ಸಿಂದಗಿ: ಇಂದು ಮೊಬೈಲ್ ವೀಕ್ಷಣೆಯಿಂದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿ ಶೈಕ್ಷಣಿಕ ಗುಣಮಟ್ಟ ಕುಸಿದಿದೆ ಕಾರಣ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ಪ್ರೇರೇಪಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎನ್.ಬಗಲಿ ಹೇಳಿದರು.
ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕನ್ನಡ ಉಪನ್ಯಾಸಕರ ಬಳಗ ವಿಜಯಪುರ ಹಾಗೂ ಪವಿವ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕನ್ನಡ ಉಪನ್ಯಾಸಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರೀಕ್ಷಾ ಸಮಯದಲ್ಲಿ ಯಾವ ರೀತಿಯಾಗಿ ಬರೆದರೆ ಅಂಕ ಗಳಿಸಬಹುದು ವಿಷಯ ವಿಶ್ಲೇಷಣೆ ಹೇಗೆ ಮಾಡಬೇಕು, ಪ್ರಬಂಧಗಳನ್ನು ಯಾವ ರೀತಿ ವಿವರಣೆ ನೀಡಬೇಕು ಎನ್ನುವುದನ್ನು ಮನವರಿಕೆ ಮಾಡಿ, ನಿತ್ಯ ಭೋಧನೆ ಮಾಡುವ ಭೋಧಕರು ವಿಷಯವನ್ನು ಕರಗತ ಮಾಡಿಕೊಂಡು ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ವಿಮಲಕಾಂತ ಪಾಟೀಲ, ಅತಿಥಿಗಳಾಗಿ ಪಪೂಶಿಇ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ನಿವೃತ್ತ ಉಪನ್ಯಾಸಕ ವ್ಹಿ.ಡಿ.ವಸ್ತ್ರದ, ಕನ್ನಡ ಉಪನ್ಯಾಸಕರ ಬಳಗದ ಅಧ್ಯಕ್ಷ ಕೆ.ಜಿ.ಲಮಾಣಿ, ಗೌರವಾಧ್ಯಕ್ಷ ಡಿ.ಆರ್.ಮಳಖೇಡ, ಮಹಾದೇವ ರೆಬಿನಾಳ, ಗುಳೇದಗುಡ್ಡದ ನಿವೃತ್ತ ಪ್ರಾಚಾರ್ಯ ಎಸ್.ಬಿ.ಬರಗುಂಡಿ ಮಾತನಾಡಿದರು.
ಉಪನ್ಯಾಸಕರಾದ ಸುಬಾಷ ಹೊಸಮನಿ, ವ್ಹಿ.ಕೆ ಹಿರೇಮಠ, ಎಂ.ಐ.ಮುಜಾವರ, ಸಂಗಮೇಶ ಚಾವರ, ಬಿ.ಬಿ.ಜಮಾದಾರ, ಎಸ್.ಆರ್.ರೆಬಿನಾಳ, ಎಸ್.ಜಿ.ಮಾರ್ಸನಳ್ಳಿ, ಎಂ.ಎಸ್.ಕಿರಣಗಿ, ಎನ್.ಎಂ.ಶೆಳ್ಳಗಿ ಸೇರಿದಂತೆ 110 ಉಪನ್ಯಾಸಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಸಂಯೋಜಕ ಬಿ.ಎಂ.ಸಿಂಗನಳ್ಳಿ ಸ್ವಾಗತಿಸಿ ಪರಿಚಯಿಸಿದರು. ಕುಮಾರಿ ಬೋರಮ್ಮ ಹಾಗೂ ಭಾಗ್ಯಶ್ರೀ ಪ್ರಾರ್ಥನಾ ಗೀತೆ ಹಾಡಿದರು. ಪಿ.ವ್ಹಿ.ಮಹಲಿನಮಠ ನಿರೂಪಿಸಿದರು. ಉಪನ್ಯಾಸಕ ಪ್ರಸನ್ನ ಜೋಗೂರ ವಂದಿಸಿದರು.