spot_img
spot_img

ಕರ್ನಾಟಕ ರಾಜ್ಯ ದಸಂ ಸ ವತಿಯಿಂದ  ಕನಕದಾಸ ಜಯಂತಿ ಆಚರಣೆ

Must Read

ಸಿಂದಗಿ: ಕನಕದಾಸರು  ತಮ್ಮ ಲೌಕಿಕ  ಜೀವನದಿಂದ ಅಧ್ಯಾತ್ಮ ಜೀವನಕ್ಕೆ ಸಾಗುವ ಮಾರ್ಗ ತೋರಿಸಿ ಕುಲಗಳ ಹೆಸರಿನಲ್ಲಿ ಬಡಿದಾಡುವುದನ್ನು ಬಿಟ್ಟು ಮನು ಕುಲಕ್ಕೆ ಸಮಾನತೆ ಸಾರಿದ ಮಹಾನ್ ದಾರ್ಶನಿಕರು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ  ವೈ ಸಿ ಮಯೂರ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ  ಪಟ್ಟಣದಲ್ಲಿ ಭಕ್ತ ಶ್ರೇಷ್ಠ ಕನಕದಾಸರ 535 ನೇ ಜಯಂತ್ಯುತ್ಸವ ನಿಮಿತ್ತ ಕನಕದಾಸರ ಪ್ರತಿಭೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿ ಸಂತ ಶ್ರೇಷ್ಠ ಕನಕದಾಸರ ಕೀರ್ತನೆ ಹಾಗೂ ವಚನಗಳು ದೇಶಕ್ಕೆ ಮಾದರಿ ದಾಸರ ವಚನಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜಾತಿ ಜಾತಿಗಳಲ್ಲಿ ದಿನನಿತ್ಯ ನಡೆಯುವ ಜಗಳಗಳನ್ನು ತೊಲಗಿಸಲು ಪಣತೊಟ್ಟ ಕನಕದಾಸರು “ಕುಲ ಕುಲವೆಂದು ಹೊಡದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ” ಎನ್ನುವ ವಚನದ ಮೂಲಕ ಸಾರಿ ಹೇಳಿ ಸರ್ವ ಧರ್ಮ ಸಮಾಜದ ಬಾಂಧವರು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂದು ತಮ್ಮ  ಕೀರ್ತನೆ ಹಾಗೂ ವಚನದ ಮೂಲಕ ತಿಳಿ ಹೇಳಿ ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆಗೆ ಜಾತಿ ಎಂದೂ ತೊಡಕಾಗುವುದಿಲ್ಲ ಎನ್ನುವುದಕ್ಕೆ ಕನಕದಾಸರ ಜೀವನ ಒಂದು  ಉದಾಹರಣೆ ಎನ್ನಬಹುದು ಎಂದರು.

ಈ ಸಂದರ್ಭದಲ್ಲಿ ದ.ಸಂ.ಸ ತಾಲೂಕ ಸಂಚಾಲಕ ಶರಣು ಚಲವಾದಿ, ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕ ಸುನೀಲ ಸುಂಗಠಾಣ, ಪದಾಧಿಕಾರಗಳಾದ ಜೈ ಭೀಮ ತಳಕೇರಿ, ಮುತ್ತು ಮಲಘಾಣ, ಪ್ರಕಾಶ ಹಜೇನವರ, ಪ್ರಮೋದ ಬರಗಲ, ರವಿ ಹಿಪ್ಪರಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!