spot_img
spot_img

Bengaluru: ಕನ್ನಡ ಮತ್ತು ಸಂಸ್ಕೃತಿಗೆ ಇಲಾಖೆಗೆ ಡಾ. ಬರಗೂರು ಸಮಿತಿಯ ನೀತಿ ಜಾರಿಗೆ ತರಲು ಒತ್ತಾಯ

Must Read

spot_img
- Advertisement -

ಮು ಮಂ ಸಿದ್ಧರಾಮಯ್ಯ ಅವರಿಗೆ ಪತ್ರ.


ಬೆಂಗಳೂರು
: ಹಿಂದಿನ ಬಿಜೆಪಿ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ, ಸಂಘ ಸಂಸ್ಥೆಗಳಿಗೆ ಧನ ಸಹಾಯ ಕ್ರಮ ಅತ್ಯಂತ ದೋಷ ಪೂರಿತವಾಗಿದ್ದು ಗೊಂದಲದ ಗೂಡಾಗಿದೆ. ಅದನ್ನು ಕೈಬಿಟ್ಟು ತಮ್ಮ ಹಿಂದಿನ ಸರಕಾರದ ಅವಧಿಯಲ್ಲಿ ಅನುಸರಿಸಿದ ಕ್ರಮವನ್ನೇ ಅನುಸರಿಸಲು ಸಂಬಂಧಪಟ್ಟ ಸಚಿವರಿಗೆ ಮತ್ತು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟ (ರಿ) ಬೆಂಗಳೂರು ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.

ಪತ್ರವೊಂದನ್ನು ಬರೆದಿರುವ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಅವರು, ನಾಡು ನುಡಿ, ಕಲೆ-ಸಂಸ್ಕೃತಿ ಸೇವೆ ಮಾಡಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದ ಸಂಘ ಸಂಸ್ಥೆಗಳಿಗೆ ಸರಕಾರವು ನೀಡುವ ಧನ ಸಹಾಯದ ಮೊತ್ತದಲ್ಲಿ ತಾರತಮ್ಯವಾಗಿದ್ದು, ಬಹುಸಂಖ್ಯೆಯಲ್ಲಿ ಸಂಘ ಸಂಸ್ಥೆಗಳಿಗೆ ಧನ ಸಹಾಯ ಲಭಿಸಿರುವುದಿಲ್ಲ. ಸಹಾಯ ಧನ ಬಿಡುಗಡೆಗೆ ಮುನ್ನ ಮೂರು ಕಾರ್ಯಕ್ರಮ ಆಯೋಜಿಸಲು ಹೇಳಿ, ಮೂರು ಕಾರ್ಯಕ್ರಮ ಸಂಘಟಿಸದೇ ಇದ್ದರೂ ಸಹಿತ ತಾವೇ ಮಾಡಿದ ನಿಯಮಾವಳಿ ಗಾಳಿಗೆ ತೂರಿ, ಧನ ಸಹಾಯ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

- Advertisement -

ಹಿಂದಿನ ಬಿ.ಜೆ.ಪಿ. ಸರಕಾರದ ದೋಷಪೂರಿತ ನಿಯಮಾವಳಿಯಿಂದ ಅನೇಕ ಸಂಘ ಸಂಸ್ಥೆಗಳಿಗೆ ಅನ್ಯಾಯವಾಗಿದೆ. ಧನ ಸಹಾಯದ ತಾರತಮ್ಯ ನೀತಿಯನ್ನು ಪತ್ರಿಕೆಗಳು ಸರಕಾರದ ಗಮನ ಸೆಳೆದರೂ ಯಾವುದೇ ಕ್ರಮಜರುಗಿಸಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದ ಹಿಂದಿನ ಸರಕಾರದ ಅವಧಿಯಲ್ಲಿ ಡಾ. ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀತಿ ರೂಪಿಸಲು ಸಮಿತಿ ರಚನೆ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿಯೂ ಬದಲಾವಣೆ ಮಾಡುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದನ್ನು ಸಂಘ ಸಂಸ್ಥೆಗಳು ಸ್ವಾಗತಿಸಿದ್ದವು ಕೂಡಾ. ಕಾರಣ, ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ಸ್ವರೂಪ ಕೊಟ್ಟು ಪ್ರಾಮಾಣಿಕ ಮತ್ತು ಸೇವಾ ಹಿರಿತನದ ಸಂಸ್ಥೆಗಳ ಹಿತರಕ್ಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ಒಕ್ಕೂಟವು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಬರೆದಿದ್ದಾರೆ.

ನೀತಿ ನಿರೂಪಣೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಆಗುವ ಅನ್ಯಾಯ ಪ್ರಾದೇಶಿಕ ತಾರತಮ್ಯ ಮತ್ತು ಧನ ಸಹಾಯ ಪಡೆಯುವುದಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆಗಳ ಗುರುತಿಸುವಿಕೆಯಲ್ಲಿ ಆಗುತ್ತಿರುವ ಲೋಪಗಳ ಕುರಿತು, ತಾವು ಬಯಸಿದರೆ ನಮ್ಮ ಒಕ್ಕೂಟವು ಸಲಹೆ ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group