ಸಿಂದಗಿ: ಕನಕದಾಸರು ಕೀರ್ತನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಕನ್ನಡ ಭಾಷೆಯಲ್ಲಿ ರಚಿಸಿ, ಎಲ್ಲಾ ಕಾಲಘಟ್ಟಕ್ಕೂ ಸಲ್ಲುವಂತೆ ಮಾಡಿದ್ದಾರೆ ಎಂದು ಉಪನ್ಯಾಸಕ ನಿಂಬೆಣ್ಣ ಪೂಜಾರಿ ಹೇಳಿದರು.
ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಕನಕದಾಸರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರಲ್ಲಿ ಕನಕದಾಸರು ಒಬ್ಬರು. 15-16ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಾಗಿದ್ದರು. ಇವರು ಆಧುನಿಕ ಕರ್ನಾಟಕದ ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಂಯೋಜಕರಾಗಿದ್ದು, ಕೀರ್ತನೆ ಮತ್ತು ಉಗಾಭೋಗಕ್ಕೆ ಹೆಸರುವಾಸಿಯಾಗಿದ್ದಾರೆ ಎಂದರು.
ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಅವರು, ಕನಕದಾಸರು ಮನುಕುಲದ ಕಲ್ಯಾಣಕ್ಕಾಗಿ ತತ್ವ, ಸಿದ್ಧಾಂತಗಳು ಮತ್ತು ಚಿಂತನಶೀಲ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ಪ್ರಸಿದ್ಧರಾಗಿದ್ದರು. ದಾಸ ಸಾಹಿತ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ತಮ್ಮ ಕಾವ್ಯದಲ್ಲಿ ಅರ್ಥವಾಗುವಂತಹ ಸಾಮಾನ್ಯ ಭಾಷೆಯನ್ನು ಬಳಸಿದರು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಬಿ.ಎಂ.ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ, ಬಿ.ಬಿ.ಜಮಾದಾರ, ಶಿವಶರಣ ಬೂದಿಹಾಳ, ಎಸ್.ಎಚ್.ಜಾಧವ, ಎಸ್.ಸಿ.ಜೋಗೂರ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ಗವಿಸಿದ್ದಪ್ಪ ಆನೆಗುಂದಿ, ಶಿವರಾಜ ಕುಂದಗೋಳ, ವಿಶ್ವನಾಥ ನಂದಿಕೋಲ, ಆರ್.ಎಂ.ಕೊಳ್ಳೂರೆ, ಎನ್.ಬಿ.ಪೂಜಾರಿ, ರಾಜಶ್ರೀ ಗಾಣಗೇರ್, ಜೆ.ಎಂ.ಗಾಣಗೇರ್, ಅಡಿವೆಪ್ಪಾ ದಸ್ಮಾ, ಚಂದ್ರು ಬಬಲೇಶ್ವರ್, ಎಸ್.ಜಿ.ಮಾರ್ಸನಳ್ಳಿ, ಚಂದ್ರಕಾಂತ ರಾಠೋಡ, ಸುನೀಲ ನಾಟೀಕಾರ, ಐ.ಎಸ್.ಶಿವಸಿಂಪಿಗೇರ್ ಸೇರಿದಂತೆ ಇನ್ನಿತರರು ಇದ್ದರು.