ಕನ್ನಡ ಜಾಗೃತಿ ಸಮಿತಿ ಸಭೆ ; ಹಲವು ನಿರ್ಣಯಗಳಿಗೆ ಅನುಮೋದನೆ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಮೈಸೂರು – ಕನ್ನಡ ಕಾಯಕ ವರ್ಷದ ಅನುಷ್ಠಾನಕ್ಕಾಗಿ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಸಹಾಯಕ ನಿರ್ದೇಶಕರಾದ ಹೆಚ್ . ಚನ್ನಪ್ಪ ಅವರು ಆಹ್ವಾನಿಸಿದ್ದ ಸಭೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾದ ಡಾ.ಗುಬ್ಬಿಗೂಡು ರಮೇಶ್ ಅವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ವೈ.ಡಿ ರಾಜಣ್ಣ ಅವರ ಉಪಸ್ಥಿತಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ

ಅರವಿಂದ್ ಶರ್ಮ , ಸೌಗಂಧಿಕಾ ವಿ ಜೋಯಿಸ್ ,ಸಾತನೂರು ದೇವರಾಜ್ , ಎನ್.ಜಿ ಗಿರೀಶ್ , ಡಾ.ಮುಳ್ಳೂರು ನಂಜುಂಡಸ್ವಾಮಿ ,
ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಭೇರ್ಯ ರಾಮಕುಮಾರ್ , ಡಾ.ವಿನೋದಮ್ಮ , ಡಾ.ಎಂ.ಜಿ.ಆರ್ ಅರಸ್ ರವರು ಭಾಗವಹಿಸಿದ್ದರು.

ಸಭೆಯಲ್ಲಿ ಸದಸ್ಯರು ಚರ್ಚಿಸಿ ಅನುಮೋದಿಸಿದ ವಿಷಯಗಳು ಈ ಕೆಳಕಂಡಂತೆ ಇವೆ.

ಕನ್ನಡಪರ ವರದಿಗಳ ಕುರಿತು ಕಾರ್ಯಾಗಾರ

- Advertisement -

ಮೈಸೂರು , ಮಂಡ್ಯ , ಹಾಸನ , ಚಾಮರಾಜನಗರ , ಮಡಿಕೇರಿ ೫ ಜಿಲ್ಲೆಗಳ ಕನ್ನಡ ಚಳವಳಿಗಾರರನ್ನು ಆಹ್ವಾನಿಸಿ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆಯ ಒಂದು ದಿನದ ಕಾರ್ಯಾಗಾರ ಎಪ್ರಿಲ್‌ ತಿಂಗಳಿನಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲು ಡಾ.ಗುಬ್ಬಿಗೂಡು ರಮೇಶ್ ಅವರು ನಿರ್ಧರಿಸಿ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಕನ್ನಡ ಹೋರಾಟಗಾರರಿಗೆ ಕನ್ನಡದ ವರದಿಗಳ ಅನುಷ್ಠಾನದ ಕೈಪಿಡಿ ಕೊಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪ್ರತಿ ತಿಂಗಳಲ್ಲಿ ೧೫ ದಿನಕ್ಕೆ ಒಮ್ಮೆ ಜಿಲ್ಲಾ ಹಾಗೂ ನಗರ ಕನ್ನಡ ಜಾಗೃತಿ ಸಮಿತಿ ಸದಸ್ಯರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರೊಡನೆ ಮೈಸೂರು ಜಿಲ್ಲಾ ಮತ್ತು ನಗರದ ಕೇಂದ್ರ ಸರ್ಕಾರಿ ಕಚೇರಿ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಡತಗಳಲ್ಲಿನ ಕನ್ನಡ ಬಳಕೆಯ ಪರಿಶೀಲನೆಗೆ ನಿರ್ಧರಿಸಲಾಗಿ ಒಪ್ಪಿಗೆ ನೀಡಿ ತೀರ್ಮಾನಿಸಲಾಯಿತು.

ಹಿರಿಯ ಸಾಹಿತಿಗಳಾದ ಪ್ರೊ.ಎಚ್ಚೆಸ್ಕೆ,ಡಾ.ಸಿ.ಪಿ.ಕೆ.,
ಡಾ.ಸಿ.ಜಿ.ಪುರುಷೋತ್ತಮ್,ಚದುರಂಗ ಹಿರಿಯ ಚಿತ್ರ ನಿರ್ಮಾಪಕರಾದ ಪುಟ್ಟಣ್ಣ ಕಣಗಾಲ್,ಹುಣಸೂರು ಕೃಷ್ಣ ಮೂರ್ತಿ ಇವರುಗಳ ಜನ್ಮ ಸ್ಥಳಗಳ ( ಹುಟ್ಟಿದ ಊರಿನ ) ಪ್ರಮುಖ ರಸ್ತೆ ಅಥವಾ ವೃತ್ತವೊಂದಕ್ಕೆ ಈ ಗಣ್ಯರ ಹೆಸರು ನಾಮಕರಣ ಮಾಡುವ ಮೂಲಕ ಈ ಗಣ್ಯರಿಗೆ ಗೌರವ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಅವರು ಚರ್ಚಿಸಲಾಗಿ ಅದನ್ನು ಅನುನೋದಿಸಲಾಯಿತು.

ತಾಂತ್ರಿಕ ಕಾಲೇಜು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡ ಅನುಷ್ಠಾನ ಕುರಿತು ಸದಸ್ಯರು ಚರ್ಚಿಸಿದ್ದು ಇದರ ವಿಚಾರವಾಗಿ ಡಾ.ಗುಬ್ಬಿಗೂಡು ರಮೇಶ್ ಅವರು ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಕನ್ನಡ ಬೋಧನೆಗೆ ಅವಕಾಶವಿದ್ದು ವೈದ್ಯಕೀಯ ಮತ್ತು ಇತರೆ ವೃತ್ತಿಪರ ಶಿಕ್ಷಣದಲ್ಲಿ ಕನ್ನಡವನ್ನು ಬೋಧಿಸಲು ತಾಂತ್ರಿಕ ನಿರ್ದೇಶನಾಲಯಗಳು ಹಾಗೂ ವೈದ್ಯಕೀಯ ಶಿಕ್ಷಣ ಮಂಡಳಿಗೆ ಒತ್ತಾಯಿಸಲು ಕಳೆದ ಗುರುವಾರ ರಾಜ್ಯ ಮಟ್ಟದ ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನಿಸಿದೆ ಎಂದು ತಿಳಿಸಿದರು.

ನಗರದ ಆಧಾರ್ ಸೇವಾ ಕೇಂದ್ರಗಳಲ್ಲಿ ಶ್ರೀ ಸಾಮಾನ್ಯರಿಗೆ ಅನುಕೂಲವಾಗುವಂತೆ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆ ಇಲ್ಲದ ಕಾರಣ ಸಭೆಯಲ್ಲಿ ಪ್ರಸ್ತಾಪಿಸಲಾಯಿತು ಇದು ಬರಿ ಮೈಸೂರಿನ ಸಮಸ್ಯೆಯಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಆಧಾರ್ ಕೇಂದ್ರದಲ್ಲಿ
ಕಡ್ಡಾಯವಾಗಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗುಬ್ಬಿಗೂಡು ರಮೇಶ್ ಅವರು ತಿಳಿಸಿದರು.

ತಾಲೂಕು ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಕುರಿತು ಹಕ್ಕೊತ್ತಾಯ ಸಲ್ಲಿಕೆಗೆ ಭೇಟಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಪೂರ್ಣ ಕನ್ನಡ ಅನುಷ್ಠಾನಕ್ಕಾಗಿ ಕೇಂದ್ರೀಯ ವಿದ್ಯಾಲಯ , ಪ್ರಾಯೋಗಿಕ ವಿದ್ಯಾಲಯ. , ಎನ್.ಸಿ.ಆರ್.ಟಿ.ಸಿ ಗಳಲ್ಲಿ ಕನ್ನಡದ ಬೋಧನೆ ಬಗ್ಗೆ ಗಮನ ಸೆಳೆಯಲು ಚರ್ಚಿಸಿದ್ದು ಸಭೆಯಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಲು ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಮೈಸೂರು ಮಹಾನಗರ ಪಾಲಿಕೆಯಲ್ಲಿನ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ೨೫-೦೧-೨೦೨೧ ರಂದು ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆಯ ೯ ವಲಯ ಕಚೇರಿಯ ಮುಂದೆ “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂದು ನಾಮಫಲಕ ಹಾಕಲು ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರ ಒತ್ತಾಯದ ಮೇಲೆ ಮಾನ್ಯ ಹೆಚ್ಚುವರಿ ಆಯುಕ್ತರಾದ ಎನ್.ಎಂ ಶಶಿಕುಮಾರ್ ಅವರು ಈಗಾಗಲೇ ಅದೇಶ ಹೊರಡಿಸಿದ್ದು. ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ಇದೇ ರೀತಿ “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂದು ಹಾಕಲು ಅದೇಶ ಹೊರಡಿಸಲು ಸದಸ್ಯರು ಒತ್ತಾಯಿಸಿದಾಗ ಸಹಾಯಕ ನಿರ್ದೇಶಕರು ಅದಕ್ಕೆ ಜಿಲ್ಲಾಡಳಿತಕ್ಕೆ ಗಮನಕ್ಕೆ ತಂದು ಅನುಮೋದನೆ ನೀಡುವುದಾಗಿ ತಿಳಿಸಿದರು.

ಮೈಸೂರಿನಲ್ಲಿರುವ ಪ್ರವಾಸಿ ತಾಣಗಳಲ್ಲಿ ಅಷ್ಟಾಗಿ ಕನ್ನಡದ ಬಳಕೆ ಇಲ್ಲದಿರುವುದು ಕಂಡು ಬಂದಿದ್ದು ಅಲ್ಲಿಗೆ ಭೇಟಿ ನೀಡಲು ಹಾಗೂ ಕೇಂದ್ರ ಸರ್ಕಾರಿ ಇಲಾಖೆ , ರಾಜ್ಯ ಸರ್ಕಾರಿ ಇಲಾಖೆ , ಶಿಕ್ಷಣ ಸಂಸ್ಥೆ ,ವಾಣಿಜ್ಯ ಮಳಿಗೆ ( ನಗರದ ಮಾಲ್ ಗಳು ) , ಬ್ಯಾಂಕ್ ಗಳಿಗೆ ಭೇಟಿ ನೀಡಲು ತೀರ್ಮಾನಿಸಲಾಯಿತು

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!