spot_img
spot_img

ಮನೆ ಮನೆ ಕವಿಗೋಷ್ಠಿ ; “ಕಾಮನ ಬಿಲ್ಲು” ಪುಸ್ತಕ ವಿಶ್ಲೇಷಣೆ

Must Read

spot_img
- Advertisement -

ಹಾಸನ – ಮನೆ ಮನೆ ಕವಿಗೋಷ್ಟಿ ಹಾಸನ ಇವರ ವತಿಯಿಂದ 322 ನೇ ತಿಂಗಳ ಮನೆ ಮನೆ ಕವಿಗೋಷ್ಟಿ ಸಾಹಿತ್ಯ ಕಾರ್ಯಕ್ರಮ ಹಾಸನ ವಾಣಿ ವಿಲಾಸ ರಸ್ತೆಯ ಹಾಸನಾಂಬ ಥಿಯಾಸಾಫಿಕಲ್‌ ಸೊಸೈಟಿ ಕಟ್ಟಡದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಟಿ.ನಿರಂಜನಮೂರ್ತಿ ಅರಸೀಕೆರೆ ಇವರ ಕೃತಿ ‘ಕಾಮನ ಬಿಲ್ಲು’ ಕವನ ಸಂಕಲನ ಕುರಿತು ಲೋಕೇಶ್ ಬಿ.ಟಿ. ಉಪನ್ಯಾಸಕರು ಹೊಳೆನರಸೀಪುರ ವಿಮರ್ಶೆ ಮಾಡಿ ಮಾತನಾಡಿ,. ೫೦ ಕವನಗಳನ್ನು ಒಳಗೊಂಡ ಕಾಮನ ಬಿಲ್ಲು ಕವನ ಸಂಕಲನದಲ್ಲಿನ ಕವಿತೆಗಳ ವಸ್ತು ವಿಷಯ ಕವಿ ನಿರಂಜನಮೂರ್ತಿಗೆ ಕವನ ರಚಿಸಲು ಪ್ರೇರಣೆ ಕವಿಯ ಲೋಕಗ್ರಹಿಕೆ ತುಂಬಾ ಸೂಕ್ಷ್ಮವಾಗಿ ಕವನಗಳಲ್ಲಿ ನಿರೂಪಿತವಾಗಿದೆ. ಇಲ್ಲಿಯ ಕವನಗಳು ಹಲವು ವಿಭಿನ್ನ ವಸ್ತು ವಿಶೇಷತೆಯಿಂದ ಕೂಡಿವೆ. ಪರಿಸರ. ಕುಟುಂಬ. ಪ್ರಾಣಿ ಪ್ರಪಂಚ ಗುರು ಹಿರಿಯರು, ತಂದೆ ತಾಯಿ, ಮಹಾತ್ಮರು,  ಸ್ನೇಹ. ಪ್ರೀತಿ ಪ್ರೇಮ.ದಾಂಪತ್ಯ, ಹಬ್ಬ ಹರಿದಿನ, ಕರೋನಾ ಕಾಲದ ಸ್ಥಿತಿ ಗತಿ, ರೈತರ ಕುರಿತಾದದ್ದು, ಹುಟ್ಟು ಸಾವು, ಆಧುನಿಕತೆ ಹೀಗೆ ಹಲವು ವಸ್ತು ವಿಚಾರಗಳ ಕವನ ಸಂಕಲನವಾಗಿದೆ. ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಕವಿ, ಕಥೆಗಾರ ಲೇಖಕರಾಗಿ .ಸಮಾಜದ ಆಗು ಹೋಗುಗಳನ್ನು ತಮ್ಮ ಕಾವ್ಯದಲ್ಲಿ ಹೆಣೆದಿದ್ದಾರೆ. ಆಧುನಿಕ ಜಗತ್ತಿನ ಧಾವಂತದ ಬದುಕಿನಲ್ಲಿ ಮಾನವ ಜಗತ್ತು ಎದುರಿಸುತ್ತಿರುವ ಆತಂಕ ತಲ್ಲಣ ತಾಕಲಾಟಗಳು, ಸಂಬಂಧಗಳು ಜಾಗತೀಕರಣ ನಗರೀಕರಣ ನಾಗಾಲೋಟದಲ್ಲಿ ಓಡುತ್ತಿದೆ. ಸಮಾಜದಲ್ಲಿ ಸಂಬಂಧಗಳು ಮತ್ತವುಗಳ ಮೌಲ್ಯಗಳು ಹೇಗೆ ಕುಸಿಯುತ್ತಿವೆ ಅದನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಪಾತ್ರ ಜವಾಬ್ದಾರಿ ಹೆಚ್ಚಿನ ಮಹತ್ವ ಪಡೆದಿವೆ ಈ ಎಲ್ಲ ಅಂಶ ಕೃತಿಯಲ್ಲಿದೆ ಎಂದು ಲೋಕೇಶ್ ಬಿ. ಟಿ. ವಿಶ್ಲೇಷಿಸಿದರು.

ಕೃತಿಕಾರ ಟಿ.ನಿರಂಜನಮೂರ್ತಿ ತಮ್ಮ ಅನಿಸಿಕೆ ತಿಳಿಸಿ ತಮ್ಮ ಬಾಲ್ಯದ ದಿನಗಳನ್ನು ನೆನೆದು ಭಾವುಕರಾದರು. ಕವನಗಳಲ್ಲಿ ಗಟ್ಟಿತನ ಗೇಯತೆ ಅಗತ್ಯ ಎಂದರು.

- Advertisement -

ಎಲೆಮರೆ ಕಾಯಿಯಂತಿರುವ ಹೊಸ ಮುಖಗಳಿಗೆ ಈ ವೇದಿಕೆ ಅವಕಾಶ ಕಲ್ಪಿಸಿ ಮುನ್ನೆಲೆಗೆ ತರುವ ಪ್ರಯತ್ನ ಪ್ರಶಂಪಿಸಿದರು.

ಮನೆ ಮನೆ ಕವಿಗೋಷ್ಠಿ ಸಂಚಾಲಕರು ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಹೊಸ ಹೊಸ ಆಲೋಚನೆಗಳೊಂದಿಗೆ ಸಾಹಿತಿಗಳು. ಚಿತ್ರಕಲಾವಿದರು. ಗಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕವಿಗೋಷ್ಠಿಗೆ ಮೆರುಗು ನೀಡುವ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಬರಹಗಾರರ ಸಂಘದಿಂದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮುಂದಿನ ತಿಂಗಳು ನಡೆಯಲಿದೆ. ಮನೆ ಮನೆ ಕವಿಗೋಷ್ಠಿ ಸಂಘಟನೆ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಅವಕಾಶ ಕಲ್ಪಿಸಲು ಬಯಸಿದೆ. ಕವಿಗಳು ಕಾಯ೯ಕ್ರಮ ಪ್ರಾಯೋಜನೆ ಮಾಡಿ ತಮ್ಮ ಪುಸ್ತಕಗಳ ವಿಮಶೆ೯ ಮಾಡಲು ಸಹಕರಿಸಬೇಕೆಂದು ಕೋರಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಹೆಚ್. ಎನ್. ಭಾರತಿ, ಜೆ.ಆರ್.ರವಿಕುಮಾರ್, ಹೆಚ್. ಬಿ. ಗಿರಿಜಾ ನಿವಾ೯ಣಿ, ಜಿ. ಆರ್. ಶ್ರೀ ಕಾಂತ್, ದಿಬ್ಬೂರು ರಮೇಶ್, ಯೋಗೇಂದೃ ದುದ್ದ, ವಾಣಿ ಮಹೇಶ್. ಗಾೃರಂಟಿ ರಾಮಣ್ಣ ಕವಿತೆ ವಾಚಿಸಿದರು. ಗೊರೂರು ಆನಂತರಾಜು ಆವರ ಕವಿತೆಯನ್ನು
ಯೋಗೇಂದೃ ದುದ್ದ ಮತ್ತು ಸುಂದರೇಶ್ ಉಡುವೇರೆ ಅವರ ಕವಿತೆಯನ್ನು ದಿಬ್ಬೂರು ರಮೇಶ್ ರಾಗ ಸಂಯೋಜನೆ ಮಾಡಿ ಹಾಡಿದರು. ಮಂಜುಳ ಉಮೇಶ ರಂಗ ಗೀತೆ ಹಾಡಿದರು ನಿವೃತ್ತ ತಹಸೀಲ್ದಾರ್ ಎ. ವಿ. ರುದ್ರಾಪ್ಪಾಜಿರಾವ್,ನಟ ಗೊರೂರು ಪ್ರಕಾಶ್, ಲೇಖಕರು ವಿಶ್ವಾಸ್ ಡಿ. ಗೌಡ, ಸುಂದರೇಶ್ ಉಡುವೇರೆ, ಚಿತ್ರ ಕಲಾವಿದರು ಶಿವಕುಮಾರ್ ಆರ್. ಬಸವರಾಜ್, ಯೋಗಾನುದ ಹೆಚ್. ಎನ್. ಯಾಕೂಬ್ ಇದ್ದರು.

- Advertisement -

ಕವಿ ನಿರಂಜನಮೂತಿ೯ ಆರಸೀಕೆರೆ ಮತ್ತು ವಿಮಶ೯ಕ ಲೋಕೇಶ್ ಬಿ. ಟಿ. ಇವರು ಗಳನ್ನು ಸನ್ಮಾನ ಮೂಲಕ ಗೌರವಿಸಲಾಯಿತು.

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group