- Advertisement -
ಸಿಂದಗಿ: ಎಸ್.ಟಿ.ಸಮುದಾಯದ ಏಳಿಗೆಗೆ ಬಳಕೆಯಾಗಬೇಕಿದ್ದ 187ಕೋಟಿ ರೂ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದು ಲೋಕಸಭೆ ಎಲೆಕ್ಷನ್‍ನಲ್ಲಿ ಮತದಾರಿಗೆ ಆಮಿಷವೊಡ್ಡಲು, ಮದ್ಯ ಹಂಚಲು ಬಳಸಿರುವುದು ಜಗಜ್ಜಾಹೀರಾಗಿದೆ. ಎಂದು ಎಸ್.ಟಿ.ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯಾದ್ಯಂತ ಇಷ್ಟೆಲ್ಲಾ ಹೋರಾಟಗಳು, ಆಕ್ರೋಶಗಳು ಮುಖ್ಯಮಂತ್ರಿಗಳ ವಿರುದ್ದ ವ್ಯಕ್ತವಾದರೂ ಖುರ್ಚಿಗೆ ಅಂಟಿಕೊಂಡು ಕುಳಿತು ದಲಿತ ವಿರೋಧಿ ಸರ್ಕಾರ ನಡೆಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಸಚಿವ ಬಿ.ನಾಗೇಂದ್ರ ಒಬ್ಬರನ್ನೆ ತಲೆದಂಡ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ. ಹಣಕಾಸು ಇಲಾಖೆಯನ್ನು ಕೂಡಾ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಈ ಪ್ರಕರಣಕ್ಕೆ ನೇರ ಹೊಣೆಗಾರಾಗುತ್ತಾರೆ ಕಾರಣ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.