ಸೈರಿಸು ಮನವೇ
- Advertisement -
ಸೈರಿಸು ಮನವೇ ಸೈರಿಸು
ಜೀವನದ ಜೋಕಾಲಿ
ಜೀಕು ನೀ ಸುವ್ವಿ ಸುವ್ವಾಲಿ ಇರಲಿ ಮೊದಲು ನಿಧಾನ
ಸಿಗುವುದು ನಿನಗೆ ಸಮಾಧಾನ
ಅವಸರವೇಕೆ ಮನವೇ
ತಡೆದುಕೊಂಡಷ್ಟು ಇದೆ ಸುಖಕರ
ತಣ್ಣನೆಯ ಗಾಳಿ ಹಿತಕರ
ನೀ ಜೊತೆಗಿದ್ದರೆ ಎಲ್ಲಿಯ ಭಯ
ಇರಲಿ ನಮ್ಮ ಮೇಲೆ ದೇವರ ಅಭಯ
ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ
ಅಲ್ಲಿದೆ ನೋಡು ಒಲವಿನ ಚಿತ್ತಾರ
ಶುಭ್ರ ಬಿಳಿ ಮೋಡಗಳ ನೀಲಾಕಾಶ
ಮತ್ತೆ ಮತ್ತೆ ಸಿಗದು ಈ ಅವಕಾಶ
ಸೈರಿಸು ಮನವೇ ಸೈರಿಸು
ಮುಕ್ತಾ. ಎಸ್. ಪಶುಪತಿ
ಮುನವಳ್ಳಿ 591117.
ಸವದತ್ತಿ ತಾಲೂಕು. ಬೆಳಗಾವಿ ಜಿಲ್ಲೆ