spot_img
spot_img

ಕನ್ನಡ ಅಮೃತ ಸಮಾನವಾದ ಭಾಷೆ – ಪ್ರೊ. ಶಿವಕುಮಾರ ಕೋಡಿಹಾಳ

Must Read

ಮೂಡಲಗಿ – “ ಕನ್ನಡನಾಡು ಸುಂದರ ಕಲೆಗಳ ಬೀಡು; ದಾಸವರೇಣ್ಯರ ನೆಲೆವೀಡು. ಅಂತಹ ನೆಲದಲ್ಲಿ ವಾಸಿಸುವ ನಾವೆಲ್ಲಾ ಪುಣ್ಯವಂತರು. ಇಂದು ಕನ್ನಡ ನಾಡು ಒಂದಾಗಲು ನಮ್ಮ ಹಿರಿಯ ಕರ್ನಾಟಕದ ಜನತೆ ಕಾರಣೀಭೂತರು. ಅವರ ಶ್ರಮದ ಫಲವೇ ನಾವಿಂದು ರಾಜ್ಯೋತ್ಸವವನ್ನು ಆಚರಿಸಲು ಅವಕಾಶವಾಗಿದೆ. ಕನ್ನಡ ಉಳಿವಿಗಾಗಿ ನಾವೆಲ್ಲಾ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ನೀಡಿ ಓದಿಸೋಣ ಅದರ ಸಂಸ್ಕೃತಿ ಹಿರಿಮೆಯನ್ನು ಹೆಚ್ಚಿಸೋಣ” ಎಂದು ಪ್ರೊ. ಶಿವಕುಮಾರ ಕೋಡಿಹಾಳ ಅವರು ಕರೆ ನೀಡಿದರು.

ಅವರು ಸ್ಥಳೀಯ ಶ್ರೀಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ೨೦೨೨ ನೇ ಸಾಲಿನ ೬೭ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಕರ್ನಾಟಕ ಏಕೀಕರಣ ಮಾಡಿದ ಮಹಾನ್ ನಾಯಕರ ಹಾಗೂ ಅದರ ಇತಿಹಾಸವನ್ನು ಪ್ರತಿಯೊಬ್ಬ ಕನ್ನಡಿಗನು ಅರಿತುಕೊಳ್ಳಬೇಕು. ಕನ್ನಡದ ಉಳಿವಿಗಾಗಿ ನಾವು ಬಲಿದಾನವನ್ನು ಮಾಡಬೇಕು ಮನೆ ಮನೆಗಳಲ್ಲಿ ಕನ್ನಡದ ಕೀರ್ತಿ ಬೆಳಗಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕು. ಕನ್ನಡ ಅಮೃತ ಸಮಾನವಾದ ಬಾಷೆ. ಅದರ ಸವಿಯನ್ನು ಮಾತನಾಡಿಯೇ ಸವಿಯಬೇಕು. ಓದಿ ಆನಂದಿಸಬೇಕು ಆಗ ಅದರ ಬೆಲೆ ತಿಳಿಯುತ್ತದೆ. ಇಂದು ಕನ್ನಡಿಗರು ಮತ್ತೊಮ್ಮೆ ಭಾಷೆಯ ಉಳಿವಿಗಾಗಿ ಹೋರಾಡುವ ಪರಸ್ಥಿತಿ ಬಂದಿದೆ. ಅದನ್ನು ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡೋಣ ನಾಡಿಗಾಗಿ ಸೇವೆ ಸಲ್ಲಿಸೋಣ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿ.ಎ ಎರಡನೇ ವರ್ಷದ ವಿದ್ಯಾರ್ಥಿನಿ ಅರ್ಪಿತಾ ಮಳವಾಡ ನಾಡು-ನುಡಿಯ ಬಗ್ಗೆ ಅದ್ಭುತವಾಗಿ ಭಾಷಣ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅದೇ ರೀತಿ ಶ್ರೀಧರ ಪರೀಟ್ ಅವರು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡನ್ನು ಹಾಡಿ ಮೈ ರೋಮಾಂಚನಗೊಳಿಸಿದರು. ಜಯಶ್ರೀ ಮದಿಹಳ್ಳಿ ಕನ್ನಡ ತಾಯಿಗೆ ಕರನಾಡ ತಾಯಿ ಸದಾ ಚಿನ್ಮಯಿ ಹಾಡಿನ ಮೂಲಕ ಗೌರವ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಸ್.ಡಿ. ಗಾಣಿಗೇರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ ಕನ್ನಡ ನುಡಿಯೆಂಬುದು ಚಿನ್ನದ ನುಡಿ ಅದನ್ನು ದಿನನಿತ್ಯ ಬಳಸಿ ನಾವು ಚಿನ್ನದಂತಾಗೋಣ ಜೊತೆಗೆ ಕನ್ನಡವನ್ನು ಸರಿಯಾಗಿ ಕಲಿತು ಬಳಸಬೇಕು. ತಪ್ಪು ಉಚ್ಛಾರದಿಂದ ಕನ್ನಡದ ಮಾನ ಹೋಗುತ್ತದೆ. ಗಡಿನಾಡ ಜಿಲ್ಲೆಗಳಲ್ಲಿನ ಗ್ರಾಮಗಳಲ್ಲಿ ಕನ್ನಡ ಅಳಿಸುವ ಪ್ರಯತ್ನ ನಡೆಯುತ್ತಿದೆ ಅದಕ್ಕೆ ಅವಕಾಶ ನೀಡದಂತೆ ಗಡಿನಾಡ ಕನ್ನಡಿಗರಾದ ನಾವು ಅನೇಕ ಕನ್ನಡ ಕಟ್ಟುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಮ್ಮ ಕನ್ನಡ ಉಳಿಸಿ ಬೆಳೆಸೋಣ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್., ಕ್ರೀಡಾ ಸಂಯೋಜಕರಾದ ಡಾ.ರವಿ ಗಡದನ್ನವರ, ಹಿರಿಯ ಪ್ರಾಧ್ಯಾಪಕರಾದ ಬಿ.ಎಸ್.ಕೆಸರಗೊಪ್ಪ, ಶಿವಾನಂದ ಚಂಡಕೆ, ಶ್ರೀಮತಿ ಶಿವಲೀಲಾ ಎಚ್, ಸಾಂಸ್ಕೃತಿಕ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ, ಎನ್.ಎಸ್.ಎಸ್ ಸಂಯೋಜಕರಾದ ಸಂಜೀವ ಮದರಖಂಡಿ , ಆರ್.ಆಯ್. ಆಸಂಗಿ, ರೆಡ್ ಕ್ರಾಸ್ ಸಂಯೋಜಕರಾದ ಬಿ.ಎಸ್.ನಾಯಿಕ, ಹನುಮಂತ ಕಾಂಬಳೆ, ಶ್ರೀಮತಿ ಶೀತಲ ತಳವಾರ, ಶ್ರೀಮತಿ ಗಾಯತ್ರಿ ಸಾಳೋಖೆ, ರಾಧಾ ಎಂ. ಎನ್. , ಎಸ್.ಎಂ. ನದಾಫ್, ನಂದೀಶ ಕರಾಳೆ ಹಾಗೂ ಎಲ್ಲಾ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಜ್ಯೋತಿ ನಾಗಣ್ಣವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಚೇತನ್ ರಾಜ್ ಬಿ ಸ್ವಾಗತಿಸಿದರು. ನಿಂಗಪ್ಪ ಸಂಗ್ರೇಜಕೊಪ್ಪ ವಂದಿಸಿದರು. ಬಿ.ಸಿ.ಹೆಬ್ಬಾಳ ನಿರೂಪಿಸಿದರು.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!