯಭೂಮಿಯಲ್ಲಿ ಶ್ರೀ ಮಠವು ಒಂದು ಅಪರೂಪದ ಮಠ. ಇಲ್ಲಿ 1938 ರಿಂದ ಸುಮಾರು 84 ವರ್ಷಗಳ ಪರ್ಯಂತ ‘ಜ್ಞಾನಯಜ್ಞ ಕುಂಭಮೇಳ ಸಪ್ತಾಹ’ ನಡೆಯುತ್ತಿರುವುದು ಮತ್ತೊಂದು ವಿಶೇಷ. ಈ ಒಂದು ಬ್ರಹ್ಮ ಸಭೆಯಲ್ಲಿ ನಾಡಿನ ಅನೇಕ ಸಾಧುಸಂತರು ಭಾಗವಹಿಸಿ ಮನುಕುಲದ ಉದ್ಧಾರಕ್ಕಾಗಿ ಆಧ್ಯಾತ್ಮವನ್ನು ಉಣಬಡಿಸಿದ್ದಾರೆ. ಕಲ್ಯಾಣದ ಪ್ರತಿರೂಪವಾಗಿ ಕಾದರವಳ್ಳಿಯಲ್ಲಿ ಪ್ರತಿ ಕಲ್ಯಾಣ ಮಾಡಿದ ಕೀರ್ತಿ ಸದ್ಗುರು ಅಪ್ಪ ಶಿವಯೋಗಿಗಳಿಗೆ ಸಲ್ಲುತ್ತದೆ.

ಈ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಕಾದರವಳ್ಳಿ ಗ್ರಾಮದ ವೈಭವ, ಕಲ್ಯಾಣದ ಪ್ರತಿರೂಪ, ಸಾಧು-ಸಂತರ ಸಂಗಮ, ಮಂಗಲಪದಗಳ ರಚನೆ, ಸಣ್ಣಾಟ, ಕರ್ನಾಟಕದ ಗಡಿಭಾಗಗಳ ಮಾಹಿತಿ , ಪ್ರಚಾರ ಬಯಸದ ಯೋಗಿಗಳು ಹೀಗೆ ಶ್ರೀಮಠದ ಹಲವು ವೈಶಿಷ್ಟ ಹಾಗೂ ಸಾಹಿತ್ಯಕವಾಗಿ ಬಂದ ಹಾದಿಯನ್ನು ವಿವರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಯ. ರು ಪಾಟೀಲ, ನಿರ್ಮಲ ಬಟ್ಟಲ, ವಿಜಯ ಬಡಿಗೇರ , ಗಂಗಾಧರ ಕೋಟಗಿ, ಮಲ್ಲಯ್ಯ ಸೀಮಿ ಮಠ, ಶಬನಾ ಅಣ್ಣಿಗೇರಿ, ಶ್ರೀಶೈಲ್ ಅಂಗಡಿ, ಉದಯ ಕುಲಕರ್ಣಿ, ಜಗದೀಶ್ ಪೂಜಾರಿ, ಮೋಹನ ಗೌಡ ಪಾಟೀಲ್, ರಜನಿ ಜಿರಾಗ್ಯಾಳ್, ಸುನಂದಾ ಎಮ್ಮಿ, ಶ್ರೀಕಾಂತ ದಳವಾಯಿ, ಹೇಮಾ ಸೊನೊಳ್ಳಿ, ಆನಂದ್ ಗೂಡುನವರ್, ಸುರೇಶ ಗಣಾಚಾರಿ, ಮೃತ್ಯುಂಜಯ ಗೌಡ, ನವೀನ್ ಇಳಿಗೆರ್, ಬಿ.ಎಸ್ ನಾಗಲಾಪುರ ರತ್ನಪ್ರಭಾ ಬೆಲ್ಲದ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಅನೇಕ ಸಾಹಿತ್ಯ ಆಸಕ್ತರು ಶ್ರೀಮಠದ ಭಕ್ತರು ಭಾಗವಹಿಸಿದ್ದರು. ಆರಂಭದಲ್ಲಿ ಪ್ರಕಾಶಗೌಡ ಪಾಟೀಲ್ ಸ್ವಾಗತಿಸಿದರು. ಕೊನೆಯಲ್ಲಿ ಜ್ಯೋತಿ ಬದಾಮಿ ವಂದಿಸಿದರು.

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!