ಬಸವ ತತ್ವದಂತೆ ಕಲ್ಯಾಣ ಮಹೋತ್ಸವ

Must Read

 

ಬನಹಟ್ಟಿ: ಪಂಚಮಸಾಲಿ ಸಮಾಜದ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ದೀಪಕ ಜುಂಜರವಾಡ ಅವರ ಕಲ್ಯಾಣ ಮಹೋತ್ಸವ ಬಸವ ತತ್ವದಂತೆ ಪುಷ್ಪವೃಷ್ಟಿ  ಮಾಡುವ ಮೂಲಕ ಸೋಮವಾರದಂದು ಬನಹಟ್ಟಿ ತಾಲೂಕಿನ ರಾಮಪುರದ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ನೆರವೇರಿತು.

ಧಾರವಾಡದ ಪರಮ ಪೂಜ್ಯಶ್ರೀ ಬಸವಾನಂದ ಮಹಾಸ್ವಾಮಿಗಳ ನೇತೃತ್ವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿ ಪೂಜ್ಯಶ್ರೀ ಬಸವೇಶ್ವರಿ ಮಾತಾಜಿ ಅವರ  ದಿವ್ಯಸಾನ್ನಿಧ್ಯದಲ್ಲಿ ಕಲ್ಯಾಣೋತ್ಸವ ಜರುಗಿತು.  

ಈ ಶುಭ ಸಮಾರಂಭದಲ್ಲಿ ತೇರದಾಳ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಪಂಚ ಸೇನೆ ರಾಜ್ಯಾಧ್ಯಕ್ಷರಾದ D S  ಪಾಟೀಲ (ನಾಗರಾಳ ಹುಲಿ), ಅಖಿಲ ಭಾರತ  ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮಪೀಠ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ  ಫಿರೋಜಿ, ಲಿಂಗಾಯತ ಕ್ರಾಂತಿ ಮಾಸ ಪತ್ರಿಕೆಯ ಸಂಪಾದಕರಾದ ಶಿವಾನಂದ ಮೇಟಿಹಾಳ, ಹಿರಿಯರು ಅನೇಕ ಸಮಾಜದ ಮುಖಂಡರು ಹಾಜರಿದ್ದರು.

Latest News

ತೆರಿಗೆಗಳ ಬಗ್ಗೆ ಎಲ್ಲರಲ್ಲಿ ಅರಿವು ಮುಖ್ಯ : ಪ್ರೊ. ಎಂ.ವಾಯ್. ಕಂಬಾರ

ಮೂಡಲಗಿ: ಸರಕು ಮತ್ತು ಸೇವಾ ತೆರಿಗೆ ಚೌಕಟ್ಟು ಭಾರತದಲ್ಲಿ ಜುಲೈ 1, 2017 ರಿಂದ ಜಾರಿಗೆ ಬಂದಿರುವ ಏಕರೂಪದ, ಗುರಿ-ಆಧಾರಿತ, ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ಇದು...

More Articles Like This

error: Content is protected !!
Join WhatsApp Group