spot_img
spot_img

ಹಾರ ತುರಾಯಿ ಬದಲು ಕನ್ನಡ ಪುಸ್ತಕ ಉತ್ತಮವಾದ ಬದಲಾವಣೆ

Must Read

spot_img
- Advertisement -

ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡೋ ರಾಜಕೀಯ ಮಾಧ್ಯಮಗಳು ಮಾಡದಿದ್ದರೆ ಉತ್ತಮ. ಪ್ರತಿಯೊಂದರಲ್ಲೂ ಮಧ್ಯೆ ನಿಂತು

ವಾದವಿವಾದ ಮಾಡುತ್ತಿದ್ದರೆ ಬದಲಾವಣೆ ಆಗೋದೆ ಇಲ್ಲ. ಸರ್ಕಾರದ ವಿರುದ್ದ ನಿಂತು ವಿರೋಧಪಕ್ಷ ಕಟ್ಟಿ ಎಷ್ಟೋ ಪಕ್ಷಗಳು ಈಗ ಅತಂತ್ರಸ್ಥಿತಿಗೆ ಬಂದಿದೆ. ದೇಶದ ಸಮಸ್ಯೆಗೆ ಪರಿಹಾರ ಸೂಚಿಸಿ ಸಹಕಾರ ನೀಡುವ ಧರ್ಮ ಪ್ರಜೆಗಳದ್ದಾಗಿತ್ತು.

ಆದರೆ ನಡೆದದ್ದೇ ಬೇರೆ ಸರ್ಕಾರ ಬೀಳಿಸಿ ಮನರಂಜನೆಯಲ್ಲಿರೋದೆ ದೊಡ್ಡ ಸಾಧನೆ. ಇದರಿಂದಾಗಿ ಯಾರಿಗೆ ಲಾಭ ? ನಷ್ಟ ಕಷ್ಟ ಹೆಚ್ಚಾದರೂ ಅದಕ್ಕೂ ಸರ್ಕಾರ ಹೊಣೆ ಎಂದರೆ ಇಲ್ಲಿ ಸರ್ಕಾರ ಎಂದರೆ ನಮ್ಮ ಸಹಕಾರ. ಎಲ್ಲಿಯವರೆಗೆ ನಮ್ಮ ಸಹಕಾರ ಧರ್ಮ ಹಾಗು ಸತ್ಯದ ಪರವಿರುವುದಿಲ್ಲವೋ ಅಲ್ಲಿಯವರೆಗೆ ಉತ್ತಮ ಬದಲಾವಣೆ ಸಾಧ್ಯವಿಲ್ಲ.

- Advertisement -

ಸಂಘ ಸಂಸ್ಥೆಗಳು ನಡೆದಿರೋದೆ ಸರ್ಕಾರದ ಹಣದಲ್ಲಿ. ಇದರಿಂದಾಗಿ ಜನಸಾಮಾನ್ಯರಿಗೆ ಏನು ಉಪಯೋಗವಿಲ್ಲವಾದರೆ ಅದನ್ನು ವಜಾ ಮಾಡಬಹುದು. ಮಕ್ಕಳು ಮಹಿಳೆಯರನ್ನು ಹೊರಗೆಳೆದು ಸನ್ಮಾನ,ಹಾರ,ತುರಾಯಿಗಳ ಮೂಲಕ ಸಮಾರಂಭದಲ್ಲಿ ಸನ್ಮಾನ ಮಾಡಿ ತಮ್ಮ ಹೆಸರು,ಹಣ,ಅಧಿಕಾರ ಹೆಚ್ಚು ಮಾಡಿಕೊಳ್ಳಬಹುದು.

ಆದರೆ ಇದರಲ್ಲಿ ಯಾರಿಗಾದರೂ ಸುಜ್ಞಾನ ಬಂದರೆ ಉತ್ತಮ. ಇಲ್ಲವಾದರೆ ಅದಕ್ಕೆ ಸಂಬಂಧಿಸಿದ ಪುಸ್ತಕದಾನ ಮಾಡುವುದು ಸರಿಯಾದ ಕ್ರಮ. ಆದರೆ, ಪುಸ್ತಕದಲ್ಲಿಯೂ ಕೇವಲ ಹೆಸರು, ಹಣ, ಅಧಿಕಾರವುಳ್ಳವರದ್ದೇ ರಾಜಕೀಯ ಬೆರೆತರೆ ಯಾವಪ್ರಯೋಜನವಿಲ್ಲ. ಒಟ್ಟಿನಲ್ಲಿ ಸರ್ಕಾರ ಚಾಪೆ ಕೆಳಗೆ ನುಸುಳಿದರೆ ಭ್ರಷ್ಟರು ರಂಗೋಲಿಕೆಳಗೆ ನುಸುಳಿ ತಮ್ಮ ಕೆಲಸ ಮಾಡುತ್ತಾರೆ.

ಆದರೆ ಇಬ್ಬರೂ ಭೂಮಿ ಮೇಲೆ ಇದ್ದು ಭೂಮಿಯ ಸಾಕ್ಷಿಯಿಂದ ತಪ್ಪಿಸಿಕೊಳ್ಳಲು ಅಸಾಧ್ಯ. ಜ್ಞಾನವನ್ನು ಪುಸ್ತಕ ಓದುವುದರಿಂದ ಹೆಚ್ಚಿಸಿಕೊಳ್ಳಬಹುದು.ಓದಿದ್ದನ್ನು ಅಳವಡಿಸಿಕೊಂಡಾಗಲೆ ನಿಜವಾದ ಭೂಮಿಗೆ ಕೊಡುವ ಸನ್ಮಾನವಾಗುತ್ತದೆ. ಪುಸ್ತಕದ ವಿಚಾರ ಮಸ್ತಕಕ್ಕೆ ಹಾಕಿಕೊಂಡು ಪ್ರಚಾರಕರಾಗಿ ಮಧ್ಯೆ ನಿಂತರೆ ಹೃದಯದವರೆಗೆ ಹೋಗದೆ ನಿಂತ ನೀರಾಗುತ್ತದೆ. ನಿಂತ ನೀರು ಸ್ವಚ್ಚವಿರದು. ಸ್ವಚ್ಚಭಾರತಕ್ಕೆ ಸ್ವಚ್ಚಜ್ಞಾನದ ಪುಸ್ತಕಗಳ ಅಗತ್ಯವಿದೆ.

- Advertisement -

ಸ್ವಚ್ಚಜ್ಞಾನದಲ್ಲಿ ಅನುಭವ ಸತ್ಯ ಇರುತ್ತದೆ.ಸ್ವಾವಲಂಬನೆ, ಸ್ವಾಭಿಮಾನ, ಸ್ವತಂತ್ರ ಸತ್ಯ ಇರುವುದರಿಂದ ಇದರಿಂದ ಸಾತ್ವಿಕತೆ ಹೆಚ್ಚುತ್ತದೆ. ‍ಇದನ್ನು ಹೊರಗಿನ ಎಲ್ಲಾ ಸಂಘಟನೆಗಳೂ ಅನುಸರಿಸಿ ಕಾರ್ಯಕ್ರಮದಲ್ಲಿ ದೇಶರಕ್ಷಣೆ, ಧರ್ಮರಕ್ಷಣೆ, ಮಾನರಕ್ಷಣೆ,ಪ್ರಾಣರಕ್ಷಣೆ, ಸತ್ಯರಕ್ಷಣೆ,ಸ್ತ್ರೀ ರಕ್ಷಣೆ ಆಗೋವಂತಹ ಪುಸ್ತಕಗಳನ್ನು ಬಿಡುಗಡೆ ಮಾಡಿ ಉತ್ತಮ ವಿಚಾರದಿಂದ ಆತ್ಮರಕ್ಷಣೆ ಕಡೆಗೆ ನಡೆದರೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಕೇವಲ ಊಟ,ಉತ್ಸವ,ಉಪಚಾರ,ಸನ್ಮಾನಕ್ಕಾಗಿ ಕಾರ್ಯಕ್ರಮ ನಡೆಸಲು ಹಣ ಬೇಡಬೇಕು.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group