ನವಿಲು ಗರಿಯಂತೆ ತಾಕುವ ಗಜಲ್ ಗಳು!

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲೀಗ ಹೊಸ ಹೊಸ ದನಿಗಳು ಕೇಳಿ ಬರುತ್ತಿವೆ.ಪ್ರೀತಿ,ವಿರಹ, ಮಡುಗಟ್ಟಿದ ನೋವು,ಮಧುರ ಯಾತನೆ, ವಿಪ್ರಲಂಭದಂತಹ ಖಾಸಗಿ ಸಂಗತಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ರೂಪದ ಮೂಲಕ ಈ ಕಾಲಮಾನದ ಕೋಲಾಹಲಗಳಿಗೂ ಅವರು ಮಿಡಿಯುತ್ತಿದ್ದಾರೆ. ಇದು ಸಂತೋಷದ ಸಂಗತಿ. ವಿಷಾದದ ಸಂಗತಿಯೆಂದರೆ ಬಹುಪಾಲು ಗಜಲ್ ಕವಿಗಳು ಆಕೃತಿಯನ್ನಷ್ಟೇ ಮುನ್ನೆಲೆಗೆ ತಂದು ಶಾರೀರವನ್ನು ಹಿಂದಕ್ಕೆ ಸರಿಸುತ್ತಿರುವುದು . ಆದರೆ ಈ ಆತಂಕವನ್ನು ಅನಸೂಯ ಜಹಗೀರದಾರರ ‘ ಆತ್ಮಾನುಸಂಧಾನ ‘ ಸಂಕಲನ ಇಡಿಯಾಗಿ ತಳ್ಳಿ ಹಾಕುವಂತಿದೆ.

ಇಲ್ಲಿ ಅರವತ್ತು ಗಜಲ್ ಗಳಿವೆ. ಗಜಲುಗಳ ಉದ್ದಕ್ಕೂ ಒಲವಿನ ಬಿಸುಪು , ಮದಿರೆಯ ಘಮಲು , ಬದುಕಿನ ಸೊಬಗು ತೆರೆದುಕೊಂಡಿದೆ.

ಇದರೊಂದಿಗೆ ಜನಸಾಮಾನ್ಯರ ಪಾಡು, ಪ್ರಗತಿಪರ ಆಶಯ, ಮಾನವತೆ, ಸಹಬಾಳ್ವೆ ,ಸಾಮರಸ್ಯದಂತಹ ಸಾಮಾಜಿಕ ಮತ್ತು ಮಹಿಳಾ ಸಂವೇದನೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಹೊಸ ಬದುಕಿನ ಹುಡುಕಾಟ , ಆದರ್ಶದ ಹಂಬಲಗಳಿವೆ.ಸಹಜಾನುಭವಗಳ ಅವರ ಅಭಿವ್ಯಕ್ತಿ ಕ್ರಮ ಸಂಯಮದಿಂದ ಕೂಡಿದೆ.ಜಗತ್ತಿನ ಕೇಡಿನ ಗ್ರಹಿಕೆ ,ಆಲೋಚನಾ ವಿಧಾನ, ಬಹುತ್ವದ ಚಿಂತನೆಯಂತಹ ಹಲವು ಪರಿಕರಗಳನ್ನು ಈ ಸಂಕಲನ ನೀಡಿದೆ.ರೂಪಕ , ಗೇಯಾತ್ಮಕ ಗುಣ, ಹೊಸನುಡಿಗಟ್ಟು , ಸೂಕ್ಷ್ಮತೆಗಳನ್ನು ದುಡಿಸಿಕೊಂಡ ಬಗೆಯಿಂದಾಗಿ ಈ ಕವಯಿತ್ರಿಯ ಗಜಲ್ ಯಾನದ ದಾರಿ ನಿಚ್ಚಳವಾಗಿರುವುದು ಕಂಡು ಬರುತ್ತದೆ. ಇಲ್ಲಿನ ಕೆಲವು ಗಜಲುಗಳು ನವಿಲು ಗರಿಯಂತೆ ತೀವ್ರವಾಗಿ ತಾಕಿ ಕಾಡುವಂತಿವೆ ಎನ್ನುವುದೇ ಸಂಕಲನದ ಧನಾತ್ಮಕ ಅಂಶ. ಈ ರೂಪದಲ್ಲಿ ಅನಸೂಯ ಜಹಗೀರದಾರ ಅವರ ಹೆಜ್ಜೆಗಳು ಇನ್ನಷ್ಟು ಗಟ್ಟಿಯಾಗಿ ಊರಲಿ.ಅವರಿಂದ ಇನ್ನೂ ಹತ್ತಾರು ಕೃತಿಗಳು ಬರಲಿ ಎಂದು ಆಶಿಸುವೆ.

ಅನಸೂಯ ಜಹಗೀರದಾರ ಪರಿಚಯ

- Advertisement -

ಹಿಂದುಸ್ತಾನಿ ಸಂಗೀತ ಕಲಾವಿದೆ ಮತ್ತು ಕವಯತ್ರಿ. ಸ. ಪ್ರೌಢ ಶಾಲಾ ಶಿಕ್ಷಕರು, ಕನ್ನಡ ಪರ ವಿವಿಧ ಸಂಘಟನೆಗಳಲಿ ಪದಾಧಿಕಾರಿ, ಅಧ್ಯಕ್ಷರು ಕ.ರಾ. ಸ.ನೌ. ಸಂಘ ಜಿಲ್ಲಾ ಘಟಕ – ನಾಮ ನಿರ್ದೇಶಿತ ಕಾರ್ಯಕಾರಿ ಸಮಿತಿ ಸದಸ್ಯರು.

ಕಾವ್ಯ ಕೃತಿಗಳು

– ಒಡಲ ಬೆಂಕಿ,

ಆತ್ಮಾನುಸಂಧಾನ ( ಗಜಲ್ ) ನೀಹಾರಿಕೆ ( ಹನಿಗವಿತೆ)

ಕಥಾಸಂಕಲನ –

ಪರಿವರ್ತನೆ

ಪ್ರಶಸ್ತಿ ಪುರಸ್ಕಾರ: ಡಾ.ಡಿ. ಎಸ್. ಕರ್ಕಿ ರಾಜ್ಯ ಕಾವ್ಯ ಪ್ರಶಸ್ತಿ ( ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನ. ಬೆಳಗಾವಿ)

ಕಾವ್ಯಶ್ರೀ ಪ್ರಶಸ್ತಿ ( ಕಸ್ತೂರಿ ಸಿರಿಗನ್ನಡ ಬಳಗ ಮಂಡ್ಯ)

ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ ( ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು. ಜಿಲ್ಲಾ ಘಟಕ ಶಿವಮೊಗ್ಗ)

“ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ(ಕೊಪ್ಪಳ ಜಿಲ್ಲಾಡಳಿತ)

ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ

ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ದೆ

ಮೆಚ್ಚುಗೆ ಬಹುಮಾನ.

ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ ( ಕರ್ನಾಟಕ ಸರ್ಕಾರ ೨೦೦೭)

೮೧ ನೆಯ ಅ ಭಾ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಪುಸ್ತಕ ಪ್ರಾಧಿಕಾರ, ಕ. ಸಾ ಅಕಾಡೆಮಿ ಕವಿಗೋಷ್ಠಿಗಳಲ್ಲಿ ಕವನ ವಾಚನ, ಚಾಲುಕ್ಯ ಉತ್ಸವ, ಧಾರವಾಡ ಉತ್ಸವ, ಆನೆಗೊಂದಿ ಉತ್ಸವ, ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ, ರಾಯಚೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ, ರಾ ಜಿ ಸಾ ಸಮ್ಮೇಳನ , ಕವಿಗೋಷ್ಠಿಗಳಲ್ಲಿ ಕವನ ವಾಚನ. ರಾಯಚೂರು, ಕಲಬುರ್ಗಿ, ಆಕಾಶವಾಣಿ ಕಾರ್ಯಕ್ರಮ. ( ಸುಗಮ ಸಂಗೀತ, ಕವನ ವಾಚನ, ಮತ್ತು ಯುವವಾಣಿ ಕಾರ್ಯಕ್ರಮಗಳು) .


(ಲೇಖಕರು ಕವಿಗಳು ಬರಹಗಾರರು ಮತ್ತು ಗಜಲ್ಕಾರರು)

ದಸ್ತಗೀರಸಾಬ್ ದಿನ್ನಿ
ಪ್ರಾಚಾರ್ಯರು. ಸ ಪ್ರ ದರ್ಜೆ ಪದವಿ ಕಾಲೇಜು.
ರಾಯಚೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!